ಸುದ್ದಿಒನ್ : ವಾಕಿಂಗ್ ನಮ್ಮ ಆರೋಗ್ಯಕ್ಕೆ ಒಳ್ಳೆಯದು ಎಂಬುದರಲ್ಲಿ ಎರಡು ಮಾತಿಲ್ಲ. ಇದು ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಹೃದಯ ಮತ್ತು ಮೆದುಳನ್ನು ಆರೋಗ್ಯವಾಗಿರಿಸುತ್ತದೆ. ಅಲ್ಲದೇ ದೇಹವನ್ನು ಬೆಚ್ಚಗಿಡುತ್ತದೆ. ಇಷ್ಟೇ ಅಲ್ಲದೇ ವಾಕಿಂಗ್ ತೂಕ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ.
ಬೆಳಗಿನ ವಾಕಿಂಗ್ ನ ಆರೋಗ್ಯ ಪ್ರಯೋಜನಗಳ ಬಗ್ಗೆ ಎಲ್ಲರಿಗೂ ತಿಳಿದಿದೆ. ಆದರೆ, ಚಳಿಗಾಲ ಬಂತೆಂದರೆ ಹಲವರು ವಾಕಿಂಗ್ ಹೋಗುವುದನ್ನು ತಪ್ಪಿಸುತ್ತಾರೆ. ಚಳಿಯಲ್ಲಿ ಕೆಲವರಿಗೆ ಬೆಳಗ್ಗೆ ಬೇಗ ಏಳಲು ಕಷ್ಟವಾಗುತ್ತದೆ. ಕೆಲವರು ಬೆಚ್ಚಗಿನ ರಗ್ಗನ್ನು ಹೊದ್ದುಕೊಂಡು ಹಾಸಿಗೆಯಿಂದ ಏಳದೇ ಹಾಗೇ ಹೊರಳಾಡುತ್ತಿರುತ್ತಾರೆ. ಕೆಲವರು ಚಳಿಯಿಂದ ತಪ್ಪಿಸಿಕೊಳ್ಳಲು ವಾಕ್ ಹೋಗುವುದನ್ನು ತಪ್ಪಿಸುತ್ತಾರೆ.
ಚಳಿಗಾಲದಲ್ಲಿ ವಾಕಿಂಗ್ ಹೋಗುತ್ತಿದ್ದರೆ ಕೆಲವು ವಿಷಯಗಳನ್ನು ನೆನಪಿನಲ್ಲಿಟ್ಟುಕೊಳ್ಳಬೇಕು. ವಾಕಿಂಗ್ ಹೋಗುವ ಮೊದಲು ಬೆಚ್ಚಗಿನ ಬಟ್ಟೆಗಳನ್ನು ಧರಿಸಿ. ಎರಡನೆಯ ವಿಷಯವೆಂದರೆ ಹೆಚ್ಚು ವೇಗವಾಗಿ ನಡೆಯುವುದು ಅಥವಾ ಓಡಬಾರದು. ಮನೆಯಿಂದ ಹೊರಡುವಾಗ ನಿಧಾನವಾಗಿ ನಡೆಯಲು ಪ್ರಾರಂಭಿಸಿ. ನಂತರ ನೀವು ನಡಿಗೆಯ ವೇಗವನ್ನು ಸ್ವಲ್ಪ ಸ್ವಲ್ಪವೇ ಹೆಚ್ಚಿಸಿ.
ಚಳಿಯಲ್ಲಿ ಬೆಳಿಗ್ಗೆ ಬೇಗ ಏಳುವುದು ಕೆಲವರಿಗೆ ಕಷ್ಟ. ಇಂತಹ ಪರಿಸ್ಥಿತಿಯಲ್ಲಿ ನೀವು ಬೆಳಿಗ್ಗೆ 8.30 ರಿಂದ 9.30 ರವರೆಗೆ ಅಥವಾ ಸಂಜೆ 5 ರಿಂದ 6 ರವರೆಗೆ ವಾಕಿಂಗ್ ಹೋಗುವುದನ್ನು ರೂಢಿಸಿಕೊಳ್ಳಿ. ಈ ಸಮಯದಲ್ಲಿ ಚಳಿ ಕಡಿಮೆ ಇರುತ್ತದೆ. ಅದೇ ಸಮಯದಲ್ಲಿ ಕೆಲವರು ಚಳಿಗಾಲದಲ್ಲಿ ವಾಕಿಂಗ್ ಹೋಗುವುದನ್ನೇ ನಿಲ್ಲುಸುತ್ತಾರೆ. ಹೃದಯದ ತೊಂದರೆಗಳು, ಅಸ್ತಮಾ ಅಥವಾ ನ್ಯುಮೋನಿಯಾ ಇದ್ದರೆ, ಬೆಳಿಗ್ಗೆ ಬೇಗನೆ ವಾಕಿಂಗ್ ಮಾಡಲು ಹೋಗಬೇಡಿ. ಇದರ ಜೊತೆಗೆ, ವಯಸ್ಸಾದವರು ಸಹ ಚಳಿಗಾಲದಲ್ಲಿ ವಾಕಿಂಗ್ ಹೋಗಬಾರದು.
ವಾಸ್ತವವಾಗಿ, ತಜ್ಞರು ಪ್ರತಿದಿನ 10,000 ಹೆಜ್ಜೆಗಳನ್ನು ನಡೆಯಲು ಶಿಫಾರಸು ಮಾಡುತ್ತಾರೆ. ಬಿಡುವಿಲ್ಲದ ವೇಳಾಪಟ್ಟಿಯಿಂದಾಗಿ, ಪ್ರತಿಯೊಬ್ಬರೂ ದಿನಕ್ಕೆ 10,000 ಹೆಜ್ಜೆಗಳನ್ನು ನಡೆಯಲು ಸಾಧ್ಯವಿಲ್ಲ. ಅಂತಹ ಪರಿಸ್ಥಿತಿಯಲ್ಲಿ, ಚಳಿಗಾಲದಲ್ಲಿ ವಾರದಲ್ಲಿ ಕನಿಷ್ಠ 5 ದಿನಗಳು ಅರ್ಧ ಘಂಟೆ ನಡೆಯಲು ಪ್ರಯತ್ನಿಸಿ.
(ಪ್ರಮುಖ ಸೂಚನೆ: ಆರೋಗ್ಯ ತಜ್ಞರು ಮತ್ತು ಇತರ ಅಧ್ಯಯನಗಳಿಂದ ಪಡೆದ ಮಾಹಿತಿಯ ಆಧಾರದ ಮೇಲೆ ನಾವು ಈ ವಿವರಗಳನ್ನು ಒದಗಿಸುತ್ತಿದ್ದೇವೆ. ವಿಷಯಗಳು ಕೇವಲ ತಿಳುವಳಿಕೆಗಾಗಿ ಮಾತ್ರ. ನಿಮಗೆ ಯಾವುದೇ ಅನುಮಾನಗಳು ಅಥವಾ ಸಮಸ್ಯೆಗಳಿದ್ದರೆ ವೈದ್ಯರನ್ನು ಸಂಪರ್ಕಿಸುವುದು ಸೂಕ್ತ.)