ಸುದ್ದಿಒನ್, ಚಿತ್ರದುರ್ಗ, ಜನವರಿ.11 : ಜನವರಿ 22 ರಂದು ಅಯೋಧ್ಯೆ ರಾಮಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ದೇಶದಾದ್ಯಂತ ಸಂಭ್ರಮ ಮನೆ ಮಾಡಿದೆ. ಇದೀಗ ಇಬ್ಬರು ಯುವಕರು ಜಿಲ್ಲೆಯಿಂದ ಅಯೋಧ್ಯೆಗೆ ಸೈಕಲ್ ಜಾಥಾ ಆರಂಭಿಸಿದ್ದಾರೆ. ಹೊಸದುರ್ಗದ ಗಣಪತಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿ ಜಾಥಾ ಆರಂಭಿಸಿದರು.
ಹೊಸದುರ್ಗದ ಶರಣಪ್ಪ ಮತ್ತು ದಯಾನಿಧಿ ಅಯೋಧ್ಯೆಗೆ ಸೈಕಲ್ ಜಾಥಾ ಹೊರಟಿರುವ ಯುವಕರು. ಹೊಸದುರ್ಗದಿಂದ ಹೊರಟು ಅಯೋಧ್ಯೆ ರಾಮಮಂದಿರ ಉದ್ಘಾಟನೆ ವೇಳೆಗೆ ತೆರಳಲು ಸೈಕಲ್ ಜಾಥಾ ಮೂಲಕ ಇಬ್ಬರು ಯುವಕರು ಪ್ರಯಾಣ ಬೆಳೆಸಿದರು.
ಸೈಕಲ್ ಜಾತಕ್ಕೆ ಚಾಲನೆ ನೀಡಿ ಮಾತನಾಡಿದ ಖ್ಯಾತ ಉದ್ಯಮಿ, ಸದ್ಗುರು ಆಯುರ್ವೇದಿಕ್ ಉತ್ಪನ್ನಗಳ ಮಾಲೀಕ ಡಿ.ಎಸ್.ಪ್ರದೀಪ್, ಮಾತನಾಡಿ, ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಯುವಕರಲ್ಲಿ ರಾಷ್ಟ್ರಪ್ರೇಮದ ಜಾಗೃತಿಯನ್ನು ಮೂಡಿಸಿದ ‘ಜೈ ಶ್ರೀರಾಮ್’ ಘೋಷ ವಾಕ್ಯ ಇಂದು ರಾಷ್ಟ್ರಭಕ್ತ ಪೀಳಿಗೆಯ ಉಗಮಕ್ಕೆ ಕಾರಣವಾಗಿದೆ. ರಾಮ ರಾಜ್ಯ ಎಂದರೆ ನೆಮ್ಮದಿ, ಶಾಂತಿಯಿಂದ ಬದುಕುವುದು. ರಾಮ ಎಂದರೆ ರಾಷ್ಟ್ರ, ಶ್ರೀರಾಮನ ರಾಷ್ಟ್ರಭಕ್ತರಿಂದ ಭಾರತಕ್ಕೆ ಉತ್ತಮ ಭವಿಷ್ಯವಿದೆ’ ಎಂದು ಹೇಳಿದರು. ಈ ವೇಳೆ ಅವರು ಅಯೋಧ್ಯೆಗೆ ಹೊರಟ ಯಾತ್ರಾರ್ಥಿಗಳಿಗೆ ಪ್ರಯಾಣಕ್ಕೆ ಬೇಕಾದ ಎಲ್ಲಾ ವಿಧದ ಪರಿಕರಗಳನ್ನು ಸದ್ಗುರು ಆಯುರ್ವೇದ ಸಂಸ್ಥೆಯ ವತಿಯಿಂದ ಉದ್ಯಮಿ ಪ್ರದೀಪ್ ಅವರು ನೀಡಿದರು.
ಸೈಕಲ್ ಜಾಥಾ ಹೊರಡುವ ಸಂದರ್ಭದಲ್ಲಿ ನೆರೆದಿದ್ದ ಹಿಂದೂ ಕಾರ್ಯಕರ್ತರು ಜೈ ಶ್ರೀರಾಮ್ ಘೋಷವಾಕ್ಯ ಕೂಗುತ್ತಾ ಯಾತ್ರಾರ್ಥಿಗಳಿಗೆ ಉತ್ಸಾಹ ತುಂಬಿದರು. ಈ ವೇಳೆ
ಸಮಾಜ ಸೇವಕ ತುಂಬಿನಕೆರೆ ಬಸವರಾಜ್, ಪ್ರಕಾಶ್, ಹಿಂದೂ ಕಾರ್ಯಕರ್ತರಾದ ಸಿದ್ದೇಶ್, ಕಾಶಿ, ಆಕಾಶ್, ಅಕ್ಷಯ್, ಮನು ಮುಂತಾದವರಿದ್ದರು.