ಸುದ್ದಿಒನ್, ಚಿತ್ರದುರ್ಗ, (ಅ.31) : ವೈದ್ಯಕೀಯ ಕ್ಷೇತ್ರದಲ್ಲಿ ಗಣನೀಯ ಸೇವೆ ಸಲ್ಲಿಸಿದ ಡಾ|| ಎಂ. ಎಚ್. ರಘುನಾಥರೆಡ್ಡಿಯವರಿಗೆ 2021 ನೇ ಜಿಲ್ಲಾಮಟ್ಟದ ರಾಜ್ಯೋತ್ಸವ ಪ್ರಶಸ್ತಿ ಘೋಷಿಸಲಾಗಿದೆ.
ನವೆಂಬರ್ 01ರಂದು ನಡೆಯುವ ಜಿಲ್ಲಾಮಟ್ಟದ ಕನ್ನಡರಾಜ್ಯೋತ್ಸವ ದಿನಾಚರಣೆಯಂದು ಜಿಲ್ಲಾಡಳಿತ ಪ್ರಶಸ್ತಿ ಪ್ರಧಾನ ಮಾಡಿ ಗೌರವಿಸಲಿದೆ.
ಡಾ|| ಎಂ. ಎಚ್. ರಘುನಾಥರೆಡ್ಡಿಯವರು 1968ರಜೂನ್ ತಿಂಗಳಲ್ಲಿ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ನಾಯ್ಕನಹಟ್ಟಿ ಗ್ರಾಮದಲ್ಲಿ ಡಾ|| ಹೇಮಾರೆಡ್ಡಿ ಮತ್ತು ಅನುಸೂಯ ದಂಪತಿಗಳಿಗೆ ಮೊದಲ ಮಗನಾಗಿ ಜನಿಸಿದರು. ಇವರಿಗೆ ಇಬ್ಬರು ತಮ್ಮದಿಂರು ಇದ್ದಾರೆ.
ಇವರ ತಂದೆ ಡಾ| ಹೇಮಾರೆಡ್ಡಿಯವರು ವೈದ್ಯಾಧಿಕಾರಿಗಳಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಕೆಲಸ ನಿರ್ವಹಿಸಿದರು. ನಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಯಾಗಿ ಚಿತ್ರದುರ್ಗ ಜಿಲ್ಲೆಯಲ್ಲಿ ಪ್ರಾಮಾಣಿಕಾವಾಗಿ ಕೆಲಸಮಾಡಿ ನೆಚ್ಚಿನ ಅಧಿಕಾರಿಗಳಾದರು. ನಂತರ ಬೆಂಗಳೂರಿನ ಆರೋಗ್ಯ ಇಲಾಖೆ ಕಛೇರಿಯಲ್ಲಿ ವಿವಿಧ ಹಂತಗಳಲ್ಲಿ ಕಾರ್ಯನಿರ್ವಹಿಸಿ ಆರೋಗ್ಯ ಇಲಾಖೆಯ ನಿರ್ದೇಶಕರಾಗಿ ದುಡಿದು 1999ರಲ್ಲಿ ಸರ್ಕಾರಿ ಹುದ್ದೆಯಿಂದ ನಿವೃತ್ತಿ ಹೊಂದಿದರು.
ಡಾ|| ಎಂ. ಎಚ್ ರಘುನಾಥರೆಡ್ಡಿಯವರು ಪ್ರೈಮರಿ ಮತ್ತು ಹೈಸ್ಕೂಲ್ ಶಾಲಾ ಜೀವನವನ್ನು ಚಿತ್ರದುರ್ಗದ ಸೆಂಟ್ ಜೋಸೆಫ್ ಶಾಲೆಯಲ್ಲಿ ಮತ್ತು ಚಿನ್ಮೂಲಾದ್ರಿ ನಾಷ್ಯನಲ್ ಹೈಸ್ಕೂಲ್ ನಲ್ಲಿ ಹಾಗೂ ಪಿಯೂ.ಸಿ ಯನ್ನು ಸರ್ಕಾರಿ ವಿಜ್ಞಾನ ಕಾಲೇಜಿನಲ್ಲಿ ಮುಗಿಸಿರುತ್ತಾರೆ. ತದ ನಂತರ, ಬಿ.ಡಿ.ಎಸ್. ಪಧವಿಯನ್ನು ಎಸ್.ಜೆ.ಎಂ. ದಂತ ಮಹಾವಿದ್ಯಾಲಯ ದಿಂದ(ಮೈಸೂರು ವಿಶ್ವವಿದ್ಯಾಲಯ) ಮತ್ತು ಸ್ನಾತಕ್ಕೋತ್ತರ(ಎಂ.ಡಿ.ಎಸ್) ಪಧವಿಯನ್ನು ದಾವಣಗೆರೆಯ ಬಾಪೂಜಿ ದಂತ ಮಹಾವಿದ್ಯಾಲಯ (ಕುವೇಂಪು ವಿಶ್ವವಿದ್ಯಾಲಯ)ದಿಂದ ಪಡೆದಿರುತ್ತಾರೆ.
ಅವರ ನೌಕರಿಯ ಸೇವೆ 1997ರಲ್ಲಿ ಎಸ್ ಜೆ.ಎಂ ದಂತ ಮಹಾವಿದ್ಯಾಲಯಲ್ಲಿ ಪ್ರಾರಂಭವಾಗಿ ವಿವಿಧ ಹಂತಗಳಲ್ಲಿ ಕೆಲಸ ಮಾಡಿ ಇಂದು ಮಕ್ಕಳ ದಂತ ವಿಭಾಗದ ಮುಖ್ಯಸ್ತರಾಗಿ ಮತ್ತು ಉಪ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿರುತ್ತಾರೆ. ಈ ಸೇವ ಅವಧಿಯಲ್ಲಿ ಇತರ ವೈದ್ಯರೊಂದಿಗೆ ಸೇರಿ ತಂಡದ ಮುಖ್ಯ ಸಂಯೋಜನಾಧಿಕಾರಿಯಾಗಿ ದಂತ ವೈದ್ಯ ಕಾಲೇಜು ಮತ್ತು ಇತರ ಸಂಘ ಸಂಸ್ಥೆಗಳಾದ ಇಂಡಿಯನ್ ಡೆಂಟಲ್ ಅಸೊಸಿಯೇಶನ್, ಕೋಲೇಟ್ ಕಂಪನಿ, ಲಯನ್ಸ್ ಕ್ಲಬ್ ರೋಟರಿ ಕ್ಲಬ್, ಮೈರಾಡ ಸಂಸ್ಥೆ ಮತ್ತು ಇತರ ಸಂಘ ಸಂಸ್ಥೆಗಳ ಸಹಾಕರಗಳೊಂದಿಗೆ ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಕೂರು, ಚಳ್ಳಕೆರೆ, ಹಿರಿಯೂರು, ಹೊಳಲ್ಕೆರೆ, ಹೊಸದುರ್ಗ, ಚಿತ್ರದುರ್ಗ ತಾಲ್ಲೂಕಿನ ವಿವಿಧ ಸರ್ಕಾರಿ ಮತ್ತು ಖಾಸಗಿ ಪ್ರೈಮರಿ ಮತ್ತು ಹೈಸ್ಕೂಲ್, ಕಾಲೇಜುಗಳಲ್ಲಿ ನಿರಂತರವಾಗಿ ಮಕ್ಕಳಿಗೆ ಯುವಕರಿಗೆ ಶಿಕ್ಷಕರಿಗೆ ಉಚಿತ ದಂತ ತಪಾಸಣೆ, ಚಿಕಿತ್ಸೆ, ದಂತಾರೋಗ್ಯದ ಬಗ್ಗೆ ಶಿಕ್ಷಣವನ್ನು ನೀಡಿ ಉಚಿತವಾಗಿ ಟೂತ್ ಪೇಸ್ಟ್ ಹಾಗೂ ಬ್ರೇಶ್ ಅನ್ನು ಮಕ್ಕಳಿಗೆ ತಲುಪಿಸುವಲ್ಲಿ ಯಶ್ವಸಿಯಾಗಿರುತ್ತಾರೆ. ವಕರಿಗೆ, ತಂಬಾಕು ಮತ್ತು ಅದರಿಂದಾಗುವ ದುಶ್ಪರಿಣಾಮಗಳು, ಬಾಯಿ ಕ್ಯಾನ್ಸರ್ ಬಗ್ಗೆ ಅರಿವು ಮೂಡಿಸುತ್ತ ಅದಕ್ಕೆ ಸಂಬಂದ ಪಟ್ಟ ಕಾರ್ಯಗಾರಗಳನ್ನು ನಡೆಸಿದ್ದಾರೆ.