ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಜನವರಿ.10 : ಅಯೋಧ್ಯೆಯಲ್ಲಿ ಇದೆ ತಿಂಗಳ 22 ರಂದು ರಾಮ ಮಂದಿರ ಉದ್ಗಾಟನೆಯಾಗುತ್ತಿರುವುದರ ಜೊತೆಯಲ್ಲಿಯೇ ಮಹರ್ಷಿ ವಾಲ್ಮೀಕಿಯವರ ಮಂದಿರ ನಿರ್ಮಾಣವಾಗಬೇಕೆಂದು ಚಿತ್ರನಾಯಕ ವೇದಿಕೆ ಅಧ್ಯಕ್ಷ ಪ್ರಶಾಂತ್‍ಕುಮಾರ್ ಕೆ.ಟಿ. ಉತ್ತರಪ್ರದೇಶ ಹಾಗೂ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದರು.
ಪತ್ರಕರ್ತರ ಭವನದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ನಿಲ್ದಾಣವೆಂದು ನಾಮಕರಣ ಮಾಡಿರುವುದನ್ನು ಸ್ವಾಗತಿಸುತ್ತೇವೆ. ಹಿಂದೂ ಧರ್ಮದ ಮಹಾನ್ ಗ್ರಂಥ ರಾಮಾಯಣ ಬರೆದಿರುವುದು ವಾಲ್ಮೀಕಿ. ರಾಮ ಮಂದಿರ ನಿರ್ಮಾಣವಾಗುತ್ತಿರುವ ಈ ಸಂದರ್ಭದಲ್ಲಿ ವಿಮಾನ ನಿಲ್ದಾಣಕ್ಕೆ ಮಹರ್ಷಿ ವಾಲ್ಮೀಕಿ ಹಾಗೂ ಭೋಜನಾಲಯಕ್ಕೆ ಶಬರಿ ಎಂದು ನಾಮಕರಣ ಮಾಡಿರುವುದು ನಿಜಕ್ಕೂ ಇವರಿಗೆ ಸಂದಿರುವ ಗೌರವ. ಹಾಗಾಗಿ ಪ್ರಧಾನಿ ನರೇಂದ್ರಮೋದಿ ಹಾಗೂ ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರವರು ರಾಮನಿಗೆ ನೀಡಿದಷ್ಟು ಗೌರವವನ್ನು ಮಹರ್ಷಿ ವಾಲ್ಮೀಕಿಗೂ ನೀಡಬೇಕೆಂದು ಪ್ರಶಾಂತ್‍ಕುಮಾರ್ ಕೆ.ಟಿ. ಮನವಿ ಮಾಡಿದರು.
ಗೌರಿ ರಾಜ್‍ಕುಮಾರ್, ಪ್ರಶಾಂತ್, ಬೋರಯ್ಯ ಬಚ್ಚಬೋರನಹಟ್ಟಿ, ಬಸವರಾಜ್, ನ್ಯಾಯವಾದಿ ಅಶೋಕ್ ಬೆಳಗಟ್ಟ ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.