ನವದೆಹಲಿ : ವಾಹನ ಸವಾರರಿಗೆ ಸಂತಸದ ಸುದ್ದಿ. ದೀಪಾವಳಿ ಸಂದರ್ಭದಲ್ಲಿ ಕೇಂದ್ರ ಸರ್ಕಾರ ವಾಹನ ಸವಾರರಿಗೆ ಸಿಹಿಸುದ್ದಿ ನೀಡಿದೆ. ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು 5 ರೂಪಾಯಿ ಮತ್ತು ಡೀಸೆಲ್ ಮೇಲಿನ ಸುಂಕ 10 ರೂಪಾಯಿ ಕಡಿತಗೊಳಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.
ಕೇಂದ್ರದ ಈ ನಿರ್ಧಾರದಿಂದ ನೂರರ ಗಡಿ ದಾಟಿ ವಾಹನ ಸವಾರರಿಗೆ ಹೊರೆಯಾಗಿ ಪರಿಣಮಿಸಿದ್ದ ಪೆಟ್ರೋಲ್, ಡೀಸೆಲ್ ಬೆಲೆ ಇಳಿಕೆಯಾಗಲಿದೆ. ಇಳಿಕೆಯಾದ ಪೆಟ್ರೋಲ್ ಬೆಲೆ ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಕೇಂದ್ರ ಅಧಿಕೃತವಾಗಿ ಪ್ರಕಟಿಸಿದೆ.
On eve of #Diwali, Government of India announces excise duty reduction on petrol and diesel. Excise duty on Petrol and Diesel to be reduced by Rs 5 and Rs 10 respectively from tomorrow pic.twitter.com/peYP1fA4gO
— ANI (@ANI) November 3, 2021
ಈ ವರ್ಷ ಪೆಟ್ರೋಲ್ ಬೆಲೆ ಲೀಟರ್ ಗೆ 27 ರೂ ಏರಿಕೆ : ಈ ವರ್ಷದ ಜನವರಿ 1 ರಂದು ಲೀಟರ್ ಪೆಟ್ರೋಲ್ ಬೆಲೆ ರೂ. 87.06 ಇದ್ದು, ಈಗ ಅದರ ಬೆಲೆ ರೂ.114.37ಕ್ಕೆ ತಲುಪಿದೆ. ಜನವರಿಯಿಂದ ಮಾರ್ಚ್ ವರೆಗೆ ಪೆಟ್ರೋಲ್ ದರವನ್ನು ಏರಿಸುತ್ತಿರುವ ತೈಲ ಕಂಪನಿಗಳು, ಬಂಗಾಳ ಚುನಾವಣೆಯಿಂದಾಗಿ ಮಾರ್ಚ್ ಏಪ್ರಿಲ್ ತಿಂಗಳವರೆಗೂ ಬೆಲೆ ಏರಿಕೆಯನ್ನು ನಿಲ್ಲಿಸಿ, ನಂತರ ಮೇ, ಜೂನ್ ನಿಂದ ಆರಂಭವಾಗಿ ಅಕ್ಟೋಬರ್ ವರೆಗೂ ಏರಿಕೆಯಾಗುತ್ತಲೇ ಇವೆ.