ಬೆಂಗಳೂರು: ಕೇರಳದ ಖಾಸಗಿ ವಾಹಿನಿಯೊಂದಕ್ಕೆ ಡಿಕೆ ಶಿವಕುಮಾರ್ ಹೂಡಿಕೆ ಮಾಡಿದ್ದರ ಬಗ್ಗೆ ಸ್ಪಷ್ಟನೆ ಕೇಳಿ ಸಿಬಿಐ ನೋಟೀಸ್ ನೀಡಿದೆ. ಈಗಾಗಲೇ ಆದಾಯ ಮೀರಿ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡಿಸಿಎಂ ಡಿಕೆ ಶಿವಕುಮಾರ್ ಮೇಲಿನ ಕೇಸನ್ನು ಸರ್ಕಾರ ವಾಪಸ್ ತೆಗೆದುಕೊಂಡಿದೆ. ಹೀಗಾದರೂ ಮತ್ತೆ ನೋಟೀಸ್ ನೀಡಿದೆ. ಈ ಬಗ್ಗೆ ಡಿಸಿಎಂ ಡಿಕೆ ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬೆಂಗಳೂರಿನಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ಹಾಪ್ ಕಾಮ್ಸ್, ಸಬ್ ರಿಜಿಸ್ಟರ್ ಎಲ್ಲದಕ್ಕೂ ಕೊಟ್ಟಿದ್ದಾರೆ. ಈ ಕೇಸನ್ನು ಸರ್ಕಾರ ಕೈ ಬಿಟ್ಟಿದೆ. ಆದರೂ ಅವರು ಯಾವ ಲೆಕ್ಕಾಚಾರದಲ್ಲಿ ನೋಟೀಸ್ ಕೊಟ್ಟಿದ್ದಾರೆ ಎಂಬುದು ಗೊತ್ತಿಲ್ಲ. ಅವರ ಬಳಿ ಎಲ್ಲಾ ದಾಖಲೆಯೂ ಇದೆ. ಆ ಪ್ರಕಾರ ಲೋಕಾಯುಕ್ತರಿಗೆ ಎಲ್ಪಾ ದಾಖಲೆಗಳನ್ನು ನೀಡಬೇಕು ಎಂಬುದು ನನಗೆ ತಿಳಿದಿರುವ ಕಾನೂನು. ಅವರು ಯಾವ ರೀತಿ ನಡೆದುಕೊಳ್ಳುತ್ತಿದ್ದಾರೆ ಗೊತ್ತಿಲ್ಲ.
ಅದರಲ್ಲಿ ದೊಡ್ಡ ದೊಡ್ಡ ಜನ ಇದ್ದಾರೆ. ನನಗೆ ಗೊತ್ತಿಲ್ಲ ಅಂತ ಏನಿಲ್ಲ. ಅವರು ಏನು ಬೇಕಾದರೂ ಮಾಡಲಿ. ಅವರು ಏನು ಬೇಕಾದರೂ ಮಾಡಲಿ. ನನ್ನ ರಾಜಕೀಯ ಭವಿಷ್ಯ ಮುಗಿಸಬೇಕು, ತೊಂದರೆ ಮಾಡಬೇಕು ಅನ್ನೋ ಪ್ರಯತ್ನ ನಡೆಯುತ್ತಿದೆ. ಕೆಲ ಬಿಜೆಪಿ ನಾಯಕರು ಆ ಮಾತನ್ನು ಈ ಮೊದಲೇ ಹೇಳಿದ್ದರು. ನಾನು ಆ ಬಗ್ಗೆ ಚರ್ಚೆ ಮಾಡೋಣಾ ಅಂತ ಕೂಡ ಕರೆದಿದ್ದೆ.
ನಮ್ಮ ಸಂಸ್ಥೆಗೆ ಬಂದಿದೆ. ನಾನೇ ಮುಖ್ಯಸ್ಥ. ನನ್ನ ಮಕ್ಕಳು, ಹೆಂಡತಿ, ಕುಟುಂಬಸ್ಥರು ಕೇಳುತ್ತಾ ಇದ್ದಾರೆ ಎಂದು ನೋಟೀಸ್ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.