ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್,
ಚಿತ್ರದುರ್ಗ ಡಿ. 21 : ಮಾಜಿ ಉಪ ಮುಖ್ಯಮಂತ್ರಿ ಗೋವಿಂದ ಕಾರಜೋಳರವರು ದಲಿತರ ಮೇಲೆ ದೌರ್ಜನ್ಯದಿಂದ ವರ್ತಿಸಿ ಕೇಸ್ ದಾಖಲಿಸಿರುವುದನ್ನು ಮಾದಿಗ ಮಹಾ ಸಭಾ ಖಂಡಿಸುತ್ತದೆ, ಇವರನ್ನು ಬಿಜೆಪಿ ಪಕ್ಷದಿಂದ ಉಚ್ಚಾಟಿಸುವಂತೆ ಪಕ್ಷದ ಮುಖಂಡರನ್ನು ಅಧ್ಯಕ್ಷರಾದ ಹನುಮಂತಪ್ಪ ದುರ್ಗ ಆಗ್ರಹಿಸಿದ್ದಾರೆ.
ನಗರದ ಪ್ರವಾಸಿ ಮಂದಿರಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ಪ್ರವಾಸಿಮಂದಿರಕ್ಕೆ ಹೋಗಿ ಅವರ ಪಕ್ಷದ ಕಾರ್ಯಕರ್ತರಿಗೆ ಅವರನ್ನು ಕಾಣಲು ತಿಳಿಸಲಾಗಿ ಅವರ ನಮ್ಮನ್ನು ಒಳಬರುವಂತೆ ಹೇಳಿದ್ದರಿಂದ ನಾವುಗಳು ಪ್ರವಾಸಿ ಮಂದಿರದ ಒಳಗಡೆ ಪ್ರವೇಶಿಸಿದೆವು.
ನಿಮ್ಮ ಸರ್ಕಾರದ ಅಧಿಕಾರದ ಅವಧಿಯಲ್ಲಿ ದಲಿತರಿಗೆ ಪರಿಶಿಷ್ಟ ಜಾತಿ / ಏನು ಕ್ರಮ ಕೈಗೊಂಡಿದ್ದೀರಿ, ಯಾವ ಸೌಲಭ್ಯಗಳನ್ನು ನೀಡಿದ್ದೀರಿ ಎಂದು ಪ್ರಶ್ನೆ ಮಾಡಿದ್ದಕ್ಕೆ ಮಾದಿಗ ಮುಖಂಡರ ಮೇಲೆ ಗೂಂಡಾ ವರ್ತನೆ ಮಾಡಿ, ದೌರ್ಜನ್ಯದಿಂದ ತನ್ನ ಗನ್‍ಮ್ಯಾನ್ ಕಡೆಯಿಂದ ಬಲವಂತವಾಗಿ ಹೊರದಬ್ಬಿಸಿದ್ದಾರೆ. ಹೊರದಬ್ಬಿದ ಬಳಿಕ ಗನ್‍ಮ್ಯಾನ್ ಜಾತಿ ನಿಂದನೆ ಮಾಡಿ, ನಮ್ಮ ವಿರುದ್ಧ ಕೇಸು ದಾಖಲಿಸುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿರುತ್ತಾರೆ. ಅಲ್ಲದೇ ಇವರು ಮಾದಿಗ ಸಮಾಜದ ಮುಖಂಡರನ್ನು ಕಾಂಗ್ರೆಸ್ ಗೂಂಡಾಗಳು ಎಂದೆಲ್ಲಾ ಹೇಳಿ, ನಮಗೆ ಮಾನಸಿಕವಾಗಿ ಹಿಂಸೆ ಮತ್ತು ಅವಮಾನ ಮಾಡಿರುತ್ತಾರೆ. ಇದಕ್ಕೆ ಸಂಬಂಧಪಟ್ಟಂತೆ ನಾವುಗಳೂ ಸಹ ಕೇಸು ದಾಖಲಿಸಿರುತ್ತೇವೆ ಎಂದರು.
ಇವರು ಅಧಿಕಾರದಲ್ಲಿ ಇದ್ದಾಗ ಯಾವ ಸಮುದಾಯದ ಬಗ್ಗೆ ಚಿಂತನೆ ಮಾಡಲಿಲ್ಲ. ಕಾಂಗ್ರೆಸ್ ಸರ್ಕಾರ ಜಾರಿ ಮಾಡಿದ್ದ ಪರಿಶಿಷ್ಟ ಜಾತಿ / ಪರಿಶಿಷ್ಟ ವರ್ಗದ ಜನರಿಗೆ ಸಾಲ ಪಡೆದಲ್ಲಿ ರೂ.5.00ಲಕ್ಷಗಳ ಸಬ್ಸಿಡಿ ನೀಡಲಾಗುತ್ತಿತ್ತು, ಪಿ.ಯು.ಸಿ ಪಾಸಾದ ವಿದ್ಯಾರ್ಥಿಗಳಿಗೆ ಉಚಿತವಾಗಿ ಲ್ಯಾಪ್‍ಟಾಪ್ ನೀಡಲಾಗುತ್ತಿತ್ತು, ಎಸ್.ಸಿ.ಪಿ / ಟಿ.ಎಸ್.ಪಿ ಅನುದಾನವನ್ನು ಮೆಟ್ರೋ ಕಾಮಗಾರಿಗೆ ಹಾಕಲಾಗಿದೆ. ಸಮಾಜ ಕಲ್ಯಾಣ ಇಲಾಖೆಯಿಂದ ಗಗನ ಸಖಿಯರ ತರಬೇತಿ ಹಾಗೂ ನರ್ಸಿಂಗ್ ತರಬೇತಿ ಹಾಗೂ ಬಿ.ಜೆ.ಪಿ ಸರ್ಕಾರದ ಅವಧಿಯಲ್ಲಿ ಇವರೇ ಉಪಮುಖ್ಯಮಂತ್ರಿಯಾಗಿದ್ದಾಗ ಇವುಗಳನ್ನು ರದ್ದುಪಡಿಸಿರುತ್ತಾರೆ. ಈ ವಿಚಾರ ರಾಜ್ಯ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಬಿ.ಜೆ.ಪಿ ರಾಜ್ಯಾಧ್ಯಕ್ಷರಾದ ವಿಜೇಂದ್ರ, ಸಿ.ಟಿ.ರವಿ, ಕುಡಚಿ ಶಾಸಕರಾದ ರಾಜೀವ್ ಇವರು ವಾಸ್ತವವಾಗಿ ನಾವು ಕೇಳಿರುವ ವಿಷಯಗಳನ್ನು ಬಿಟ್ಟು ದಿಕ್ಕುತಪ್ಪಿಸುವ ಕಾಂಗ್ರೆಸ್ ಪಕ್ಷದ ವಿರುದ್ಧ ಮಾತನಾಡುತ್ತಿರುವುದು ಅಕ್ಷಮ್ಯವಾಗಿದೆ ಎಂದರು.
ಬಿಜೆಪಿ ಪಕ್ಷ ಗೋವಿಂದ ಕಾರಜೋಳ ಇವರನ್ನು ಪಕ್ಷದಿಂದ ಉಚ್ಚಾಟನೆ ಮಾಡಬೇಕು, ಇಲ್ಲವಾದಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಆದ ಗತಿಯೇ ಮುಂಬರುವ ಲೋಕಸಾ ಚುನಾವಣೆಯಲ್ಲಿ ಮಾಡಲಾಗುವುದು ಅಧಿಕಾರ ಇದ್ದಾಗ ದಲಿತರ ಕಷ್ಟಸುಖಗಳನ್ನು ಕೇಳದ ಕಾರಜೋಳ ಇವರು ಅಧಿಕಾರ ಕಳೆದುಕೊಂಡಾಗ ನಾನು ದಲಿತರ ಪರವಾಗಿ’ ಸ್ವಾಭಿಮಾನ ಮುನ್ನಡೆ, ದಲಿತರ ಪರವಾಗಿ ದಲಿತನ್ನು ಒಗ್ಗಟ್ಟು ಮಾಡುತ್ತೇನೆ. ಎಂದೆಲ್ಲಾ ಡೋಂಗೀ ತನದ ಭಾಷಣ ಮಾಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಲಾಯಿತು.
ಗೋಷ್ಟಿಯಲ್ಲಿ ವಕೀಲರಾದ ವೆಂಕಟೇಶ್, ಡಿ.ಟಿ.ಸ್ವಾಮಿ, ಸಂದೀಶ್, ಶಿವಕುಮಾರ್, ಮಂಜುನಾಥ್, ಮಹಾಂತೇಶ್ ಸೇರಿದಂತೆ ಇತರರು ಉಪಸ್ಥಿತರಿದ್ದರು.