ಸಿಎಂ ಬಗ್ಗೆ ಅನಂತ್ ಕುಮಾರ್ ಹೆಗ್ಡೆ ಹೇಳಿಕೆ : ಅವನೊಬ್ಬ ಹುಚ್ಚ ಎಂದ ಸಚಿವ ಆಂಜನೇಯ

1 Min Read

ಚಿತ್ರದುರ್ಗ : ಲೋಕಸಭಾ ಚುನಾವಣೆ ಸಮೀಪಿಸುತ್ತಿದ್ದಂತೆ, ವಿಪಕ್ಷ ನಾಯಕರೆಲ್ಲಾ ಕಾಂಗ್ರೆಸ್ ಮೇಲೆ ಮುಗಿಬಿದ್ದಿದ್ದಾರೆ. ಅದರಲ್ಲೂ ಸಾಕಷ್ಟು ದಿನಗಳಿಂದ ಸೈಲೆಂಟ್ ಆಗಿದ್ದ ಅನಂತ್ ಕುಮಾರ್ ಹೆಗಡೆ ಅವರು ಕೂಡ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಅನಂತ್ ಹೆಗಡೆ ಅವರ ಮಾತನ್ನು ಬಿಜೆಪಿ ನಾಯಕ ವಿ ಸೋಮಣ್ಣ ಕೂಡ ವಿರೋಧಿಸಿದ್ದಾರೆ. ಕಾಂಗ್ರೆಸ್ ನಾಯಕರು ಸಹ ಅವರ ಮಾತುಗಳನ್ನು ಖಂಡಿಸಿದ್ದಾರೆ.

ಚಿತ್ರದುರ್ಗದಲ್ಲಿ ಮಾತನಾಡಿದ ಮಾಜಿ ಸಚಿವ ಹೆಚ್ ಆಂಜನೇಯ, ಅನಂತ್ ಕುಮಾರ್ ಹೆಗ್ಡೆ ಅವನೊಬ್ಬ ಹುಚ್ಚ. ಅನಂತ ಕುಮಾರ್‌ ಒಬ್ಬ ಹುಚ್ಚ. ಹುಚ್ಚರ ಬಗ್ಗೆ ಮಾತಾಡ್ತಾರಾ?. ಅವನ ಬಗ್ಗೆ ಮಾತಾಡಲ್ಲ. ಅವನ ಬಗ್ಗೆ ಮಾತಾಡಿ ದೊಡ್ಡವನನ್ನಾಗಿಸಿದಂತೆ ಆಗುತ್ತದೆ’ ಎಂದು ಏಕವಚನದಲ್ಲೇ ವಾಗ್ದಾಳಿ ನಡೆಸಿದರು. ರಾಮರಾಜ್ಯದ ಕನಸು ಅನಾವರಣ ಮಾಡಿ ಕಾರ್ಯರೂಪಕ್ಕೆ ತಂದವರು. ಜನ ಮೆಚ್ಚಿದ ಸಿದ್ಧರಾಮಯ್ಯ ಬಗ್ಗೆ ಹಗುರವಾಗಿ ಮಾತಾಡ್ತಾನಲ್ಲ, ಅವನು ಮನುಷ್ಯನಾ ಎಂದು ಆಕ್ರೋಶ ಹೊರ ಹಾಕಿದ್ದಾರೆ.

ಇದೆ ವೇಳೆ ಮುನಿಸ್ವಾಮಿ ವಿರುದ್ದವೂ ಕಿಡಿಕಾರಿದ್ದು, ಕಾಂಗ್ರೆಸ್ ಸರ್ಕಾರ ಹಿಂಧೂ ಧರ್ಮ, ಶ್ರೀರಾಮನ ವಿರೋಧಿ ಎಂಬ ಬಿಜೆಪಿ ಸಂಸದ ಮುನಿಸ್ವಾಮಿ ಹೇಳಿಕೆಗೆ ಪ್ರತಿಕ್ರಿಯೆ ನೀಡಿ, ಬಹಳಷ್ಟು ಜನ ಹಿಂದೂಗಳಿರುವುದೇ ಕಾಂಗ್ರೆಸ್ ಪಕ್ಷದಲ್ಲಿ. ಹಿಂದೂ ಧರ್ಮ, ರಾಮ ಪೂಜೆ ಮಾಡುವವರು ಹೆಚ್ಚಿರುವುದು ಕಾಂಗ್ರೆಸ್ ಪಕ್ಷದಲ್ಲಿ. ರಾಮನ ಹೆಸರಿನಲ್ಲಿ ಮತಕ್ಕಾಗಿ ಮಾರ್ಕೆಂಟಿಂಗ್ ಮಾಡುವವರು ಕಾಂಗ್ರೆಸ್ಸಿಗರಲ್ಲ ಎಂದರು.

ಅಯೋಧ್ಯೆಯಲ್ಲಿ ಇದೇ ತಿಂಗಳ 22ಕ್ಕೆ ರಾಮಮಂದಿರ ಉದ್ಘಾಟನೆಯಾಗಲಿದೆ. ಆದರೆ ಕಾಂಗ್ರೆಸ್ ನವರು ಹೋಗುತ್ತಿಲ್ಲ. ಈ ಬಗ್ಗೆ ಮಾತನಾಡಿ, ಕೋಟ್ಯಾಂತರ ಕಾಂಗ್ರೆಸ್ಸಿಗರ ಹೃದಯದಲ್ಲಿ ರಾಮನಿದ್ದಾನೆ. ಆಂಜನೇಯನ ಹೃದಯದಲ್ಲಿ ರಾಮನಿದ್ದಂತೆ ಕಾಂಗ್ರೆಸ್ಸಿಗರ ಹೃದಯದಲ್ಲಿ ರಾಮ. ನಾವು ರಾಮನ ವಿರೋಧಿ ಅಲ್ಲ, ಹಿಂದೂಗಳ ವಿರೋಧಿ ಅಲ್ಲ. ಹಿಂದೂಗಳ ಪರ, ಮುಸ್ಲಿಂರ ಪರ ಎಲ್ಲಾ ಧರ್ಮಗಳ ಜನರ ಪರವಿದ್ದೇವೆ ಎಂದು ಮಾಜಿ ಸಚಿವ ಆಂಜನೇಯ ತಿಳಿಸಿದರು.

Share This Article
Leave a Comment

Leave a Reply

Your email address will not be published. Required fields are marked *