ಶ್ರೀಕಾಂತ್ ಪೂಜಾರಿಗೆ ಜಾಮೀನು : ಡಿಸಿಎಂ ಡಿಕೆ ಶಿವಕುಮಾರ್ ಫಸ್ಟ್ ರಿಯಾಕ್ಷನ್

suddionenews
1 Min Read

ಬೆಂಗಳೂರು: ಶ್ರೀಕಾಂತ್ ಪೂಜಾರಿಗೆ ಇಂದು ಕೋರ್ಟ್ ಜಾಮೀನು ನೀಡಿದೆ. ಈ ಸಂಬಂಧ ಡಿಸಿಎಂ ಡಿಕೆ ಶಿವಕುಮಾರ್ ಅವರು ಪ್ರತಿಕ್ರಿಯೆ ನೀಡಿದ್ದಾರೆ. ವಿಚಾರ ಗೊತ್ತಾಯ್ತು. ಅವರಿಗೆ ಪ್ರಶ್ನೆ ಮಾಡುವುದಕ್ಕೆ ಎಲ್ಲಾ ತರಹದ ಹಕ್ಕು ಇದೆ. ರಾಜಕೀಯ ನಡೀತಾ ಇದೆ. ಏನು ಮಾಡುವುದಕ್ಕೆ ಆಗಲ್ಲ. ನಾವೂ ನಂಬಿರುವಂತ ಕಾನೂನಿನ ಮೇಲೆ, ಭಗವಂತನ ಮೇಲೆ, ನಿಮ್ಮ ಮೇಲೆ ಎಲ್ಲರ‌ ಮೇಲೂ ನಂಬಿಕೆ ಇದೆ. ಕೆಲ ಅಧಿಕಾರಿಗಳು ರಾಜಕಾರಣ ಮಾಡುತ್ತಾ ಇದಾರೆ. ಮಾಡಲಿ. ಸಮಯ ಬರುತ್ತೆ. ಕಾಲ ಚಕ್ರ ತಿರುಗುತ್ತಾ ಇದೆ. ನ್ಯಾಯಾಲಯಕ್ಕೆ ಪ್ರಶ್ನೆ ಮಾಡುವುದಕ್ಕೆ ಆಗುತ್ತಾ ಎಂದು ಪ್ರಶ್ನಿಸಿದ್ದಾರೆ.

 

ಇದೇ ವೇಳೆ ಶ್ರೀಕಾಂತ್ ಪೂಜಾರಿ ಅವರ ಪರ ವಾದ ಮಂಡಿಸಿದ ವಕೀಲರು ಪ್ರತಿಕದರಿಯೆ ನೀಡಿದ್ದು, ಜಾಮೀನು ಮಂಜೂರಾಗಿದೆ. ಮಾನ್ಯ ನ್ಯಾಯಾಲಯ ಹಾಕಿರುವಂತ ಷರತ್ತು ಏನು ಎಂಬ ಪ್ರತಿ ಇನ್ನೇನು ಕೈಸೇರಲಿದೆ. ಏನೆಲ್ಲಾ ಷರತ್ತು ಹಾಕಬಹುದು ಎಂಬ ನಿರೀಕ್ಷೆಯಿಂದ ಎಲ್ಲದನ್ನೂ ತಯಾರಿ ಮಾಡಿಕೊಂಡಿದ್ದೀವಿ. ಇಬ್ಬರು ಜಾಮೀನು ನೀಡುವವರ ಸಹಿ ಹಾಗೂ ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಸಂಗ್ರಹ ಮಾಡಿ ಇಟ್ಟಿದ್ದೇವೆ. ಅದರ ಪ್ರತಿ ಸಿಕ್ಕ ತಕ್ಷಣ ಅದನ್ನೆಲ್ಲಾ ನ್ಯಾಯಾಲಯಕ್ಕೆ ಸಲ್ಲಿಕೆ ಮಾಡಿ, ಇವತ್ತೆ ಅವರನ್ನು ಬಿಡಿಸಿಕೊಂಡು ಬರಲಿದ್ದೇವೆ.

ಮೂವತ್ತೊಂದು ವರ್ಷಗಳ ಹಿಂದಿನ ಒಂದು ಪ್ರಕರಣದಲ್ಲಿ ಎಫ್ಐಆರ್ ಆಗಲಿ, ದೂರಿನ ಪ್ರತಿಯಾಗಲಿ ಇರಲಿಲ್ಲ. ರಿಕಾರ್ಡ್ ರೂಮಿನಲ್ಲಿ ಕೂಡ ಇರಲಿಲ್ಲ. ಅದಕ್ಕೆ ಅರ್ಜಿ ಕೊಟ್ಟಾಗ ಅಲ್ಲಿಂದ ಕೂಡ ಸರಿಯಾದ ಮಾಹಿತಿ ಸಿಕ್ಕಿರಲಿಲ್ಲ. ಇದನ್ನು ನ್ಯಾಯಾಲಯದ ಗಮನಕ್ಕೆ ತಂದಿದ್ದೀವಿ. ಕರಸೇವಕರ ಮೇಲೆ ಬೇರೆ ಬೇರೆ ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಇದಕ್ಕೆ ಸಂಬಂಧಪಟ್ಟ ಎಲ್ಲಾ ಮಾಹಿತಿಯನ್ನು ನ್ಯಾಯಾಲಯಕ್ಕೆ ನೀಡಿದ್ದೇವೆ ಎಂದು ಶ್ರೀಕಾಂತ್ ಪೂಜಾರಿ ಅವರ ಪರ ನ್ಯಾಯಾಲಯದಲ್ಲಿ ವಾದ ಮಂಡಿಸಿ, ಜಾಮೀನು ಮಂಜೂರಾಗಲಿದೆ.

Share This Article
Leave a Comment

Leave a Reply

Your email address will not be published. Required fields are marked *