ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್,
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ಡಿಸೆಂಬರ್.25 : ಚಂದ್ರವಳ್ಳಿಯಲ್ಲಿರುವ ಹುಲೇಗೊಂದಿ ಸಿದ್ದೇಶ್ವರಸ್ವಾಮಿ, ಪಂಚಲಿಂಗೇಶ್ವರಸ್ವಾಮಿ, ದವಳೇಶ್ವರಸ್ವಾಮಿಗಳವರ ಕಡೆ ಕಾರ್ತಿಕ ಮಹೋತ್ಸವ ಭಾನುವಾರ ವಿಜೃಂಭಣೆಯಿಂದ ನಡೆಯಿತು.
ದೇವಸ್ಥಾನದ ಮುಂಭಾಗ ಮಾವಿನ ತೋರಣ, ಬಾಳೆಕಂದು, ಹೂವು ಹಾಗೂ ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿತ್ತು.
ಹುಲೇಗೊಂದಿ ಸಿದ್ದೇಶ್ವರಸ್ವಾಮಿಯನ್ನು ನಾನಾ ಬಗೆಯ ಹೂವು ಹಾರಗಳಿಂದ ಕಂಗೊಳಿಸುವಂತೆ ಸಿಂಗರಿಸಲಾಗಿತ್ತು.
ಮಾಜಿ ಶಾಸಕರುಗಳಾದ ಜಿ.ಹೆಚ್.ತಿಪ್ಪಾರೆಡ್ಡಿ, ಎಸ್.ಕೆ.ಬಸವರಾಜನ್, ಶಾಸಕ ಕೆ.ಸಿ.ವೀರೇಂದ್ರಪಪ್ಪಿರವರ ಸಹೋದರ ಕೆ.ಸಿ.ನಾಗರಾಜ್, ಅಪರ ಜಿಲ್ಲಾಧಿಕಾರಿ ಕುಮಾರಸ್ವಾಮಿ, ಚಿತ್ರದುರ್ಗ ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಜಿ.ಟಿ.ಸುರೇಶ್ ಸಿದ್ದಾಪುರ, ದೇವಸ್ಥಾನ ಸಮಿತಿಯ ಅಧ್ಯಕ್ಷ ಬಿ.ಎಸ್.ಸಿದ್ದಪ್ಪ, ಉಪಾಧ್ಯಕ್ಷ ಪಿ.ಹೆಚ್.ಮುರುಗೇಶ್ ಸರ್ವ ಸದಸ್ಯರುಗಳು ಕಾರ್ತಿಕೋತ್ಸವದಲ್ಲಿ ಹಾಜರಿದ್ದರು.
ಮಧ್ಯಾಹ್ನ 12 ರಿಂದ ರಾತ್ರಿ 11 ಗಂಟೆಯವರೆಗೆ ಅನ್ನಸಂತರ್ಪಣೆಯನ್ನು ಏರ್ಪಡಿಸಲಾಗಿತ್ತು. ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಭಕ್ತರು ಪ್ರಸಾದ ಸವಿದರು ಎಂದು ದೇವಸ್ಥಾನದ ಪ್ರಧಾನ ಅರ್ಚಕ ಕೆ.ಎಂ.ಶಿವಕುಮಾರ್ ತಿಳಿಸಿದ್ದಾರೆ.