ಮಂಡ್ಯ: ಮೊದಲೇ ರಾಜ್ಯದಲ್ಲಿ ಮಳೆ – ಬೆಳೆ ಇಲ್ಲದೆ ರೈತರು ಕಂಗಲಾಗಿದ್ದಾರೆ. ಬೇಸಿಗೆ ಕಾಲಕ್ಕೆ ಜಾನುವಾರುಗಳ ಪರಿಸ್ಥಿತಿ ಹೇಗೆ ಎಂದು ಚಿಂತಿಸುತ್ತಿರುವಾಗಲೇ ಮಂಡ್ಯದ ರೈತರಿಗೆ ಹಾಲು ಒಕ್ಕೂಟ ಸಂಘ ಶಾಕ್ ನೀಡಿದೆ. ಹಾಲಿನ ದರವನ್ನು ಇದ್ದಕ್ಕಿಂದ ಹಾಗೇ ಇಳಿಕೆ ಮಾಡಿದೆ. ಅಷ್ಟೇ ಅಲ್ಲ ಪಶು ಆಹಾರದ ಬೆಲೆಯನ್ನು ಏರಿಕೆ ಮಾಡಿದೆ.
ಪ್ರತಿ ಲೀಟರ್ ಹಾಲಿನ ದರ 1.50 ಇಳಕೆ ಮಾಡಿ ಮನ್ಮೂಲ್ ಆದೇಶ ಹೊರಡಿಸಿದೆ. ಪಶು ಆಹಾರ ಬೆಲೆಯಲ್ಲಿ ಚೀಲಕ್ಕೆ 50 ರೂಪಾಯಿ ಏರಿಕೆ ಮಾಡಿದೆ. ಈ ಪರಿಪ್ಕೃತ ದರ ಈಗಾಗಲೇ ಜಾರಿಗೆ ಬಂದಿದೆ. ಬೆಲೆ ಕಡಿತಗೊಂಡ ಮೇಲೆ ಪ್ರತಿ ಲೀಟರ್ ಗೆ 33 ರೂಪಾಯಿ ನೀಡುತ್ತಿದೆ.
ಮನ್ಮೂಲ್ ನಿರ್ಧಾರದಿಂದ ರೈತರಿಗೆ ಬೇಸರವಾಗಿದೆ. ಈಗಲೇ ಮಳೆ ಹೋಗಿದೆ, ಕಾವೇರಿ ನದಿ ನೀರನ್ನು ತಮಿಳುನಾಡಿಗೆ ಹರಿಸುತ್ತಲೆ ಇದ್ದಾರೆ. ಬೆಳೆ ಬೆಳಯುವುದಕ್ಕೂ ನೀರಿಗೆ ತೊಂದರೆ ಇದೆ. ಹೀಹಿರುವಾಗ ದಿಢೀರನೇ ಹಾಲಿನ ದರವನ್ನು ಇಳಿಕೆ ಮಾಡಿರುವುದು ರೈತರ ಆಕ್ರೋಶಕ್ಕೆ ಕಾರಣವಾಗಿದೆ.