ಬೆಂಗಳೂರು: ಇನ್ನು ನಿಗಮ ಮಂಡಳಿ ಸ್ಥಾನಗಳು ಫೈನಲ್ ಆಗಿಲ್ಲ. ಈ ವಿಚಾರವಾಗಿ ಮಾತನಾಡಿರುವ ಸಚಿವ ರಾಜಣ್ಣ, ನಿಗಮ ಮಂಡಳಿದು 4-5ರಂದು ಸಿಎಂ ಮತ್ತು ಡಿಸಿಎಂ ಹೋಗುತ್ತಾ ಇದ್ದಾರೆ. ಲೋಕಸಭಾ ಅಭ್ಯರ್ಥಿಗಳ ಬಗ್ಗೆಯೂ ಚರ್ಚೆ ಮಾಡುತ್ತಾರೆ, ನಿಗಮ ಮಂಡಳಿಗಳ ಬಗ್ಗೆಯೂ ಚರ್ಚೆ ಮಾಡುತ್ತಾರೆ. ಬಳಿಕ ಅಂತಿಮ ನಿರ್ಧಾರಕ್ಕೆ ಬರುತ್ತಾರೆ. ಕಾರ್ಯಕರ್ತರಿಂದ ತಾನೇ ನಾವೆಲ್ಲ ಶಾಸಕರಾಗುವುದು. ಕಾರ್ಯಕರ್ತರಿಗೂ ಸ್ಥಾನ ಸಿಗಬೇಕು. ಶಾಸಕರು ಹಾಗೂ ಕಾರ್ಯಕರ್ತರಿಗೆ ನೀಡಿ ಸಮತೋಲನ ಕಾಪಾಡಬೇಕಿದೆ ಎಂದಿದ್ದಾರೆ.
ಇದೆ ವೇಳೆ ಪ್ರತಾಪ್ ಸಿಂಹ ಸಹೋದರ ವಿಕ್ರಂ ಸಿಂಹ ಬಂಧನದ ಬಳಿಕ ಮಗನ ಮೇಲಿನ ಪ್ರೀತಿಗಾಗಿ ಈ ರೀತಿ ಮಾಡಿದ್ದಾರೆಂದು ಸಿದ್ದರಾಮಯ್ಯ ವಿರುದ್ಧ ಆಕ್ರೋಶ ಹೊರಹಾಕಿದ್ದರು. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ರಾಜಣ್ಣ ಅವರು, ಅವರ ತಮ್ಮ ಕಳ್ಳ ಎಂಬುದು ಈಗಾಗಲೇ ಆರೋಪ ಸಾಬೀತಾಗಿದೆ. ಅಂಥವರಿಗೆ ಇವರು ಬೆಂಬಲ ಕೊಡುತ್ತಾರೆ ಅಂತ ನಾವೂ ಭಾವಿಸಬಹುದಾ..? ಮರಗಳ್ಳರಿಗೆ ಪದರತಾಪ್ ಸಿಂಹ ಬೆಂಬಲ ಅಂತ ಹೇಳಬಹುದಲ್ಲವಾ..? ಯಾವುದೋ ಕಾರಣಕ್ಕೆ ಯಾರನ್ನೋ ಟೀಕೆ ಮಾಡುವುದು ಸರಿಯಲ್ಲ. ಕಾನೂನು ಕ್ರಮ ಜಾರಿ ಇದೆ. ಅದೆಲ್ಲವನ್ನು ಕೋರ್ಟ್ ನೋಡಿಕೊಳ್ಳುತ್ತದೆ.
ಕಾಂಗ್ರೆಸ್ ನವರು ಅಲ್ಲಿ ಮರ ತೆಗೆದುಕೊಂಡು ಹೋಗಿ ಇಟ್ಟು, ಅವರ ತಮ್ಮನ್ನೋ, ಅಣ್ಣನ್ನೋ ಸಿಕ್ಕಿ ಹಾಕಿಸಿದ್ದಾರಾ..? ಅವರೇ ಕತ್ತರಿಸಿದ್ದಾರೆ, ಅವರೆ ಸಿಕ್ಕಿ ಹಾಕಿಕೊಂಡಿದ್ದಾರೆ. ರಾಜಕೀಯ ಪ್ರೇರಿತ ಅಂದರೆ ನೀವೂ ಒಪ್ಪುತ್ತೀರಾ ಅದನ್ನೇ ಹೇಳಿ. ಯಾರೇ ತಪ್ಪನ್ನು ಮಾಡಿರಲಿ. ಕಾಂಗ್ರೆಸ್ ಪಕ್ಷದವರೇ ಮಾಡಿದರಲಿ, ಇನ್ನೊಂದು ಪಕ್ಷದವರೇ ಮಾಡಿರಲಿ. ಕಾನೂನು ಎಲ್ಲರಿಗೂ ಒಂದೇ. ಕಾನೂನಿನಲ್ಲಿ ಯಾರೂ ತಪ್ಪಿತಸ್ಥರು ಎಂದು ಪ್ರೂವ್ ಆಗುತ್ತೋ, ಅದು ಆಕ್ಷನ್ ತೆಗೆದುಕೊಳ್ಳುತ್ತದೆ ಎಂದಹ ಸಚಿವ ರಾಜಣ್ಣ ತಿಳಿಸಿದ್ದಾರೆ.