ಬೆಂಗಳೂರು: ರಾಜ್ಯದಲ್ಲಿ ಇರುವುದು ಹಿಂದೂ ವಿರೋಧಿ ಸರ್ಕಾರ. ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದೂ ವಿರೋಧಿ ಸರ್ಕಾರ ಅನ್ನುವುದನ್ನ ಪದೇ ಪದೇ ರಾಜ್ಯದ ಜನರಿಗೆ ದೇಶದ ಜನರಿಗೆ ನೆನಪು ಮಾಡುವಂತ ಕೆಲಸವನ್ನು ಬಹಳ ಯಶಸ್ವಿಯಾಗಿ ಮಾಡಿಕೊಂಡು ಬರುತ್ತಿದೆ. ನಿನ್ನೆ ಹುಬ್ಬಳ್ಳಿಯಲ್ಲಿ 31 ವರ್ಷದ ಹಳೆಯ ಕೇಸನ್ನು ರೀಓಪನ್ ಮಾಡಿದ್ದಾರೆ. ಐದು ವರ್ಷ ಅಲ್ಲ ಹತ್ತು ವರ್ಷ ಅಲ್ಲ, 31 ವರ್ಷದ ಹಳೆಯ ಕೇಸನ್ನು ರೀ ಓಪನ್ ಮಾಡಿ, ಹಿಂದೂ ಕಾರ್ಯಕರ್ತ ಶ್ರೀಕಾಂತ್ ಪೂಜಾರಿ ಅವರನ್ನು ಬಂಧ ಮಾಡಿರುವುದನ್ನು ಬಿಜೆಪಿ ಪಕ್ಷ ಬಲವಾಗಿ ಖಂಡಿಸುತ್ತೇವೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ವಾಗ್ದಾಳಿ ನಡೆಸಿದ್ದಾರೆ.
ಯಾವ ಸಂದರ್ಭದಲ್ಲಿ ಹಿಂದೂ ಕಾರ್ಯಕರ್ತ, ರಾಮ ಭಕ್ತನನ್ನು ಬಂಧಿಸಿದ್ದಾರೆ ಎಂದು ಹೇಳಿದರ, ಇಡೀ ರಾಜ್ಯದಲ್ಲಿ, ಇಡೀ ದೇಶದಲ್ಲಿ ಕೋಟ್ಯಾಂತರ ಹಿಂದೂಗಳು ಜನವರಿ 22 ರಂದು ಅಯೋಧ್ಯೆಯಲ್ಲಿ ಭಗವಾನ್ ಶ್ರೀ ರಾಮನ ಪ್ರತಿಷ್ಠಾಪನೆ ಆಗುತ್ತಿರುವ ಒಂದು ಶುಭ ಸಂದರ್ಭದಲ್ಲಿ, ಇಡೀ ದೇಶದಲ್ಲಿ ಇಂದು ಸಂಭ್ರಮದ ವಾತಾವರಣ ಇದೆ, ಆಚರಣೆ ನಡೆಯುತ್ತಿದೆ. ಆದರೆ ಇಂಥ ಸಂದರ್ಭವನ್ನು ಆಯ್ಕೆ ಮಾಡಿಕೊಂಡಿರುವ ಕಾಂಗ್ರೆಸ್ ಸರ್ಕಾರ, ಒಂದು ಹಿಂದೂ ವಿರೋಧಿ ಸರ್ಕಾರ ಎಂಬುದನ್ನು ಬರೊಇ ಕರ್ನಾಟಕಕ್ಕೆ ಅಷ್ಟೇ ಅಲ್ಲ, ಇಡೀ ದೇಶಕ್ಕೆನೇ ತೋರಿಸಿಕೊಟ್ಟಿದ್ದಾರೆ.
ನಿನ್ನೆಯ ದಿನ ಆ ರಾಮನ ಪ್ರತಿಮೆಯನ್ನು ನಮ್ಮ ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಅವರು ಅದನ್ನಜ ಕೆತ್ತನೆ ಮಾಡಿದ್ದಾರೆಂದು ಬಹಳ ಸಂಭ್ರಮದಿಂದ ಇದ್ದೀವಿ. ಇಂಥಹ ಸಂಭ್ರಮದಲ್ಲಿ ಕಾಂಗ್ರೆಸ್ ಸರ್ಕಾರ ಹಳೆಯ ಕೇಸನ್ನು ಮತ್ತೆ ತೆರೆದು ಶ್ರೀಕಾಂತ್ ಪೂಜಾರಿಯನ್ನು ಬಂಧಿಸಿರುವುದು ಬಿಜೆಪಿ ಖಂಡಿಸುತ್ತದೆ. ಅಷ್ಟೇ ಅಲ್ಲ ಹೋರಾಟಕ್ಕೆ ಕರೆಯನ್ನು ಕೊಡುತ್ತಿದ್ದೇವೆ. ಹಿಂದೂ ವಿರೋಧಿ ಸರ್ಕಾರ ಹಾಗೂ ಸಿದ್ದರಾಮಯ್ಯ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.