Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಗಂಡ – ಹೆಂಡತಿ ಜಗಳದಿಂದ ಮಗುವಿನ ಕೊಲೆಯಾಯ್ತಾ..? : ಸ್ಟಾರ್ಟ್ ಅಪ್ ಕಂಪನಿ ಸಿಇಓ ಕೇಸ್ ಗೆ ಬಿಗ್ ಟ್ವಿಸ್ಟ್

Facebook
Twitter
Telegram
WhatsApp

 

 

ಬೆಂಗಳೂರು: ಗೋವಾದ ಹೊಟೇಲ್ ಒಂದರಲ್ಲಿ ತಂಗಿದ್ದ ಸ್ಟಾರ್ಟ್ ಅಪ್ ಕಂಪನಿಯ ಸಿಇಒ ಸುಚನಾ ಸೇಠ್ ತನ್ನ ಮಗುವನ್ನೇ ಕೊಂದಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಟ್ವಿಸ್ಟ್ ಸಿಕ್ಕಿದೆ. ಮಗುವನ್ನು ಉಸಿರುಗಟ್ಟಿಸಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ. ಇದಕ್ಕೆಲ್ಲಾ ಗಂಡ-ಹೆಂಡತಿಯ ಜಗಳವೇ ಮಗುವಿನ ಕೊಲೆಗೆ ಕಾರಣವಾಯ್ತು ಎನ್ನಲಾಗುತ್ತಿದೆ.

ಸುಚೇನಾ ಸೇಠ್ ಮೂಲತಃ ಪಶ್ಚಿಮ ಬಂಗಾಳದವರು. ಬೆಂಗಳೂರಿಗೆ ಬಂದ ಸುಚೇನಾ, ಸ್ಟಾರ್ಟಪ್ ಕಂಪನಿ ಆರಂಭಿಸಿದರು. 2008-09ರಲ್ಲಿ ತಮಿಳುನಾಡು ಮೂಲದ ಟೆಕ್ಕಿ ವೆಂಕಟರಮಣ ಅವರ ಜೊತೆಗೆ ಮದುವೆಯಾಗಿದ್ದರು. ಆದರೆ ಕಳೆದ ಎರಡು ವರ್ಷಗಳಿಂದ ಪತಿಯಿಂದ ದೂರವಾಗಿದ್ದರು. ಡಿವೋರ್ಸ್ ಪಡೆದ ಬಳಿಕ ಗಂಡ-ಹೆಂಡತಿ ದೂರವಾಗಿದ್ದರು. ಇದರ ನಡುವೆ ಮಗುವನ್ನು ನೋಡಲು ಕೋರ್ಟ್ ಅನುಮತಿ ನೀಡಿತ್ತು.

ಪ್ರತಿ ಭಾನುವಾರ ಭೇಟಿಗೆ ಹಾಗೂ ವಿಡಿಯೋ ಕಾಲ್ ಗೆ ಅವಕಾಶ ನೀಡಲಾಗಿತ್ತು. ಅದರಂತೆ ಸುಚೇನಾ ಪತಿ, ವಿಡಿಯೋ ಕಾಲ್ ಮಾಡುವ ಮೂಲಕ ಮಗುವಿನ ಜೊತೆಗೆ ಸಂಪರ್ಕದಲ್ಲಿದ್ದರು. ಗಂಡನ ಮೇಲಿನ ಕೋಪದಿಂದ ಮಗುವನ್ನು ಕೊಂದಿರುವ ಶಂಕೆ ವ್ಯಕ್ತಪಡಿಸಿದ್ದಾರೆ ಪೊಲೀಸರು. ಇನ್ನು ನಾಲ್ಕು ವರ್ಷದ ಮಗುವನ್ನು ಕೊಂದ ಸುಚೇನಾ ಸೇಠ್, ತಾವೂ ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರಂತೆ.

ಈ ಸಂಬಂಧ ಈಗಾಗಲೇ ಚಿತ್ರದುರ್ಗ ಪೊಲೀಸರು ಸುಚೇನಾ ಸೇಠ್ ಅವರನ್ನು ಬಂಧಿಸಿದ್ದಾರೆ. ಮಗುವಿನ ಮೃತದೇಹವನ್ನು ಹಿರಿಯೂರಿನ ಸರ್ಕಾರಿ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಮಗುವಿನ ಕೊರಳಿನ ಭಾಗದಲ್ಲಿ ನರಗಳು ಊದಿಕೊಂಡಿದ್ದು, ಮಗುವನ್ನು ಕತ್ತು ಇಸುಕಿ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ‌.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಮೋದಿ ಬಗ್ಗೆ ಹೊಗಳಿದ್ದ ನಟಿ : ಹಿಗ್ಗಾಮುಗ್ಗಾ ಟ್ರೋಲ್ ಆದ ರಶ್ಮಿಕಾ ಮಂದಣ್ಣ..!

ದೇಶದಲ್ಲಿ ಲೋಕಸಭಾ ಚುನಾವಣೆ ನಡೆಯುತ್ತಿದೆ. ಹ್ಯಾಟ್ರಿಕ್ ಬಾರಿಸುವ ಕನಸು ಕಾಣುತ್ತಿದ್ದಾರೆ ಮೋದಿ. ಈ ಮಧ್ಯೆ ರಶ್ಮಿಕಾ ಮಂದಣ್ಣ ಮೋದಿಯವರ ಅಭಿವೃದ್ಧಿ ಬಗ್ಗೆ ಮಾತನಾಡಿದ್ದಾರೆ. ಈ ವಿಚಾರ ಚರ್ಚೆಗೆ ಬಂದಿದ್ದು, ಪರ-ವಿರೋಧ ಕೇಳಿ ಬರುತ್ತಿದೆ. ರಶ್ಮಿಕಾ

ಜನಪ್ರತಿನಿಧಿಗಳ ಕೋರ್ಟ್ ನಿಂದ ತಾತ್ಕಾಲಿಕ ರಿಲೀಫ್ : ರೇವಣ್ಣ ವಿಚಾರಣೆ ಸೋಮವಾರಕ್ಕೆ ಮುಂದೂಡಿಕೆ..!

ಬೆಂಗಳೂರು: ಮಹಿಲಕೆಯ ಕಿಡ್ನ್ಯಾಪ್ ಕೇಸಿನಲ್ಲಿ ಮಾಜಿ ಸಚುವ ಹೆಚ್ ಡಿ ರೇವಣ್ಣ ಇನ್ನು ಸಂಕಷ್ಟದಲ್ಲಿಯೇ ಇದ್ದಾರೆ. ಮೊನ್ನೆಯಷ್ಟೇ ಜೈಲಿನಿಂದ ಷರತ್ತು ಬದ್ಧ ಜಾಮೀನು ಪಡೆದು ರಿಲೀಸ್ ಆಗಿರುವ ರೇವಣ್ಣ ಇಂದು ಮತ್ತೆ ಕೋರ್ಟ್ ಗೆ

ಚಿತ್ರದುರ್ಗದಲ್ಲಿ ಮಳೆ | ಜಿಲ್ಲೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ ?

ಚಿತ್ರದುರ್ಗ. ಮೇ.17 : ಜಿಲ್ಲೆಯ ಹಲವೆಡೆ ಮಳೆಯಾಗುತ್ತಿದ್ದು ಸಂಜೆ 6 ಗಂಟೆಯ ನಂತರ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು ಸಹಿತ  ಮಳೆಯಾಗುತ್ತಿದೆ. ಮಳೆ ಆರಂಭವಾಗಿ ಅರ್ಧ ಗಂಟೆಯ ನಂತರವೂ ಮಳೆ ಮುಂದುವರೆದಿದ್ದು ಉತ್ತಮವಾಗಿ

error: Content is protected !!