ಸುದ್ದಿಒನ್, ಚಿತ್ರದುರ್ಗ, ಜನವರಿ.01 : ಚಿತ್ರದುರ್ಗ ಗ್ರಾಮಾಂತರ ಪೊಲೀಸರು (Chitradurga Rural Police) ಅಂತರ್ ರಾಜ್ಯ ದರೋಡೆಕೋರರ (Robbery) ಹೆಡೆ ಮುರಿ ಕಟ್ಟಿದ್ದಾರೆ. ತಾಲ್ಲೂಕಿನ ಈಚಲನಾಗೇನಹಳ್ಳಿ ಬಳಿ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನಡೆದ ಒಂದೂವರೆ ಕೋಟಿ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ 10 ದರೋಡೆಕೋರರನ್ನು ಬಂಧಿಸಿದ್ದಾರೆ. ಹಾಗೂ
ರೂ 63,25,000/- ನಗದು ಹಣ, ಎರಡು ಕಾರು ಮತ್ತು ನಾಲ್ಕು ದ್ವಿಚಕ್ರವಾಹನಗಳನ್ನು ಜಪ್ತಿ ಮಾಡಿದ್ದಾರೆ.
ಡಿಸೆಂಬರ್ 3 ರಂದು ಚಿತ್ರದುರ್ಗ ತಾಲ್ಲೂಕು, ಹೊಸಹಳ್ಳಿ ಗ್ರಾಮದ ಅಡಿಕೆ ವ್ಯಾಪಾರಿ ಮಹಮ್ಮದ್ ಇರ್ಫಾನುಲ್ಲಾ ತನ್ನ ಸ್ನೇಹಿತ ಜಾಕೀರ್ ನೊಂದಿಗೆ ಹೈದರಾಬಾದ್‍ಗೆ ಹೋಗಿ ಅಡಿಕೆ ವ್ಯಾಪಾರ ಮಾಡಿ 1,50,00,000/-ರೂ ಹಣ ಪಡೆದುಕೊಂಡು, ಹೈದರಾಬಾದ್‍ನಿಂದ ಡಿಸೆಂಬರ್ 4 ರಂದು ಚಿತ್ರದುರ್ಗ ತಾಲ್ಲೂಕಿನ ಈಚಲನಾಗೇನಹಳ್ಳಿ ಬಳಿ ಕಾರನ್ನು ರಸ್ತೆಗೆ ಅಡ್ಡ ನಿಲ್ಲಿಸಿದ್ದು, 4 ಜನ ಅಪರಿಚಿತರು ಬಂದು ಮಹಮ್ಮದ್ ಇರ್ಪಾನುಲ್ಲಾ ಮತ್ತು ಆತನ ಸ್ನೇಹಿತನಿಗೆ ಕೈಕಾಲುಗಳಿಂದ ಹೊಡೆದು ಚಾಕು ತೋರಿಸಿ ಬೆದರಿಸಿ ತಮ್ಮ ಬಳಿಯಿದ್ದ ಎರಡು
ಹಣದ ಬ್ಯಾಗ್‍ಗಳನ್ನು ಬಲವಂತವಾಗಿ ಕಿತ್ತುಕೊಂಡು ಹೋಗಿದ್ದರು. ಈ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಹಣ ದರೋಡೆ ಮಾಡಿದವರ ದೂರು ದಾಖಲಾಗಿತ್ತು.
ಈ ಪ್ರಕರಣದಲ್ಲಿ ಕಳುವಾದ ಹಣ ಮತ್ತು ಆರೋಪಿತರನ್ನು ಪತ್ತೆಮಾಡಲು ಮಾನ್ಯ ಪೊಲೀಸ್ ಅಧೀಕ್ಷಕರವರ ಮಾರ್ಗದರ್ಶನದಲ್ಲಿ ಚಿತ್ರದುರ್ಗ ಉಪವಿಭಾಗದ ಉಪಾಧೀಕ್ಷಕರಾದ ಅನಿಲ್ ಕುಮಾರ್, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕರಾದ ಶ್ರೀ.ಮುದ್ದರಾಜ.ವೈ ಹಾಗೂ ಸಿಬ್ಬಂದಿ ಪ್ರಕರಣದ ತನಿಖೆ ಕೈಗೊಂಡಿದ್ದು, 10 ಮಂದಿ ಅಂತರ್ ಜಿಲ್ಲಾ ದರೋಡೆಕೋರರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪ್ರಸ್ತುತ ಎಲ್ಲಾ ಆರೋಪಿಗಳು ನ್ಯಾಯಾಂಗ
ಬಂಧನದಲ್ಲಿದ್ದು ತನಿಖೆ ಮುಂದುವರೆದಿದೆ.
ಬಂಧಿತರನ್ನು
1. ಶಶಿಕಿರಣ್ ಆರ್, 38 ವರ್ಷ, ಚರ್ಚ್ ಹತ್ತಿರ, ಕಾಳಿದಾಸ
ಸರ್ಕಲ್, ಬಿ. ಬ್ಲಾಕ್, ಜಯನಗರ, ದಾವಣಗೆರೆ ಟೌನ್.
2. ನವೀನ ಹೆಚ್, 19 ವರ್ಷ, ವಿಶಾಲ್ ಮೆಗಾ ಮಾರ್ಟ್ ಹತ್ತಿರ, ಕೆಂಪೆಗೌಡ ಲೇಔಟ್, ಬೆಂಗಳೂರು ನಗರ.
3. ಮಂಜುನಾಥ ಆರ್. 23 ವರ್ಷ, ಹೆಚ್.ಬಸವಪುರ ಗ್ರಾಮ, ಮಾಯಕೊಂಡ ಹೋಬಳಿ. ದಾವಣಗೆರೆ
4. ಪ್ರತಾಪಗೌಡ ಜಿ.ಎಸ್. 23 ವರ್ಷ, ಹಿಂಡಸನಕಟ್ಟೆ ಗ್ರಾಮ, ಮಾಯಕೊಂಡ ಹೋಬಳಿ. ದಾವಣಗೆರೆ
5. ಕಿರಣ್ ಎ. ತಂದೆ 21 ವರ್ಷ, ಚಿಕ್ಕಬೆನ್ನೂರು ಗ್ರಾಮ, ಸಂತೆಬೆನ್ನೂರು ಹೋಬಳಿ. ಚೆನ್ನಗಿರಿ ತಾಲ್ಲೂಕು,
6. ಮಹಮದ್ ಷಫೀಉಲ್ಲಾ, 23 ವರ್ಷ, ಹೊಸಹಳ್ಳಿ ಗ್ರಾಮ,
ಚಿತ್ರದುರ್ಗ ತಾಲ್ಲೂಕು & ಜಿಲ್ಲೆ.
7. ಎಸ್. ಸಮೀರ್ ಭಾಷಾ, 24 ವರ್ಷ, ಹೊಸಹಳ್ಳಿ ಗ್ರಾಮ, ಚಿತ್ರದುರ್ಗ
8. ಬಿ.ಕೆ. ಲಿಂಗರಾಜ, 42 ವರ್ಷ, ತಣಿಗೆರೆ ತಾಲ್ಲೂಕು,
ಸಂತೆಬೆನ್ನೂರು ಹೋಬಳಿ, ಚನ್ನಗಿರಿ ತಾಲ್ಲೂಕು. ದಾವಣಗೆರೆ
9. ಹುಸೇನ್ ಭಾಷ 19 ವರ್ಷ, ರಾಯಲ್ ರಘು ಬಿಲ್ಡಿಂಗ್, ಅಂಬಿ ಸರ್ಕಲ್ ಹತ್ತಿರ, 2ನೇ ಕ್ರಾಸ್, ರಾಜಗೋಪಾಲನಗರ, ಲಗ್ಗೆರೆ, ಬೆಂಗಳೂರು ನಗರ.
10. ಶ್ರೀನಿವಾಸ ಬಿ, 34 ವರ್ಷ, ಮಹೇಶ್
ಬಾರ್ಗವ ಬಿಲ್ಡಿಂಗ್, ಸರ್ಕಾರಿ ಪ್ರಾಥಮಿಕ ಪಾಠಶಾಲೆ ಮುಂಭಾಗ, 8ನೇ ಮೈಲು, ದೊಡ್ಡಬಿದರಕಲ್ಲು,
ಪೀಣ್ಯ, ಬೆಂಗಳೂರು ಟೌನ್
ಎಂದು ಗುರುತಿಸಲಾಗಿದೆ.
ಈ ಆರೋಪಿಗಳಿಂದ ಒಟ್ಟು ರೂ 63,25,000/- ನಗದು ಹಣ,
ದರೋಡೆ ಮಾಡಿದ್ದ ಹಣದಲ್ಲಿ ಖರೀದಿಸಿದ ರೂ 9,00,000/- ಮೌಲ್ಯದ ಒಂದು ಕಾರು, ರೂ 1,34,286/-
ಬೆಲೆಯ ಒಂದು ಕೆ.ಟಿ.ಎಂ ದ್ವಿಚಕ್ರವಾಹನವನ್ನು ಮತ್ತು ಅರೋಪಿತರು ಕೃತ್ಯಕ್ಕೆ ಬಳಸಿದ ಒಂದು ಇಂಡಿಕಾ
ಕಾರು 3 ದ್ವಿಚಕ್ರವಾಹನಗಳನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ.
ಚಿತ್ರದುರ್ಗ ಗ್ರಾಮಾಂತರ ಪೊಲೀಸರ ಈ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಚಿತ್ರದುರ್ಗ ಉಪವಿಭಾಗದ ಉಪಾಧೀಕ್ಷಕರಾದ ಅನಿಲ್ ಕುಮಾರ್, ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಮುದ್ದರಾಜ.ವೈ ಪಿಐ, ರಂಗನಾಥ್
ಕುಮಾರ್, ಇದಾಯತ್‍ವುಲ್ಲಾ.ಜೆ, ಅವಿನಾಶ್, ತಿಮ್ಮರಾಯಪ್ಪ, ರಂಗಸ್ವಾಮಿ, ಲಿಂಗರಾಜು, ಮಾರುತಿ ರಾಮ್, ತಾರಾನಾಥ್, ಮಂಜುನಾಥ. ಎನ್.ಬಿ, ರಘುನಾಥ.ವಿ, ಎಎಸ್‍ಐ, ಹಾಗೂ ಸಿಬ್ಬಂದಿಗಳಾದ ರಮೇಶ್,
ವೀರಭದ್ರಪ್ಪ, ರಾಜುಮುಡಬಾಗಿಲು, ಗಣೇಶಪ್ಪ, ಮಹಂತೇಶ್, ಸುರೇಶ ಹಂಜಿ ರವರುಗಳ ಕಾರ್ಯವನ್ನು
ಮಾನ್ಯ ಪೊಲೀಸ್ ಅಧೀಕ್ಷಕರು ಶ್ಲಾಘಿಸಿ ಸೂಕ್ತ ಬಹುಮಾನವನ್ನು ಘೋಷಿಸಿರುತ್ತಾರೆ.