Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ವಿಶ್ವಮಾನವ ವಿದ್ಯಾಸಂಸ್ಥೆಯ ಕಾರ್ಯ ಎಲ್ಲರಿಗೂ ಮಾದರಿ : ಸಚಿವ ಮಧು ಬಂಗಾರಪ್ಪ ಶ್ಲಾಘನೆ

Facebook
Twitter
Telegram
WhatsApp

ಸುದ್ದಿಒನ್, ಚಿತ್ರದುರ್ಗ :  ರಾಜ್ಯದಲ್ಲಿ 300 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, ಮೂರು ವರ್ಷದಲ್ಲಿ 3,000 ಶಾಲೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ’ ಪಾಲಕರೇ ಸ್ವ ಇಚ್ಚೆಯಿಂದ ಬಂದು ಮಕ್ಕಳನ್ನು ಸರ್ಕಾರಿ ಆ ಶಾಲೆಗೆ ದಾಖಲಿಸುವ ವಾತಾವರಣ ನಿರ್ಮಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ತಿಳಿಸಿದರು.

ತಾಲ್ಲೂಕಿನ ಸೀಬಾರ ಗುತ್ತಿನಾಡು ವಿಶ್ವಮಾನವ ಸಾಂಸ್ಕೃತಿಕ ವಿದ್ಯಾಸಂಸ್ಥೆ ಆವರಣದಲ್ಲಿ ದ ಆಯೋಜಿಸಿದ್ದ ಭಾನುವಾರ ಸಂಸ್ಥೆಯ ರಜತ ಮಹೋತ್ಸವ ಹಾಗೂ ವಿದ್ಯಾರ್ಥಿ ಸಂಘದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದುಃಸ್ಥಿತಿಯ ಕಾರಣಕ್ಕೆ ಪಾಲಕರು ತಮ್ಮ ಮಕ್ಕಳನ್ನು ಸರ್ಕಾರಿ ಶಾಲೆಗಳಿಗೆ ಕಳುಹಿಸಲು ಹೆದರುತ್ತಿದ್ದಾರೆ. ಈ ಅಂಶವವನ್ನು ಗಮನದಲ್ಲಿಟ್ಟುಕೊಂಡು ಶಾಲೆಗಳನ್ನು ಅಭಿವೃದ್ಧಿ ಮಾಡಲು ಯೋಜನೆ ರೂಪಿಸಲಾಗಿದೆ ಎಂದರು.

‘ಪಾಲಕರೇ ಸ್ವ ಇಚ್ಚೆಯಿಂದ ಬಂದು ಮಕ್ಕಳನ್ನು ಸರ್ಕಾರಿ ಆ ಶಾಲೆಗೆ ದಾಖಲಿಸುವ ವಾತಾವರಣ ನಿರ್ಮಿಸಲಾಗುತ್ತದೆ. ರಾಜ್ಯದಲ್ಲಿ 300 ಕರ್ನಾಟಕ ಪಬ್ಲಿಕ್ ಶಾಲೆಗಳಿದ್ದು, ಮೂರು ವರ್ಷದಲ್ಲಿ 3,000 ಶಾಲೆಗಳನ್ನು ಪ್ರಾರಂಭಿಸುವ ಗುರಿ ಹೊಂದಲಾಗಿದೆ’ ಎಂದು ತಿಳಿಸಿದರು.

2024 ಡಿಸೆಂಬರ್ ಅಂತ್ಯಕ್ಕೆ ರಾಜ್ಯದ ಎಲ್ಲ ಶಾಲೆಗಳಿಗೂ ಡೆಸ್ಕ್ ವ್ಯವಸ್ಥೆ ಮಾಡಲಾಗುತ್ತದೆ. ಬುದ್ಧಿವಂತಿಕೆ, ವಿದ್ಯಾಭ್ಯಾಸದಲ್ಲಿ ಯಾವ ಜಾತಿ, ಧರ್ಮ ಬರುವುದಿಲ್ಲ, ಎಲ್ಲರೂ ಒಂದೇ. ಮುಖ್ಯವಾಗಿ ಮಕ್ಕಳಿಗೆ ಸಮಾನತೆ ಕೊಡಬೇಕು’ ಎಂದು ತಿಳಿಸಿದರು.

ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾಸಂಸ್ಥೆಯನ್ನು 25 ವರ್ಷಗಳಿಂದ ಕಟ್ಟಿ ಬೆಳೆಸುತ್ತಿರುವ ಸಂಸ್ಥೆಯ ರೂವಾರಿ ಎಚ್.ಜಲೀಲ್ ಸಾಬ್, ಕಾರ್ಯದರ್ಶಿ ನೀಲಕಂಠದೇವರು ಅವರ ಕಾರ್ಯ ಎಲ್ಲರಿಗೂ ಮಾದರಿ. 1,900 ಮಕ್ಕಳಿರುವ ಈ ಶಾಲೆಯಲ್ಲಿ ಉತ್ತಮ ಸೌಲಭ್ಯಗಳೊಂದಿಗೆ ಶಿಕ್ಷಣ ಒದಗಿಸಲಾಗುತ್ತಿದೆ ಎಂದು ತಿಳಿದಿದೆ ಎಂದರು.

ಸರ್ಕಾರ ಮಾಡುವ ಕೆಲಸವನ್ನು ವಿಶ್ವಮಾನವ ಶಾಲೆ ಮಾಡಿದೆ. ಈ ಸಂಸ್ಥೆಗೆ ಶಕ್ತಿ ಮೀರಿ ಸಹಕಾರ ನೀಡಲಾಗುತ್ತದೆ’ ಎಂದು ಭರವಸೆ ನೀಡಿದರು. ಕುವೆಂಪು ಅವರಿಗೆ ಮತ್ತು ನಮ್ಮ ಕುಟುಂಬಕ್ಕೆ ಅವಿನಾಭಾವ ಸಂಬಂಧವಿದೆ ಎಂದರು.

ವಿಶ್ವಮಾನವ ವಿದ್ಯಾಸಂಸ್ಥೆ ಕಾರ್ಯದರ್ಶಿ ಎಂ. ನೀಲಕಂಠದೇವ ಅವರು ಮಾತನಾಡಿ, ನಾವು ಗ್ರಾಮೀಣ ಪ್ರದೇಶಗಳಲ್ಲಿ 25 ವರ್ಷಗಳ ಹಿಂದೆ ಶಿಕ್ಷಣ ವಂಚಿತ ಮಕ್ಕಳನ್ನು ಗುರುತಿಸಿ ಹೊಸ ಭವಿಷ್ಯ ಸ್ಥಾಪಿಸಲು ಶಾಲೆ ಪ್ರಾರಂಭಿಸಲಾಯಿತು. ಬಡತನದಿಂದ ಮಕ್ಕಳಿಗೆ ವಿದ್ಯಾಭ್ಯಾಸ ಕೊಡಿಸದೇ ಕೂಲಿನಾಲಿ ಮಾಡುವ ಅನೇಕರ ಮಕ್ಕಳು ನಮ್ಮಲ್ಲಿ ಇದ್ದಾರೆ. ‌ಅನೇಕರು ಉತ್ತಮ ಸ್ಥಾನವನ್ನು ಅಲಂಕರಿಸಿದ್ದಾರೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ ಮಾತನಾಡಿ, ರಜತ ಮಹೋತ್ಸವ ಮಾಡುವ ಈ ಶಾಲೆಗೆ ಯಾವುದೇ ಸಹಕಾರ ಕೇಳಿದರು ನಮ್ಮ ಸರ್ಕಾರ ಮತ್ತು ವೈಯುಕ್ತಿಕವಾಗಿ  ನೀಡಲಾಗುತ್ತದೆ. ಸರ್ಕಾರದ ಸೌಲಭ್ಯ ಬಳಸಿಕೊಳ್ಳಿ ಎಂದರು.

ಹೊಳಲ್ಕೆರೆ  ಶಾಸಕ ಎಂ. ಚಂದ್ರಪ್ಪ, ಎಂ.ಎಲ್.ಸಿ ನವೀನ್ ಶಾಲೆಗೆ ಭೇಟಿ ಕೊಟ್ಟು ಶಾಲೆಗೆ ಬೇಕಾದ ಅಗತ್ಯ ನೆರವು ನೀಡುವುದಾಗಿ ತಿಳಿಸಿದರು.

ಶಾಲಾ ಶಿಕ್ಷಣ ఇಲಾಖೆ ಉಪನಿರ್ದೇಶಕ ಕೆ.ರವಿಶಂಕರ್ ರೆಡ್ಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಎಸ್. ನಾಗಭೂಷಣ್, ಮಾಜಿ ಸಚಿವ ಎಚ್‌. ಆಂಜನೇಯ, ಮಾಜಿ ಸಂಸದ ಬಿ.ಎನ್. ಚಂದ್ರಪ್ಪ ಮಾತನಾಡಿದರು. ಮಾಜಿ ಶಾಸಕ ಎ.ವಿ. ಉಮಾಪತಿ, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಕೆ.ತಾಜ್‌ಪೀ‌ರ್, ಸಂಸ್ಥೆಯ ಕಾರ್ಯದರ್ಶಿ ಎಂ.ನೀಲಕಂಠದೇವ, ರೂವಾರಿ ಎಚ್.ಜಲೀಲ್ ಸಾಬ್, ಬಿಜೆಪಿ ಯುವ ಮುಖಂಡ ರಘುಚಂದನ್ ಇದ್ದರು.

ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು. ಪ್ರಾಥಮಿಕ ಶಾಲೆ, ಪ್ರೌಢಶಾಲಾ ಮತ್ತು ಕಾಲೇಜಿನ ಎಲ್ಲಾ ಸಿಬ್ಬಂದಿಗಳನ್ನು ಸನ್ಮಾನಿಸಲಾಯಿತು.

ವಿಶ್ವಮಾನವ ಸಾಂಸ್ಕೃತಿಕ ಮತ್ತು ವಿದ್ಯಾ ಸಂಸ್ಥೆಯ ರಜತ ಮಹೋತ್ಸವದಲ್ಲಿ ರೂವಾರಿಗಳಾದ ಜಲೀಲ್ ಸಾಬ್ ಮತ್ತು ಕಾರ್ಯದರ್ಶಿ ಎಂ ನೀಲಕಂಠದೇವ ಅವರನ್ನು ಋಷಿಸಂಸ್ಕೃತಿ ಗುರುಕುಲ ಮಹಾಸಂಸ್ಥಾನ ವತಿಯಿಂದ ಸನ್ಮಾನಿಸಲಾಯಿತು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಜೀರ್ಣ, ಮಲಬದ್ಧತೆ ಸಮಸ್ಯೆನ್ನು ಎಂದಿಗೂ ನಿರ್ಲಕ್ಷಿಸಬೇಡಿ : ಇದು ಹೃದಯಕ್ಕೆ ತೊಂದರೆ

ನಮ್ಮ ದೇಹದಲ್ಲಿ ಸಣ್ಣ ಪುಟ್ಟ ಸಮಸ್ಯೆಯಾದರೂ ಕೆಲವೊಂದು ಆರೋಗ್ಯ ಸಮಸ್ಯೆಗೆ ಕಾರಣವಾಗುತ್ತದೆ. ಸುಮಾರು ಜನಕ್ಕೆ ಅಜೀರ್ಣ ಹಾಗೂ ಮಲಬದ್ಧತೆಯ ಸಮಸ್ಯೆ ಕಾಡುತ್ತಿರುತ್ತದೆ. ಇದು ಕಾಮನ್ ತಾನೇ ಎಂದು ನಿರ್ಲಕ್ಷ್ಯ ಮಾಡಿದರೆ ಅದರಿಂದ ಮುಂದೆ ಹೃದಯಕ್ಕೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ

ಈ ರಾಶಿಯವರಿಗೆ ಅಡಚಣೆ ಸಮಸ್ಯೆದಿಂದ ಬೇಸತ್ತು ಜೀವನದಲ್ಲಿ ಜಿಗುಪ್ಸೆ: ಈ ರಾಶಿಯವರಿಗೆ ಒಳ್ಳೆಯ ಸಂಬಂಧ ಮದುವೆಗೆ ಒಲೆಯಲಿದೆ ಶುಕ್ರವಾರರಾಶಿ ಭವಿಷ್ಯ -ನವೆಂಬರ್-22,2024 ಸೂರ್ಯೋದಯ: 06:29, ಸೂರ್ಯಾಸ್ತ : 05:35 ಶಾಲಿವಾಹನ ಶಕೆ -1946 ಸಂವತ್-2080

ಗೋಲ್ಡ್ ರೇಟ್ ಇಂದು ಕೂಡ ಹೆಚ್ಚಳ : ಗ್ರಾಂಗೆ ಎಷ್ಟು ಏರಿಕೆ ಆಯ್ತು..?

ಬೆಂಗಳೂರು: ಚಿನ್ನ ಬೆಳ್ಳಿಯ ಬೆಲೆಯಲ್ಲಿ ಹಾವು ಏಣಿಯ ಆಟ ಕೆಲ ದಿನದಿಂದ ಕಾಣಿಸ್ತಾ ಇದೆ. ಹಾವು ಮೇಲೇರಿದಂತೆ ಚಿನ್ನದ ಬೆಲೆ ಸರಸರನೆ ಏರುತ್ತಲೆ ಇದೆ. ಇಂದು ಕೂಡ ಇಳಿಕೆಯಾಗದೆ ಏರಿಕೆಯತ್ತಲೇ ಮುಖ ಮಾಡಿದೆ. ಹಾಗಾದ್ರೆ

error: Content is protected !!