Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

---Advertisement---

ಮಾಜಿ ಶಾಸಕ ಗೂಳಿಹಟ್ಟಿ ಶೇಖರ್ ಮತ್ತೊಂದು ಆಡಿಯೋ ವೈರಲ್ : ಡಿಸಿ, ಶಾಸಕರ ವಿರುದ್ಧ ಫುಲ್ ಗರಂ

---Advertisement---

ಸುದ್ದಿಒನ್, ಚಿತ್ರದುರ್ಗ, ಜನವರಿ.15 : ಮಾಜಿ ಶಾಸಕ ಗೂಳಿಹಟ್ಟಿ ಅವರದ್ದೇ ಎನ್ನಲಾದ ಮತ್ತೊಂದು ಆಡಿಯೋ ವೈರಲ್ ಆಗಿದೆ. ಆ ಆಡಿಯೋದಲ್ಲಿ ಗೂಳಿಹಟ್ಟಿ ಶೇಖರ್ ಅವರು ಜಿಲ್ಲಾಧಿಕಾರಿ ದಿವ್ಯಪ್ರಭು ಹಾಗೂ ಹೊಸದುರ್ಗ ಶಾಸಕರ ವಿರುದ್ಧ ಗರಂ ಆಗಿದ್ದಾರೆ. ಈ ಆಡಿಯೋ ಸಿಕ್ಕಾಪಟ್ಟೆ ವೈರಲ್ ಆಗುತ್ತಿರುವುದರ ಜೊತೆಗೆ ಚರ್ಚೆಗೆ ಗ್ರಾಸವಾಗಿದೆ.

ನಾನು ಆಡಳಿತ ಪಕ್ಷದ ಶಾಸಕನಾಗಿದ್ದಾಗ ನನಗೆ ಸಾಕಷ್ಟು ಕಿರಿಕಿರಿ ಕೊಟ್ಟಿದ್ದಾರೆ. ಪ್ರತಿ ಹೆಜ್ಜೆ ಹೆಜ್ಜೆಗೆ ಸಾಕಷ್ಟು ತೊಂದರೆ ಕೊಟ್ಟಿದ್ದಾರೆ. ಆದರೆ ಈಗ ನಾನು ಹಾಗೆ ಮಾಡುತ್ತಿಲ್ಲ. ನಮ್ಮ ಹುಡುಗನನ್ನು ಪೊಲೀಸರು ಹೊಡೆದು ಹೊಡೆದು ಸಾಯಿಸಿದರು. ಹಿಂದೆ ಲೇಔಟ್ ಗೆಲ್ಲಾ ಮಣ್ಣು ಹೊಡೆದಿದ್ದರು. ಡಿಸಿ ದಿವ್ಯಾ ಮೇಡಂ ತುಂಬಾ ಸ್ಟ್ರಿಕ್ಟ್ ಎಂದಿದ್ದಾರೆ.

ಡಿಸಿ ಬಗ್ಗೆ ಮಾತನಾಡಿರುವ ಮಾತುಗಳಲ್ಲಿ, ಡಿಸಿ ದಿವ್ಯ ಮೇಡಂ ಅವರಿಗೆ ಹೊಸದುರ್ಗದಿಂದ ಫೋನ್ ಮಾಡಿ ದೂರು ನೀಡುತ್ತಿದ್ದರು. ಡಿಸಿ ಮೇಡಂ ಸ್ಟ್ರಿಕ್ಟ್ ಆಫೀಸರ್. ದೂರು ಕೊಟ್ಟ ಮೇಲೆ ಅಲ್ಲಿಂದ ಕಳುಹಿಸಿ, ಕೇಸ್ ಮಾಡಿಸಿದರು. ಲೇಔಟ್ ಗಳಿಗೆ ಈಗಲೂ ಮಣ್ಣು ಹೊಡೆಯುತ್ತಿದ್ದಾರೆ. ಆದರೆ ಡಿಸಿ ಮೇಡಂಗೆ ಒಂದೇ ಒಂದು ಟ್ರ್ಯಾಕ್ಟರ್ ಹಿಡಿಸುವುದಕ್ಕೂ ಆಗುತ್ತಿಲ್ಲ ಎಂಬ ಮಾತುಗಳು ಆಡಿಯೋದಲ್ಲಿ ಕೇಳಿ ಬರುತ್ತಿದೆ. ಈಗಾಗಲೇ ಈ ಆಡಿಯೋ ಎಲ್ಲೆಡೆ ವೈರಲ್ ಆಗಿದೆ.

ಹಿಂದೆ ನಾವಿದ್ದಾಗ ಹೇಗೆ ಸ್ಟ್ರಿಕ್ ಮಾಡುತ್ತಿದ್ದಿರೋ ಈಗಲೂ ಹಾಗೇ ಮಾಡಿ. ಸಾಧ್ಯವಾದರೆ ಮಾಡಿ, ಇಲ್ಲಾಂದ್ರೆ ಆಡಳಿತ ಪಕ್ಷದವರ ಜೊತೆ ಹೊಂದಿಕೊಂಡು ಹೋಗುವುದಾದರೆ ನಮ್ಮದೇನು ಅಭ್ಯಂತರವಿಲ್ಲ ಎಂದಿದ್ದಾರೆ.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment

🏫 ಅಡ್ಮಿಷನ್ ಓಪನ್
🔒

ಇಂಡಿಯನ್ ಇಂಟರ್ ನ್ಯಾಷನಲ್ ಸ್ಕೂಲ್

ಸ್ವಾಗತ...