ಗದಗ: ಯಶ್ ಕಟೌಟ್ ಕಟ್ಟಲು ಹೋಗಿ ಮೂವರು ಅಭಿಮಾನಿಗಳು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರ ಪರಿಹಾರ ಘೋಷಣೆ ಮಾಡಿದೆ. ಮೃತರ ಕುಟುಂಬಕ್ಕೆ ತಲಾ 2 ಲಕ್ಷ ಘೋಷಣೆ ಮಾಡಿದೆ. ಗಾಯಾಳುಗಳಿಗೆ ತಲಾ 50 ಸಾವಿರ ಪರಿಹಾರ ನೀಡಲಾಗುತ್ತಿದೆ ಎಂದು ಗದಗ ಉಸ್ತುವಾರಿ ಸಚಿವ ಹೆಚ್ ಕೆ ಪಾಟೀಲ್ ಹೇಳಿಕೆ ನೀಡಿದ್ದಾರೆ. ಪರಿಹಾರ ಘೋಷಣೆ ಮಾಡುವುದಕ್ಕೆ ಸಿಎಂ ಸಿದ್ದರಾಮಯ್ಯ ಅವರೇ ಸೂಚಿಸಿದ್ದಾರೆ ಎಂದಿದ್ದಾರೆ.
ನಟ ಯಶ್ ಅಭಿಮಾನಿಗಳು ಕಟೌಟ್ ಕಟ್ಟಲು ಹೋಗಿ ಸಾವನ್ನಪ್ಪಿದ್ದರು. ಇದೀಗ ಮೃತರ ಗ್ರಾಮಕ್ಕೆ ಯಶ್ ಭೇಟಿ ಕೊಡಲಿದ್ದಾರೆ ಎನ್ನಲಾಗಿದೆ. ಸಂಜೆ ನಾಲ್ಕು ಗಂಟೆಯ ವೇಳೆಗೆ ಸೊರಣಗಿ ಗ್ರಾಮಕ್ಕೆ ಯಶ್ ಭೇಟಿ ನೀಡಲಿದ್ದಾರಂತೆ. ಮೃತರ ಸಂಬಂಧಿಕರಿಗೆ ಸಾಂತ್ವಾನ ಹೇಳುವುದಕ್ಕೆ ಬರಲಿದ್ದಾರೆ ಎನ್ನಲಾಗಿದೆ.
ಯಶ್ ರವರ ಹುಟ್ಟಹಬ್ಬದ ಅಂಗವಾಗಿ ಬ್ಯಾನರ್ ಕಟ್ಟುವ ವೇಳೆ ವಿದ್ಯುತ್ ಅವಢಗ ಸಂಭವಿಸಿದೆ. ಈ ದುರ್ಘಟನೆಯಲ್ಲಿ ಮೂವರು ಸ್ಥಳದಲ್ಲೇ ಮೃತಪಟ್ಟರೆ ಇನ್ನೂ ಮೂವರಿಗೆ ಗಂಭೀರಗಾಯಗಳಾಗಿವೆ. ಮೃತಪಟ್ಟವರನ್ನು ಹನುಮಂತ ಹರಿಜನ್, ಮುರಳಿನಡವಿನಮನಿ, ಮತ್ತು ನವೀನ್ ಗಾಜಿ ಎಂಬ ಮೂರು ಯುವಕರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರಿಗೆ ಗಂಭೀರಗಾಯಗಳಾಗಿದ್ದು ಅವರನ್ನು ಲಕ್ಷ್ಮೇಶ್ವರ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ದುರ್ಘಟನೆ ಸಂಭಿವಿಸುತ್ತಿದ್ದಂತೆ ಅಭಿಮಾನಿಗಳು ಯಶ್ ಅವರು ಕೂಡಲೇ ಘಟನಾ ಸ್ಥಳಕ್ಕೆ ಧಾವಿಸಿ ಫ್ಯಾನ್ಸ್ ಸಾವಿಗೆ ಸಂತಾಪ ಸೂಚಿಸುವಂತೆ ಮನವಿ ಮಾಡಿಕೊಂಡಿದ್ದಾರೆ. ಯಶ್ ಹುಟ್ಟುಹಬ್ಬವನ್ನು ಆಚರಿಸದೆ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದರು. ಆದರೆ ಇಂಥ ದುರ್ಘಟನೆ ನಡೆದಿರುವುದು ನಿಜಕ್ಕೂ ಬೇಸರದ ಸಂಗತಿ.