ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ಡಿ.18 : ಬೆಳೆ ಪರಿಹಾರವನ್ನು ನೀಡುವಲ್ಲಿ ವಿಳಂಬ, ಮಧ್ಯಂತರ ಪರಿಹಾರ ಮತ್ತು ಬೆಳೆವಿಮೆ ನೀಡುವಲ್ಲಿ ವಿಳಂಬ ಹಾಗೂ ರಾಷ್ಟ್ರೀಕೃತ ಮತ್ತು ಸಹಕಾರಿ ಬ್ಯಾಂಕುಗಳ ರೈತರ ಸಾಲಗಳ ಮನ್ನಾ ಹಾಗೂ ಗೋಶಾಲೆ ತೆರೆಯುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಇಂದು ಜಿಲ್ಲಾಧಿಕಾರಿಗಳ ಕಚೇರಿ ಬಳಿ ಪ್ರತಿಬಟನೆಯನ್ನು ನಡೆಸಲಾಯಿತು.
ಕರ್ನಾಟಕ ರಾಜ್ಯಾದಲ್ಲಿ ಬರಗಾಲ ಮುಂಗಾರು-ಹಿಂಗಾರಿನಲ್ಲಿ ಆವರಿಸಿದ್ದು, ಸರ್ಕಾರವು ಇದುವರೆಗೂ ರೈತರಿಗೆ ಯಾವುದೇ ಪರಿಹಾರ ಹಣವನ್ನು ನೀಡುವ ಬಗ್ಗೆ ಭರವಸೆ ಇಲ್ಲ. ರೂ.2000/- ಗಳನ್ನು ರೈತರ ಖಾತೆಗೆ ಜಮಾ ಮಾಡುವಂತೆವೆಂದು ಹೇಳುತ್ತಿದೆ. ಇದು ರೈತರಿಗೆ ಯಾವುದಾರಲ್ಲೂ ಸರ್ಕಾರದ ಮೇಲೆ ಭರವಸೆಯಿಲ್ಲ, ಎನ್.ಡಿ.ಆರ್.ಎಫ್ ಪ್ರಕಾರ ರೈತರಿಗೆ ಪರಿಹಾರದ ಮೊತ್ತವನ್ನು ಹಾಗೂ ಪಕ್ಕದ ಆಂದ್ರಪ್ರದೇಶ ಸರ್ಕಾರವು ರೈತರಿಗೆ ಹೆಕ್ಟರ್‍ಗೆ ರೂ.25000/- ಗಳಂತೆ ಪರಿಹಾರ ನೀಡುತ್ತಿದೆ. ಅದೇ ರೀತಿಯಾಗಿ ನಮ್ಮ ರಾಜ್ಯ ಸರ್ಕಾರವು ರೈತರಿಗೆ ಹೆಕ್ಟರ್‍ಗೆ ರೂ.25,000/-ಗಳಂತೆ ನೀಡಬೇಕು ಎಂದು ಸರ್ಕಾರವನ್ನು ಆಗ್ರಹಿಸಿದರು.
ರೈತರ ಮುಂಗಾರು ಬೆಳೆ ಮಳೆ ಇಲ್ಲದೆ ಸಂಪೂರ್ಣ ನಾಶವಾಗಿದ್ದು, ಸರ್ಕಾರವು ಬರಗಾಲವೆಂದು ಘೋಷಣೆ ಮಾಡಿದ್ದು, ಇದುವರೆಗೂ ಬೆಳೆವಿಮೆಯು ರೈತರ ಖಾತೆಗಳಿಗೆ ಸಂದಾಯವಾಗಿರುವುದಿಲ್ಲ. ಕೂಡಲೇ ಬೆಳೆವಿಮೆಯನ್ನು ರೈತರ ಖಾತೆಗೆ ಜಮಾ ಮಾಡಬೇಕು, ರಾಜ್ಯದಲ್ಲಿ ಬರಗಾಲವಿದ್ದು, ರಾಜ್ಯದಲ್ಲಿ ಎಲ್ಲಿಯೂ ಸಹ ಗೋಶಾಲೆಯನ್ನು ತೆರೆದಿರುವುದಿಲ್ಲ. ದನ-ಕರುಗಳಿಗೆ ಮೇವಿನ ಕೊರತೆಯಿದ್ದು, ಕೂಡಲೇ ಪಂಚಾಯಿತಿಗೊಂದು ಗೋಶಾಲೆ ತೆರೆಯಬೇಕು, ಬೆಳಗಾವಿ ಅಧಿವೇಶನದಲ್ಲಿ ರಾಜ್ಯಸರ್ಕಾರವು ಸಹಕಾರ ಬ್ಯಾಂಕುಗಳಲ್ಲಿ ರೈತರು ಅಸಲು ಜಮಾ ಮಾಡಿದರೆ, ಬಡ್ಡಿ ಮನ್ನಾ ಮಾಡುತ್ತೇವೆಂದು ಹೇಳಿರುವುದು ಖಂಡನೀಯ. ರಾಜ್ಯದಲ್ಲಿ ಬೀಕರ ಬರಗಾಲವಿದ್ದು, ರೈತರು ಜೀವನ ನಡೆಸುವುದೆ ಕಷ್ಟಕರವಾಗಿದ್ದು, ಇಂತಹ ಪರಿಸ್ಥಿತಿಯಲ್ಲಿ ಸಹಕಾರ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಎಲ್ಲಾ ಬ್ಯಾಂಕುಗಳ ರೈತರ ಸಂಪೂರ್ಣ ಸಾಲಮನ್ನಾ ಮಾಡಬೇಕೆಂದು ಸರ್ಕಾರವನ್ನು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ಬಸ್ತಿಹಳ್ಳಿ ಸುರೇಶ್ ಬಾಬು, ತಾಲ್ಲೂಕು ಅಧ್ಯಕ್ಷ ಧನಂಜಯ, ಮುಖಂಡರಾದ ಬೇಡರೆಡ್ಡಿ ಹಳ್ಳಿ ಬಸವರೆಡ್ಡಿ, ಭೂತಯ್ಯ, ತಿಪ್ಪೇಸ್ವಾಮಿ ಕರಿಯಣ್ಣ, ನಾಗರಾಜು ಸೇರಿದಂತೆ ಇತರರು ಉಪಸ್ಥಿತರಿದ್ದರು.