ಸುದ್ದಿಒನ್, ಚಿತ್ರದುರ್ಗ, ಜನವರಿ.09 : ಜಿಲ್ಲೆಯ ಪ್ರತಿಷ್ಠಿತ ಶಿಕ್ಷಣ ಸಂಸ್ಥೆ ಎಸ್. ಆರ್ ಎಸ್ ಹೆರಿಟೇಜ್ ಶಾಲೆಯ ವಿದ್ಯಾರ್ಥಿಗಳು ಹೊಸದುರ್ಗದಲ್ಲಿ ಭಾನುವಾರ ನಡೆದ SAI CUP–24 ರಾಜ್ಯಮಟ್ಟದ ಮುಕ್ತ ಟೆಕ್ವಾಂಡೋ ಪಂದ್ಯಾವಳಿ ಪಂದ್ಯಾವಳಿಯಲ್ಲಿ 12 ಚಿನ್ನದ ಪದಕ, 8 ಬೆಳ್ಳಿಯ ಪದಕ ಹಾಗೂ 2 ಕಂಚಿನ ಪದಕಗಳನ್ನು ಪಡೆದುಕೊಂಡು ಎಸ್. ಆರ್. ಎಸ್ ಹೆರಿಟೇಜ್ ಶಾಲೆಗೆ ಹಾಗೂ ಚಿತ್ರದುರ್ಗ ಜಿಲ್ಲೆಗೆ ಕೀರ್ತಿಯನ್ನು ತಂದಿರುತ್ತಾರೆ.
ಟೆಕ್ವಾಂಡೋ ಒಂದು ಕೊರಿಯಾ ದೇಶದ ಸಮರ (ಆತ್ಮರಕ್ಷಣೆ) ಕಲೆಯಾಗಿದ್ದು ಶಿಸ್ತುಬದ್ಧವಾದ ಕಾಲ್ಚಳಕ ಹಾಗೂ ಕೈಚಳಕದಿಂದ ಎದುರಾಳಿಯನ್ನು ನಿರಾಯುಧದಿಂದ ಸಮರ್ಥವಾಗಿ ಎದುರಿಸಬಹುದಾದ ಕಲೆಯಾಗಿದೆ ಹಾಗೂ ಕ್ರೀಡಾಕೂಟದಲ್ಲಿಯೂ ಸಹ ಸೇರ್ಪಡೆಯಾಗಿದೆ.
1)ರಾಜ್ಯ ಒಲಂಪಿಕ್ಸ್ ಸಂಸ್ಥೆ [KOA] . ರಾಜ್ಯ ಕ್ರೀಡಾ ಪ್ರಾಧಿಕಾರ [SAK]
2)ರಾಷ್ಟ್ರೀಯ ಒಲಂಪಿಕ್ಸ್ ಸಂಸ್ಥೆ [IOA]ರಾಪ್ಟ್ರೀಯ ಕ್ರೀಡಾ ಪ್ರಾಧಿಕಾರ [SAI]
3)ಅಂತರ ರಾಪ್ಟ್ರೀಯ ಒಲಂಪಿಕ್ಸ್ ಕಮಿಟಿ [IOC]ಯಲ್ಲೂ ಮಾನ್ಯತೆ ಪಡೆದುಕೊಂಡಿರುವ ಏಕೈಕ ಆತ್ಮರಕ್ಷಣಾ ಕಲೆಯಾಗಿದೆ.
ಈ ಪಂದ್ಯಾವಳಿಯಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಶಾಲೆಯ ಆಡಳಿತ ಮಂಡಳಿಯವರು ಹಾಗೂ ಶಾಲಾ ಪ್ರಾಂಶುಪಾಲರು ಶುಭವನ್ನು ಕೋರಿ ಮೆಚ್ಚುಗೆಯನ್ನು ವ್ಯಕ್ತಪಡಿಸಿದ್ದಾರೆ.