ಪಕ್ಷದ ಕಾರ್ಯಕರ್ತರಿಗೂ ಸೂಕ್ತ ಸ್ಥಾನಮಾನ : ಡಿಕೆ ಶಿವಕುಮಾರ್

suddionenews
1 Min Read

ಬೆಂಗಳೂರು: ಕಾಂಗ್ರೆಸ್ ನಲ್ಲಿ ನಿಗಮ ಮಂಡಳಿ ಸ್ಥಾನಮಾನಗಳದ್ದೇ ದೊಡ್ಡ ಸವಾಲಾಗಿದೆ. ಡಿಸಿಎಂ ಡಿಕೆ ಶಿವಕುಮಾರ್ ಹಾಗೂ ಸಿಎಂ ಸಿದ್ದರಾಮಯ್ಯ ನಡುವೆ ಈ ವಿಚಾರಕ್ಕೆ ಫೈಟ್ ನಡೆಯುತ್ತಲೆ ಇದೆ. ಉದೀಗ ಫೈನಲ್ ಹಂತ ತಲುಪಿದ್ದು, ಕಾರ್ಯಕರ್ತರಿಗೂ ಸೂಕ್ತ ಸ್ಥಾನಮಾನ ನೀಡುವ ಬಗ್ಗೆ ಮಾತನಾಡಿದ್ದಾರೆ.

ಸದಾಶಿವನಗರದಲ್ಲಿ ಮಾತನಾಡಿದ ಡಿಕೆ ಶಿವಕುಮಾರ್, ನಿಗಮ ಮಂಡಳಿಗಳಲ್ಲಿ ಶಾಸಕರಷ್ಟೇ ಸ್ಥಾನಮಾನವನ್ನು, ಕಾರ್ಯಕರ್ತರಿಗೂ ನೀಡಲಾಗುತ್ತದೆ. ಸೂಕ್ತ ಸ್ಥಾನಮಾನ ನೀಡಲು, ಎಲ್ಲಾ ನಾಯಕರು ಕೂತು ಮಾತನಾಡುತ್ತೇವೆ. ನೇಮಕದ ಪಟ್ಟಿ ಒಂದು ಹಂತಕ್ಕೆ ಬಂದಿದೆ. ಕೇಂದ್ರ ನಾಯಕರು ಕೂಡ ಹಲವರಿಗೆ ಅಧಿಕಾರ ನೀಡುವ ಮಾತು ನೀಡಿದ್ದಾರೆ. ಅದಕ್ಕಾಗಿ ಎಲ್ಲರ ಜೊತೆಗೂ ಮಾತನಾಡಬೇಕಿದೆ. ಸಂಕ್ರಾಂತಿ ಬಳಿಕ ಎಲ್ಲವೂ ತೀರ್ಮಾನವಾಗುವ ನಿರೀಕ್ಷೆ‌ ಇದೆ. ಜನಸಾಮನ್ಯರು ಅವರ ಕಷ್ಟಗಳನ್ನು ತೆಗದುಕೊಂಡು ನಮ್ಮ ಬಳಿಗೆ ಬರುತ್ತಿದ್ದಾರೆ. ಆದರೆ ಅವರ ಕಷ್ಟ ಕೇಳುವುದಕ್ಕೆ ನಾವೇ ಅವರ ಬಳಿ ಹೋಗಬೇಕು ಎಂದಿದ್ದಾರೆ.

ಇನ್ನು ಬಾಗಿಲಿಗೆ ಬಂತು ಸರ್ಕಾರ.. ಇರಲಿ ನಿಮ್ಮ ಸಹಕಾರ ಎಂಬ ಯೋಜನೆಯ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದೇವೆ. ಜನರ ಒತ್ತಡಗಳು ಸ್ವಲ್ಪ ಕಡಿಮೆಯಾಗಲಿ ಎಂಬ ಕಾರಣಕ್ಕೆ. ಮುಂದಿನ ತಿಂಗಳಿನಿಂದ ದಿನಕ್ಕೆ ಎರಡು ಅಥವಾ ಮೂರು ವಿಧಾನಸಭಾ ಕ್ಷೇತ್ರಗಳಂತೆ ಬೆಂಗಳೂರಿನ 28 ಕ್ಷೇತ್ರದ ಜನರ ಅಹವಾಲನ್ನು ಸ್ವೀಕರಿಸಿ, ಅವರ ಸಮಸ್ಯೆಗಳಿಗೆ ಪರಿಹಾರ ಒದಗಿಸುವ ಕೆಲಸ ಮಾಡುತ್ತೇವೆ. ಇನ್ನು ಲೋಕಸಭಾ ಚುನಾವಣೆಯ ತಯಾರಿ ಬಗ್ಗೆ ಜನವರಿ 10 ರಂದು ಪಕ್ಷದ ನಾಯಕರು, ಶಾಸಕರು, ಎಐಸಿಸಿ ನಾಯಕರ ಜೊತೆಗೆ ಸಭೆ ಮಾಡಿ, ಯೋಜನೆಗಳ ಬಗ್ಗೆ ತೀರ್ಮಾನ ಮಾಡಲಾಗುತ್ತದೆ ಎಂದು ಡಿಸಿಎಂ ಡಿಕೆ ಶಿವಕುಮಾರ್ ತಿಳಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *