ಹಾಸನ: ಜಮೀನು ವಿಚಾರಕ್ಕೆ ಹೆಚ್ ಡಿ ರೇವಣ್ಣ ಫ್ಯಾಮಿಲಿ ಹಲ್ಲೆ ನಡೆಸಿದೆ ಎಂದು ಮಾಜಿ ಕಾರು ಚಾಲಕ ಆರೋಪ ಮಾಡಿ, ಕೋರ್ಟ್ ಮೊರೆ ಹೋಗಿದೆ. ಈ ಸಂಬಂಧ ಸಂಸದ ಪ್ರಜ್ವಲ್ ರೇವಣ್ಣ ಪ್ರತಿಕ್ರಿಯೆ ನೀಡಿದ್ದಾರೆ. ಕೇಸನ್ನ ಕೋರ್ಟ್ ಹಾಕಿಕೊಂಡಿದ್ದೀನಿ ಅಂತ ಹೇಳಿದ್ದಾರೆ. ಅದಾದ ಮೇಲೆ ಮಾಧ್ಯಮದ ಬಳಿ ಬರುವುದು ಏನಿದೆ. ಎಲೆಕ್ಷನ್ ಹತ್ತಿರ ಬರ್ತಾ ಇದೆ ಬರಬೇಕು, ಮಾತನಾಡಬೇಜು ಅಷ್ಟೇ. 8-9 ತಿಂಗಳ ಹಿಂದೆ ಆಗಿರುವುದು ಅಂತ ಅವರೇ ಹೇಳಿದ್ದಾರೆ. ಹಾಗಾದ್ರೆ ಈಗ ಯಾಕೆ ಅದನ್ನ ತೆಗೆಯಬೇಕು, ಮಾಧ್ಯಮದ ಮುಂದೆ ಬರಬೇಕು. ಅವತ್ತು ಯಾಕೆ ಮಾಧ್ಯಮದ ಮುಂದೆ ಬರಲಿಲ್ಲ. ಮಾಧ್ಯಮದಲ್ಲಿ ಕೂತು ಒಬ್ಬರಿಗೆ ತೇಜೋವಧೆ ಮಾಡುವುದಲ್ಲ. ಹಾಗಾದ್ರೆ ಇವರಿಗೆ ಕೋರ್ಟ್ ಮೇಲೆ ನಂಬಿಕೆ ಇಲ್ಲ ಅಂತ ಆಯ್ತು ಎಂದಿದ್ದಾರೆ.
ಯಾರು ಯಾರ ಮೇಲೂ ಹಲ್ಲೆ ಮಾಡುವುದಕ್ಕೆ ಆಗಲ್ಲ. ಹಲ್ಲೆ ಮಾಡಿದವರು ಎಂಟು ತಿಂಗಳ ತನಕ ಸುಮ್ಮನೆ ಕೂರುವುದಿಲ್ಲ. ಯಾಕೆ ಇವೆಲ್ಲಾ ಚರ್ಚೆ ಮಾಡುವುದು. ಕಾಂಗ್ರೆಸ್ ನವರ ಕುಮ್ಮಕ್ಕಿನಿಂದ ಈ ರೀತಿ ಮಾಡಬಹುದು. ನಾನು ಅವರ ಬಗ್ಗೆ ಏನು ಚರ್ಚೆ ಮಾಡುವುದಕ್ಕೆ ಹೋಗಲ್ಲ. ನಮ್ಮ ಜಿಲ್ಲೆಗಂತು ಗೊತ್ತಿದೆ ಯಾರದ್ದು ತಪ್ಪು ಯಾರದ್ದು ಸರಿ ಅಂತ. ಅದರ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದಕ್ಕೆ ಹೋಗಲ್ಲ ಎಂದಿದ್ದಾರೆ.
ಇದೇ ವೇಳೆ ಇಂಡಿಯಾ ಅಂತ ಏನು ಮಾಡಿಕೊಂಡಿದ್ದಾರೆ ಅವರಲ್ಲಿ ಒಗ್ಗಟ್ಟು ಇಲ್ಲದೆ ಇರುವುದು ಎದ್ದು ಕಾಣಿಸುತ್ತಾ ಇದೆ. ನಿತೀಶ್ ಕುಮಾರ್ ಅವರು ಮೀಟಿಂಗ್ ನಿಂದ ಎದ್ದು ಹೋಗುವುದು. ಖರ್ಗೆ ಅವರನ್ನು ಪ್ರಧಾನಿ ಹುದ್ದೆಗೆ ಆಯ್ಕೆ ಮಾಡುತ್ತೀವಿ ಎಂದಾಗ ಅವರ ಜನಾಂಗಕ್ಕೆ ಸಪೋರ್ಟ್ ಮಾಡುವ ನಿರ್ಣಯವನ್ನು ಅವರ ಪಕ್ಷದವರೇ ತೋರಿಸುತ್ತಿಲ್ಲ ಎನ್ನುವುದಾದರೆ, ಇದು ಯಾವ ರೀತಿಯ ಮೆಸೇಜ್ ತೋರಿಸುತ್ತದೆ ಹೇಳಿ ಎಂದು ಪ್ರಶ್ನೆ ಮಾಡಿದೆ.