ಮೈಸೂರು: ಫೆಬ್ರವರಿ 4ರಿಂದ ಮೈಸೂರಿಂದ ಅಯೋಧ್ಯೆಗೆ ವಿಶೇಷವಾದ ರೈಲು ಸೇವೆ ಆರಂಭವಾಗುತ್ತಾ ಇದೆ. ತಿಂಗಳಿಗೆ ಎರಡು ಸಲ ರೈಲು ಓಡಾಡಲಿದೆ. ಹೀಗಾಗಿ ಮೈಸೂರಿನಿಂದ ದೊಡ್ಡ ಸಂಖ್ಯೆಯಲ್ಲಿ ರಾಮನ ಭಕ್ತರು ಅಯೋಧ್ಯೆಗೆ ಹೊರಡಲಿದ್ದಾರೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಅಯೋಧ್ಯೆಗೆ ಭೇಟಿ ನೀಡಬೇಕೆಂದು ಮನವಿ ಮಾಡುತ್ತೇನೆ. ಮೈಸೂರಿನಿಂದ ರೈಲು ಬಿಟ್ಟ ಕೇಂದ್ರ ಸರ್ಕಾರಕ್ಕೆ ಧನ್ಯವಾದ ತಿಳಿಸಿದ್ದಾರೆ.
ಇದೇ ವೇಳೆ ಮೈಸೂರಿನಲ್ಲಿ ಯತೀಂದ್ರ ಅವರ ಸ್ಪರ್ಧೆಯ ಬಗ್ಗೆ ಮಾತನಾಡಿ, ನನಗೆ ಆ ಬಗ್ಗೆ ಗೊತ್ತಿಲ್ಲ. ಕಾಂಗ್ರೆಸ್ ನವರು ಅಭ್ಯರ್ಥಿಯನ್ನು ಹುಡುಕುತ್ತಾ ಇದ್ದಾರೆ ಹುಡುಕುತ್ತಾ ಇದ್ದಾರೆ ಎಂಬ ಸುದ್ದಿಯೇ ಕೇಳಿ ಬರುತ್ತಾ ಇತ್ತು. ಯತೀಂದ್ರ ಅವರು ನಿಂತರೆ ಬಹಳ ಒಳ್ಳೆಯದು. ಅದಿಂಥರ ಹೇಗಿರುತ್ತೆ ಎಂದರೆ, ಯತೀಂದ್ರ ಸಿದ್ದರಾಮಯ್ಯ ಹಾಗೂ ಪ್ರತಾಪ್ ಸಿಂಹ ಫೈಟ್ ಎಂದರೆ ನಿಮಗೆಲ್ಲಾ ಒಳ್ಳೆ ಸುದ್ದಿ ಸಿಗುತ್ತದೆ. ಆದರೆ ಸ್ಪರ್ಧೆ ಹೇಗಿರುತ್ತದೆ ಎಂದರೆ ಡಾ. ಯತೀಂದ್ರ ಸನ್ ಆಫ್ ಸಿದ್ದರಾಮಯ್ಯ ವರ್ಸಸ್ ಪತ್ರಕರ್ತ ಪ್ರತಾಪ್ ಸಿಂಹ ಮಜವಾಗಿರುತ್ತದೆ ಎಂದಿದ್ದಾರೆ.
ಹೆಚ್ ಡಿ ಕುಮಾರಸ್ವಾಮಿ ಅವರನ್ನು ನಿನ್ನೆ ಭೇಟಿ ಮಾಡಿ ಬಂದಿದ್ದರ ಬಗ್ಗೆ ಮಾತನಾಡಿ, ಕುಮಾರಣ್ಣ ಅವರನ್ನು ಬಿಡದಿಯಲ್ಲಿರುವ ಅವರ ಮನೆಯಲ್ಲಿ ಭೇಟಿಯಾಗಿ ಮಾತನಾಡಿ, ಚರ್ಚೆ ಕೂಡ ಮಾಡಿ ಬಂದೆ. ನಾನು ಮುಖ್ಯವಾಗಿ ಅಲ್ಲಿಗೆ ಹೋಗಿದ್ದು, ಇತ್ತಿಚೆಗೆ ನನ್ನ ತಮ್ಮನನ್ನು ಮರಗಳ್ಳತನದ ವಿಚಾರವಾಗಿ ಅನಗತ್ಯವಾಗಿ ಎಳೆದು ತಂದಿದ್ದರು. ದುರುದ್ದೇಶಪೂರಿತ ರಾಜಕೀಯ ನಡೆದಿದ್ದರ ಸತ್ಯ ಸಂಗತಿಯನ್ನು ದಾಖಲೆ ಸಮೇತ ಬಿಚ್ಚಿಟ್ಟಿದ್ದಂತ ಕುಮಾರಣ್ಣನಿಗೆ ನಾನು ಧನ್ಯವಾದವನ್ನು ಅರ್ಪಿಸಿದೆ ಎಂದಿದ್ದಾರೆ.