ಸೂರತ್: ಕೆಲವೊಮ್ಮೆ ಯುವಕರ ಪುಂಡಾಟಿಕೆ ಎಷ್ಟಿರುತ್ತೆ ಅಂದ್ರೆ ಅದಷ್ಟೋ ಅನಾಹುತಕ್ಕೆ ದಾರಿ ಮಾಡಿಕೊಡುತ್ತೆ. ಸೂರತ್ ನಲ್ಲಿ ಯುವಕರಿಬ್ಬರು ಮಾಡಿದ ಅವಾಂತರಕ್ಕೆ ಭಾರಿ ಅನಾಹುತವೇ ಆಗಬೇಕಿತ್ತು. ಅದೃಷ್ಟವಶಾತ್ ಎಲ್ಲವೂ ತಪ್ಪಿದೆ.
ಪೆಟ್ರೋಲ್ ಬಂಕ್ ವೊಂದಕ್ಕೆ ಬೈಕ್ ನಲ್ಲಿ ಬಂದ ಯುವಕರಿಬ್ಬರು ಪಟಾಕಿ ಹತ್ತಿಸಿ, ಪೆಟ್ರೋಲ್ ಬಂಕ್ ಒಳಗೆ ಎಸೆದಿದ್ದಾರೆ. ಹಾಗೇ ಬಿಟ್ಟಿದ್ದರೆ ದೊಡ್ಡ ಅನಾಹುತವೇ ಸಂಭವಿಸಬೇಕಿತ್ತು. ಸಿಬ್ಬಂದಿ ಎಚ್ಚೆತ್ತುಕೊಂಡು ಆ ಪಟಾಕಿಯನ್ನ ನಂದಿಸಿದ್ದಾರೆ.
A man gets caught on camera, deliberately throwing firecrackers at a petrol pump to cause a fire.
Now after he is caught, @RanaAyyub will write an op-ed in the New York Times about how Human Rights of Muslims are being trampled upon in India. This is what we're up against!!
. pic.twitter.com/ncsZfi3ol5— Priti Gandhi – प्रीति गांधी (@MrsGandhi) November 3, 2021
ಗುಜರಾತ್ ರಾಜ್ಯದ ಸೂರತ್ ನ ಪಿಪ್ಲಾಡ್ ಪ್ರದೇಶದ ಬಂಕ್ ವೊಂದರಲ್ಲಿ ಈ ಘಟನೆ ನಡೆದಿದೆ. ಇಬ್ಬರು ಯುವಕರು ಸ್ಕೂಟಿಯಲ್ಲಿ ಬಂದು, ಪೆಟ್ರೋಲ್ ತುಂಬಿಸಿದ ಬಳಿಕ ಒಬ್ಬ ಗಾಡಿ ಸ್ಟಾರ್ಟ್ ಮಾಡಿದ್ದಾನೆ. ಇನ್ನೊಬ್ಬ ಪಟಾಕಿಗೆ ಬೆಂಕಿ ಹಚ್ಚಿ, ಪೆಟ್ರೋಲ್ ಪೈಪ್ ಕಡೆ ಎಸೆದಿದ್ದಾನೆ. ಅಲ್ಲೆ ಇದ್ದ ಸಿಬ್ಬಂದಿ ಪಟಾಕಿಯನ್ನ ದೂರಕ್ಕೆ ಒದ್ದು ಅನಾಹುತ ತಪ್ಪಿಸಿದ್ದಾನೆ.
ಸಿಸಿಟಿವಿಯಲ್ಲಿ ಸೆರೆಯಾಗಿದ್ದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಸದ್ಯ ಪೆಟ್ರೋಲ್ ಪಂಪ್ ಮ್ಯಾನೇಜರ್ ಮೋತಿಲಾಲ್ ಚೌಧರಿ ಯುವಕನ ವಿರುದ್ಧ ಉಮ್ರಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಭಾರತೀಯ ದಂಡ ಸಂಹಿತೆಯ (ಐಪಿಸಿ) 285, 286, 336, 114 ಸೆಕ್ಷನ್‌ಗಳ ಅಡಿಯಲ್ಲಿ ಸಾರ್ವಜನಿಕ ಜೀವನಕ್ಕೆ ಹಾನಿ ಮಾಡಿದ ಆರೋಪದಡಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.