Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ರಾಜ್ಯ ಸರ್ಕಾರ ರೈತರನ್ನು ಕೀಳಾಗಿ ಕಾಣುತ್ತಿದೆ : ವಾಸುದೇವ ಮೇಟಿ ಕಿಡಿ

Facebook
Twitter
Telegram
WhatsApp

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ ಜ. 05 : ಸರ್ಕಾರ ಬರ ಪರಿಹಾರವಾಗಿ ಹೆಕ್ಟರ್ ಒಂದಕ್ಕೆ 2 ಸಾವಿರ ನೀಡುತ್ತಿದೆ. ಒಂದು ಜೊತೆ ಚಪ್ಪಲಿಯ ಬೆಲೆ 2 ಸಾವಿರ ಇದೆ. ಸರ್ಕಾರ ನಮ್ಮನ್ನು ಚಪ್ಪಲಿಗಿಂತ ಕೀಳಾಗಿ ಕಾಣುತ್ತಿದೆ. ಎಂದು ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ರಾಜ್ಯಾಧ್ಯಕ್ಷರಾದ ವಾಸುದೇವ ಮೇಟಿ ಸರ್ಕಾರದ ಮೇಲೆ ಕಿಡಿ ಕಾರಿದ್ದಾರೆ.

ನಗರದ ಪತ್ರಿಕಾ ಭವನದಲ್ಲಿ ಶುಕ್ರವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಅಭಿವೃದ್ಧಿ ಕಾಣೆಯಾಗಿದೆ. ನೀರಾವರಿ ಸಚಿವರು ಆಗಿರುವ ಉಪ ಮುಖ್ಯಮಂತ್ರಿಗಳು ಯಾವುದೇ ಜಿಲ್ಲೆಗೂ ಭೇಟಿ ಮಾಡಿಲ್ಲ. ಅವರು ಕೇವಲ ಬೆಂಗಳೂರಿಗೆ ಸೀಮಿತರಾಗಿದ್ದಾರೆ. ಬರಗಾಲ ನಿರ್ವಹಣೆಯಲ್ಲಿ ರಾಜ್ಯ ಸರ್ಕಾರ ಸಂಪೂರ್ಣ ವಿಫಲವಾಗಿದೆ. ಜನರು ಗುಳೇವು ಹೋಗುವ ದಿನಗಳು ದೂರವಿಲ್ಲ. ರಾಜ್ಯ ಸಂಪೂರ್ಣ ಬರದಿಂದ ಆವರಿಸಿದೆ.. ಜಾನುವಾರುಗಳಿಗೆ ಮೇವಿನ ಅಭಾವ ಉಂಟಾಗಿದೆ.. ಕೂಡಲೇ ಸರ್ಕಾರ ಮೇವು ಬ್ಯಾಂಕ್‍ಗಳನ್ನು, ಗೋ-ಶಾಲೆಗಳನ್ನು ತೆರೆಯಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.

ರಾಜ್ಯದ ನೀರಾವರಿ ಸಚಿವರಾದ ಡಿ.ಕೆ.ಶಿವಕುಮಾರ್ ಇಲಾಖೆಯನ್ನು ಸಮರ್ಥವಾಗಿ ನಿಭಾಯಸುವಲ್ಲಿ ವಿಫಲರಾಗಿದ್ದಾರೆ. ನೀರಾವರಿ ಯೋಜನೆಗಳನ್ನು ಪೂರ್ಣ ಮಾಡುವ ಕಡೆಗೆ ಗಮನ ನೀಡುತ್ತಿಲ್ಲ ಇದರಿಂದ ಡಿ.ಕೆ ಶಿವಕುಮಾರ್ ರವರಿಂದ ರಾಜೀನಾಮೆ ಪಡೆದು ನುರಿತ ಸಚಿವರನ್ನು ನೀರಾವರಿ ಸಚಿವರನ್ನಾಗಿ ನೇಮಕ ಮಾಡಬೇಕೆಂದು ಮುಖ್ಯಮಂತ್ರಿಗಳಲ್ಲಿ ಒತ್ತಾಯ ಮಾಡಿದರು. ರಾಜ್ಯದ ಎಲ್ಲಾ ಬಿಜೆಪಿ ಸಂಸದರಲ್ಲಿ ರಾಜ್ಯದಲ್ಲಿನ ದೊಡ್ಡ ನದಿಗಳಿಂದ ರೈತರಿಗೆ ನೀರಾವರಿ ಯೋಜನೆ ಕಲ್ಪಿಸಲು ಯೋಜನೆ ರೂಪಿಸಲು ಪ್ರಧಾನ ಮಂತ್ರಿಗಳನ್ನು ಒತ್ತಾಯ ಮಾಡಬೇಕಿದೆ ಎಂದು ರಾಮಚಂದ್ರಪ್ಪ ಒತ್ತಾಯಿಸಿದರು.

ಸರ್ಕಾರ ಬರ ಪರಿಹಾರವಾಗಿ ಹೆಕ್ಟರ್ ಒಂದಕ್ಕೆ 2 ಸಾವಿರ ನೀಡುತ್ತಿದೆ. ಒಂದು ಜೊತೆ ಚಪ್ಪಲಿಯ ಬೆಲೆ 2 ಸಾವಿರ ಇದೆ. ಸರ್ಕಾರ ನಮ್ಮನ್ನು ಚಪ್ಪಲಿಗಿಂತ ಕೀಳಾಗಿ ಕಾಣುತ್ತಿದೆ. ಬೇರೆ ಕಾಮಗಾರಿಗಳಿಗೆ ಕೋಟಿಗಟ್ಟಲೇ ಹಣವನ್ನು ನಿಡುವ ಸರ್ಕಾರ ರೈತರಿಗೆ ನೀಡುವಾಗ ಮಾತ್ರ ಹಿಡಿತವನ್ನು ಸಾಧಿಸುತ್ತದೆ. ಇದು ಸರಿಯಾದ ಕ್ರಮವಲ್ಲ ನಾವು ಎಲ್ಲರಿಗೂ ಅನ್ನವನ್ನು ನೀಡುವಂತ ಅನ್ನದಾತರು ನಮ್ಮ ಬಗ್ಗೆ ಈ ರೀತಿಯಾದ ಹಗುರವಾದ ನಿರ್ಧಾರ ಸರಿಯಲ್ಲ ಇದರ ಬಗ್ಗೆ ಆಲೋಚನೆ ಮಾಡಿ ಎಕರೆಗೆ 20 ಸಾವಿರೂ ಪರಿಹಾರವನ್ನು ನೀಡಬೇಕು ಅದು ಅಲ್ಲದೆ ಬೆಳೆ ವಿಮೆ ಸಹಾ ಬಂದಿಲ್ಲ ಇದರ ಬಗ್ಗೆಯೂ ಸಹಾ ಸರ್ಕಾರ ಆಲೋಚನೆ ಮಾಡಬೇಕಿದೆ ರೈತರನ್ನು ಗೋಳಿಸಬಾರದೆಂದು ಮುಖ್ಯಮಂತ್ರಿಗಳಿಗೆ ಕಿವಿ ಮಾತು ಹೇಳಿದರು.

ನರೇಗಾ ಯೋಜನೆಯಲ್ಲಿ ಜನರಿಗೆ ಕೆಲಸಗಳನ್ನು ನೀಡಲು ಕ್ರಮ ವಹಿಸಬೇಕು. ಈ ಹಿಂದೆ ವಿದ್ಯುತ್ ಪರಿವರ್ತಕಗಳನ್ನು ಉಚಿತವಾಗಿ ನೀಡುತ್ತಿದ್ದರು.. ಈಗ ರೈತರೇ ಕೊಂಡುಕೊಳ್ಳಬೇಕು ಎಂದು ಆದೇಶ ಮಾಡಿದ್ದಾರೆ ಇದನ್ನು ವಾಪಾಸ್ ಪಡೆಯಬೇಕು ಎಂದ ಅವರು, ಎಲ್ಲವನ್ನು ಜನರೇ ಮಾಡುವುದಾದರೆ ಸರ್ಕಾರ ಏಕೆ ಬೇಕು ಈ ಹಿಂದೆ ಸರ್ಕಾರವೇ ಎಲ್ಲವನ್ನು ಉಚಿತವಾಗಿ ನೀಡುತ್ತಿತ್ತು ಆದರೆ ಹೊಸದಾಗಿ ಕಾನೂನು ತಂದು ಹಣವನ್ನು ಭರ್ತಿ ಮಾಡಿ ಎನ್ನುತ್ತಿದೆ ಇದು ಸರಿಯಾದ ಕ್ರಮವಲ್ಲ ಕೂಡಲೇ ಈ ಕಾನೂನನ್ನು ವಾಪಾಸ್ಸು ಪಡೆಯುವಂತೆ ಸರ್ಕಾರವನ್ನು ಆಗ್ರಹಿಸಿದರು.

ಗೋಷ್ಟಿಯಲ್ಲಿ ಜಿಲ್ಲಾಧ್ಯಕ್ಷರಾದ ಲಕ್ಷ್ಮೀಕಾಂತ್, ಪ್ರಕಾಶ್, ಸಂಗಣ್ಣ, ಎಸ್.ಕೆ.ಪೂಜಾರ್, ಬಸವರಾಜ್, ಭೀಮಣ್ಣ, ಮರಳುಸಿದ್ದಪ್ಪ, ಭಗಸಿಂಗ್ ಹನುಮಂತ ಕೆಂಚನಗೌಡ ಸೇರಿದಂತೆ ಇತರರು ಭಾಗವಹಿಸಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ರಾಶಿಯವರ ಹಣಕಾಸಿನ ಸಮಸ್ಯೆಯಿಂದಾಗಿ ನೆಮ್ಮದಿಗೆ ಭಂಗ

ರಾಶಿಯವರ ಹಣಕಾಸಿನ ಸಮಸ್ಯೆಯಿಂದಾಗಿ ನೆಮ್ಮದಿಗೆ ಭಂಗ : ಈ ರಾಶಿಯವರ ಕುಟುಂಬದಲ್ಲಿ ಒಬ್ಬರಿಂದ ಅಶಾಂತಿಯ ವಾತಾವರಣ: ಸೋಮವಾರ ರಾಶಿ ಭವಿಷ್ಯ -ನವೆಂಬರ್-25,2024 ಸೂರ್ಯೋದಯ: 06:30, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಚಿತ್ರದುರ್ಗ | ಬಾಪೂಜಿ ವಿದ್ಯಾಸಂಸ್ಥೆಯಲ್ಲಿ ಕನ್ನಡ ರಾಜ್ಯೋತ್ಸವ : ವಕೀಲರಿಗೆ ಸನ್ಮಾನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು, ಕದಳಿ ಮಹಿಳಾ ವೇದಿಕೆ, ಬಾಪೂಜಿ ಸಮೂಹ ಸಂಸ್ಥೆಗಳು, ರಂಗಸೌರಭ ಕಲಾ ಸಂಘ ಹಾಗೂ ಶ್ರೀ ಶಿವಕುಮಾರ ಕಲಾ ಸಂಘ ಇವರ ಸಂಯುಕ್ತ

ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಸೋಲಿಗೆ ಆ ಐವರು ಕಾರಣವೇ ?

ಸುದ್ದಿಒನ್ | ಮಹಾರಾಷ್ಟ್ರ ಚುನಾವಣೆಯ ಇತಿಹಾಸದಲ್ಲಿ ಮೊದಲ ಬಾರಿಗೆ ಕಾಂಗ್ರೆಸ್ ಪಕ್ಷ ಕೇವಲ 16 ಸ್ಥಾನಗಳನ್ನು ಗೆದ್ದಿದೆ. ಭಾರೀ ಸೋಲಿನ ನಂತರ ಪಕ್ಷವು ಇವಿಎಂಗಳಿಂದ ನಮಗೆ ಸೋಲಾಗಿದೆ ಎಂದು ದೂರಿದೆ. ಇವಿಎಂಗಳ ದತ್ತಾಂಶದಿಂದಾಗಿ ಚುನಾವಣೆ

error: Content is protected !!