Kannada news ಚಿತ್ರದುರ್ಗ ದಾವಣಗೆರೆ ಬೆಂಗಳೂರು ರಾಜಕೀಯ ಚುನಾವಣೆ ಮಳೆ ಕ್ರಿಕೆಟ್ ಭಾರತ ಚಿನ್ನ ಬೆಳ್ಳಿ ಹವಾಮಾನ ಕ್ರಿಕೆಟ್  ಕನ್ನಡ ನ್ಯೂಸ್

ಕಳೆದ 24 ಗಂಟೆಯಲ್ಲಿ 44 ಪಾಸಿಟಿವ್ ಕೇಸ್ : ರಾಜ್ಯದಲ್ಲಿ ಏನಿದೆ ಕೊರೊನಾ ಅಪ್ಡೇಟ್

---Advertisement---

 

 

ಬೆಂಗಳೂರು: ರಾಜ್ಯದಲ್ಲಿ ಮತ್ತೆ ಕೊರೊನಾ ಆತಂಕ ಹುಟ್ಟಿಸುತ್ತಿದೆ. ಎರಡು ಬಾರಿ ಬಂದ ಕೊರೊನಾ ಕೊಟ್ಟ ಹೊಡೆತ ಅಷ್ಟಿಷ್ಟಲ್ಲ. ಈಗಲೂ ಚೇತರಿಸಿಕೊಳ್ಳುವುದಕ್ಕೆ ಆಗುತ್ತಿಲ್ಲ. ಹೀಗಿರುವಾಗ ಮತ್ತೆ ಕೊರೊನಾ ಛಾಯೆ ರಾಜ್ಯದ ಮೇಲೆ ಬಿದ್ದರೆ ಜನರ ಮನಸ್ಥಿತಿ ಎಷ್ಟು ಆತಂಕಗೊಳ್ಳುತ್ತದೆ. ಈಗಾಗಲೇ ರಾಜ್ಯದಲ್ಲೂ ಕೊರೊನಾ ತನ್ನ ಆಟ ಶುರು ಮಾಡಿದೆ. ಪಾಸಿಟಿವ್ ಕೇಸ್ ಗಳು ಕಾಣಿಸಿಕೊಳ್ಳುತ್ತಿವೆ. ನಿನ್ನೆ ಒಂದೇ ದಿನ ಅಂದರೆ ಕಳೆದ 24 ಗಂಟೆಗಳಲ್ಲಿ 44 ಪಾಸಿಟಿವ್ ಕೇಸ್ ಗಳು ದಾಖಲಾಗಿವೆ. ಈ ಮೂಲಕ ಒಟ್ಟು 79 ಪಾಸಿಟಿವ್ ಕೇಸ್ ಗಳು ಸಕ್ರೀಯವಾಗಿವೆ.

487 ಆರ್​ಟಿಪಿಸಿಆರ್​ ಹಾಗೂ 235 ಱಪಿಡ್​​ ಟೆಸ್ಟ್​ಗಳನ್ನ ಮಾಡಲಾಗಿದೆ. ಇನ್ನು, 79 ಸಕ್ರಿಯ ಪ್ರಕರಣಗಳಲ್ಲಿ 62 ಕೇಸ್​ಗಳು ಹೋಮ್​ಐಸೋಲೇಷನ್​ನಲ್ಲಿ ಇರಲು ಸೂಚನೆ ನೀಡಲಾಗಿದೆ. 17 ಸೋಂಕಿತರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 6 ಸೋಂಕಿತರಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗ್ತಿದೆ.

ಕೇಸ್ ಗಳು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿರುವ ಕಾರಣ, ಆರೋಗ್ಯ ಸಚುವ ದಿನೇಶ್ ಗುಂಡೂರಾವ್ ಎಚ್ವರಿಕೆಯನ್ನು ನೊಇಡಿದ್ದಾರೆ. ಜನರು ಕೂಡ ಮುಂಜಾಗ್ರತ ಕ್ರಮಗಳನ್ನು ಪಾಲನೆ ಮಾಡಲು ಸೂಚಿಸಿದ್ದಾರೆ. ಅದರಲ್ಲೂ ವಯಸ್ಸಾದವರು ಕಡ್ಡಾಯವಾಗಿ ಮಾಸ್ಕ್ ಧರಿಸಲು ಹೇಳಿದ್ದಾರೆ. ಕೊರೊನಾ ಲಕ್ಷಣಗಳು ಕಾಣಿಸಿಕೊಂಡರೆ ತಕ್ಷಣ ಆಸ್ಪತ್ರೆಗೆ ಭೇಟಿ ನೀಡಿ, ತಪಾಸಣೆಗೆ ಒಳಗಾಗಬೇಕು ಎಂದಿದ್ದಾರೆ. ವಾತಾವರಣ ಕೂಡ ತಂಪಾಗಿದ್ದು, ಪ್ರತಿ ವರ್ಷ ಈ ತಿಂಗಳಲ್ಲಿ ಜ್ವರ, ನೆಗಡಿ ಕಾಮನ್ ಆಗಿರುತ್ತದೆ. ಆದರೂ ಜನ ಸಾಮಾನ್ಯರು ಎಚ್ಚರದಿಂದ ಇರಬೇಕು.

suddionenews

ಕನ್ನಡ ಸುದ್ದಿಗಳ ವಿಶ್ವಾಸಾರ್ಹ ಮೂಲ — suddione.com ನಲ್ಲಿ ಓದಿ ರಾಷ್ಟ್ರೀಯ, ಅಂತರರಾಷ್ಟ್ರೀಯ, ರಾಜಕೀಯ, ಕ್ರೀಡೆ, ಮನರಂಜನೆ, ವಾಣಿಜ್ಯ, ಶಿಕ್ಷಣ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ಪ್ರತಿಯೊಂದು ಪ್ರಮುಖ ಅಪ್‌ಡೇಟ್. ನೀವು ಯಾವಾಗಲೂ ಅಪ್‌ಡೇಟ್ ಆಗಿರಲು ನಾವು ವೇಗವಾದ, ನಿಖರವಾದ ಮತ್ತು ನಿಷ್ಪಕ್ಷಪಾತವಾದ ಸುದ್ದಿಗಳನ್ನು ಸರಳ ಹಾಗೂ ಸ್ಪಷ್ಟ ಭಾಷೆಯಲ್ಲಿ ನೀಡುತ್ತೇವೆ. ಸಂಪಾದಕರು: ನಾಗೇಂದ್ರ ರೆಡ್ಡಿ ಪಿ.ಎಲ್

Join WhatsApp

Join Now

Join Telegram

Join Now

Leave a Comment