ಚಿತ್ರದುರ್ಗದ ಮನೆಯೊಂದರಲ್ಲಿ ಅಸ್ಥಿಪಂಜರ ಪತ್ತೆ ಪ್ರಕರಣ: ಸಚಿವ ಪರಮೇಶ್ವರ್ ಪ್ರತಿಕ್ರಿಯೆ

 

ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.29 : ನಗರದ ಜೈಲ್ ರಸ್ತೆಯ ಜಗನ್ನಾಥ ರೆಡ್ಡಿ ಎಂಬುವವರ ಮನೆಯಲ್ಲಿ ಐದು ಅಸ್ಥಿಪಂಜರ ಪತ್ತೆಯಾಗಿದೆ. ಪಾಳು ಬಿದ್ದ ಮನೆಯಲ್ಲಿ ಹೀಗೆ ಅಸ್ಥಿಪಂಜರ ಪತ್ತೆಯಾಗಿರುವುದು ಎಲ್ಲರಿಗೂ ಶಾಕಿಂಗ್ ಅನಿಸಿದೆ. ಬಹಳ ವರ್ಷಗಳ ಕಾಲದಿಂದ ಈ ಮನೆಯಲ್ಲಿ ಯಾರು ವಾಸವಾಗಿಲ್ಲ ಹಾಗಾಗಿ ಪಾಳುಬಿದ್ದಿತ್ತು.

ಒಂದು ಕೋಣೆಯಲ್ಲಿ ಜಗನ್ನಾಥ ರೆಡ್ಡಿ ಮತ್ತು ಪತ್ನಿ, ಇನ್ನೆರಡು ರೂಮಿನಲ್ಲಿ ಮಕ್ಕಳ ಅಸ್ಥಿಪಂಜರ ಪತ್ತೆಯಾಗಿದೆ. ಕಳೆದ ಹಲವು ವರ್ಷಗಳಿಂದ ಮಾಹಿತಿ ಇಲ್ಲ. ಸಂಬಂಧಿಕರ ಜೊತೆಗೂ ಯಾವುದೇ ಸಂಪರ್ಕವಿಲ್ಲ. ಮನೆಯಿಂದ ದುರ್ವಾಸನೆ ಬಂದ ಬಳಿಕ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಪೊಲೀಸರು ಎಲ್ಲಾ ರೀತಿಯ ತನಿಖೆಯನ್ನು ನಡೆಸುತ್ತಿದ್ದಾರೆ. ಈ ಸಂಬಂಧ ಗೃಹ ಸಚಿವ ಜಿ ಪರಮೇಶ್ವರ್ ಪ್ರತಿಕ್ರಿಯೆ ನೀಡಿದ್ದಾರೆ.

ಮನೆಯಲ್ಲಿ ವಾಸವಿದ್ದವರು ಯಾರು ಎಂಬೆಲ್ಲಾ ಮಾಹಿತಿಯನ್ನು ಪೊಲೀಸರು ಕಲೆ ಹಾಕುತ್ತಿದ್ದಾರೆ. ಆ ಮನೆಯಲ್ಲಿ ಯಾರಿದ್ದರು ಎಂಬುದನ್ನೆಲ್ಲಾ ಕಲೆ ಹಾಕಲಾಗುತ್ತಿದೆ. ಅವರೇ ಸೂಸೈಡ್ ಮಾಡಿಕೊಂಡಿದ್ದಾರಾ..? ಯಾರಾದರೂ ಕೊಲೆ ಮಾಡಿದ್ದಾರಾ ಎಂಬುದೆಲ್ಲಾ ತನಿಖೆ ನಂತರ ತಿಳಿಯುತ್ತದೆ. ಈಗಾಗಲೇ ಅಸ್ಥಿಪಂಜರದ ಮಾದರಿಯನ್ನು (sample) ಪ್ರಯೋಗಾಲಯಕ್ಕೆ ಕಳುಹಿಸಲಾಗಿದೆ. ವರದಿ ಬಳಿಕ ಸತ್ಯಾಂಶ ತಿಳಿಯಲಿದೆ ಎಂದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *