ಕಲಬುರಗಿ: ಸಂಸತ್ ಒಳಗೆ ಗೊಂದಲದ ವಾತಾವರಣ ಸರತಷ್ಟೀ ಮಾಡಿ, ದಾಳಿ ಮಾಡಿದ್ದಕ್ಕೆ ಸಂಸದ ಪ್ರತಾಪ್ ಸಿಂಹ ನೀಡಿದ ಪಾಸ್ ಗಳೇ ಕಾರಣ. ಹೀಗಾಗಿ ಸಚಿವ ಪ್ರಿಯಾಂಕ್ ಖರ್ಗೆ ಸಂಸದ ಪ್ರತಾಪ್ ಸಿಂಹ ವಿರುದ್ಧ ಕಿಡಿಕಾರಿದ್ದಾರೆ.
ಕಲಬುರಗಿಯಲ್ಲಿ ಮಾತನಾಡಿದ ಅವರು, ಸಂಸತ್ ಮೇಲೆ ದಾಳಿ ಮಾಡಿದ ಬಳಿಕ ಸಂಸದ ಪ್ರತಾಪ್ ಸಿಂಹ ಎಲ್ಲಿದ್ದಾರೆ..? ಅವರಿಂದಾಗಿ ಇಡೀ ರಾಜ್ಯವೇ ತಲೆ ತಗ್ಗಿಸುವಂತೆ ಆಗಿದೆ. ಎಲ್ಲಾ ವಿಚಾರಕ್ಕೂ ಮಾಧ್ಯಮದ ಮುಂದೆ ಬರುವ ಪ್ರತಾಪ್ ಸಿಂಹ ಈಗ ಎಲ್ಲೂ ಕಾಣಿಸುತ್ತಿಲ್ಲ. ಈ ಘಟನೆ ಬಗ್ಗೆ ಕಾಂಗ್ರೆಸ್ ನವರು ಮಾತನಾಡಬಾರದಂತೆ. ಘಟನೆ ಬಗ್ಗೆ ಅಮಿತ್ ಶಾ ಇಲ್ಲಿಯವರೆಗೂ ಒಂದೇ ಒಂದು ಹೇಳಿಕೆ ನೀಡಿಲ್ಲ. ಯಾಕೆ..?
ದೇಶದಲ್ಲಿರುವ ನಿರುದ್ಯೋಗ ಸಮಸ್ಯೆಯೇ ಸಂಸತ್ ದಾಳಿಗೆ ಕಾರಣ. ಈ ಬಗ್ಗೆ ನಮ್ಮ ನಾಯಕ ರಾಹುಲ್ ಗಾಂಧಿ ಹೇಳಿರುವುದರಲ್ಲಿ ಯಾವುದೇ ತಪ್ಪಿಲ್ಲ. ಬಿಜೆಪಿ ಸರ್ಕಾರ ಆಡಳಿತಕ್ಕೆ ಬಂದಾಗಿನಿಂದ ನಿರುದ್ಯೋಗ ಸಮಸ್ಯೆ ಹೆಚ್ಚಾಗಿದೆ. ನಮ್ಮ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಎಷ್ಟಿದೆ ಗೊತ್ತಾ..? ಇಂಥಹ ಗಂಭೀರ ವಿಚಾರಕ್ಕೆ ರಾಜಕೀಯ ಲೇಪ ಮಾಡುವುದು ಸರಿಯಲ್ಲ ಎಂದಿದ್ದಾರೆ. ಇದೆ ವೇಳೆ ಸಿಟಿ ರವಿ ಅವರ ಬಗ್ಗೆಯೂ ಗರಂ ಆಗಿದ್ದು, ಮೊದಲು ತಮ್ಮ ಪಕ್ಷದಲ್ಲಿ ಸೂಕ್ತ ಸ್ಥಾನಮಾನ ಪಡೆದು, ಬಳಿಕ ಮಾತನಾಡಲಿ ಎಂದಿದ್ದಾರೆ.
ಸಂಸತ್ ಮೇಲೆ ದಾಳಿ ಮಾಡಿದವರ ಇಂಚಿಂಚು ವಿಚಾರಣೆಯನ್ನು ಪೊಲೀಸಿನವರು ಮಾಡುತ್ತಿದ್ದಾರೆ. ಪ್ರತಾಪ್ ಸಿಂಹ ಅವರು ನೀಡಿದ ಪಾಸ್ ನಿಂದಾಗಿಯೇ ಅವರಿಗೆ ಸುಲಭ ಮಾರ್ಗ ಸಿಕ್ಕಿತು ಎಂಬ ವಿಚಾರಕ್ಕೆ ಕಾಂಗ್ರೆಸ್ ನಾಯಕರು ಆಕ್ರೋಶಗೊಂಡಿದ್ದಾರೆ.