Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅವಕಾಶ ನೀಡದಿರಲು ನೀವು ಮೊಘಲರಲ್ಲ : ಸಿದ್ದರಾಮಯ್ಯ ವಿರುದ್ಧ ಬಿವೈ ವಿಜಯೇಂದ್ರ ಗರಂ

Facebook
Twitter
Telegram
WhatsApp

ಬೆಂಗಳೂರು : ಸಿಎಂ ಸಿದ್ದರಾಮಯ್ಯ ಅವರು, ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಬಿಡುವುದಿಲ್ಲ ಎಂಬ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಬಿಜೆಪಿ ನಾಯಕರು ಗರಂ ಆಗಿದ್ದಾರೆ. ಈ ಬಗ್ಗೆ ಬಿಜೆಪಿ ರಾಜ್ಯಾಧ್ಯಕ್ಷ ಬಿ ವೈ ವಿಜಯೇಂದ್ರ ಪ್ರತಿಕ್ರಿಯೆ ನೀಡಿದ್ದಾರೆ.

ಮಾನ್ಯ @siddaramaiah ನವರೇ,
“ಹಿಂದೂ ರಾಷ್ಟ್ರ ಕಲ್ಪನೆ ಈ ದೇಶದ ಕೋಟ್ಯಾಂತರ ಜನರ ಸಂಕಲ್ಪ, ಅದಕ್ಕೆ ಅವಕಾಶ ನೀಡದಿರಲು ನೀವು ಮೊಘಲರಲ್ಲ, ಮೊಘಲರೇ ಮತ್ತೆ ಹುಟ್ಟಿ ಬಂದರೂ ಈಗದು ಸಾಧ್ಯವಿಲ್ಲ” ಭಾರತವೆಂದರೆ ಹಿಂದುತ್ವ, ಹಿಂದುತ್ವ ಎಂದರೆ ಬಹುತ್ವ, ವಿವಿಧತೆಯನ್ನು ತನ್ನ ಒಡಲಲ್ಲಿರಿಸಿಕೊಂಡು ಏಕತೆಯನ್ನು ಮೆರೆಯುತ್ತಿರುವುದೇ ಭಾರತೀಯತೆ. ಭಾರತೀಯ ಸಂಸ್ಕೃತಿಯನ್ನು ನಾಶಪಡಿಸಲು ಶತ ಶತಮಾನಗಳಿಂದಲೂ ಹೊರಗಿನವರ ಆಕ್ರಮಣ ನಡೆಯುತ್ತಲೇ ಇದೆ, ಮೊಘಲರ ನಿರಂತರ ದಾಳಿಗೆ ತುತ್ತಾಗಿ ಅಸಂಖ್ಯಾತ ಹಿಂದೂ ದೇವಾಲಯಗಳು ಭಗ್ನಗೊಂಡಿರುವುದಕ್ಕೆ, ನಾಮಾವಶೇಷಗೊಂಡಿರುವುದಕ್ಕೆ ಇಂದಿಗೂ ಸಾಕ್ಷಿ, ಪುರಾವೆಗಳು ನಮ್ಮ ಕಣ್ಣಿಗೆ ರಾಚುತ್ತಿವೆ.

ಎಷ್ಟೇ ದುರಾಕ್ರಮಣಗಳು ನಡೆದರೂ ಬಹುತ್ವ ಸಂಸ್ಕೃತಿಯ ಹಿಂದುತ್ವದ ಭಾರತ ಗಟ್ಟಿಯಾಗಿ ಉಳಿದಿದೆ. ಸ್ವಾತಂತ್ರ್ಯ ನಂತರವೂ ಮತಬ್ಯಾಂಕ್ ರಾಜಕಾರಣಕ್ಕಾಗಿ ಹಿಂದುತ್ವವನ್ನು ದಮನ ಮಾಡಲು ಕುಮ್ಮಕ್ಕು ನೀಡುತ್ತಿದ್ದ ಕಾಂಗ್ರೆಸ್ ಕುತಂತ್ರವನ್ನು ಬಗ್ಗು ಬಡಿಯಲೆಂದೇ ‘ಭಾರತೀಯ ಜನತಾ ಪಾರ್ಟಿ’ ಜನ್ಮತಾಳಿದ್ದು. ಕಾಂಗ್ರೆಸ್’ನ ಸ್ವಾರ್ಥ ಹಾಗೂ ನಿರಂಕುಶ ಪ್ರಭುತ್ವದ ಆಡಳಿತವನ್ನು ಮೂಲೆಗಟ್ಟಿ ದೇಶದ ಜನರು ಇಂದು ಬಿಜೆಪಿಯನ್ನು ಹೆಮ್ಮರವಾಗಿ ಬೆಳೆಸಿ ಅದರ ನೆರಳಲ್ಲಿ ಅಭಿವೃದ್ಧಿಯ ಭಾರತವನ್ನು ಕಾಣುತ್ತಿದ್ದಾರೆ. ರಾಜಕೀಯ ಭೂಪಟದಲ್ಲಿ ‘ಅಳಿಸಿ ಹೊಗುತ್ತಿರುವ ಕಾಂಗ್ರೆಸ್ ಅಸ್ತಿತ್ವ ಮೊದಲು ಉಳಿಸಿಕೊಳ್ಳಿ’ ಆ ನಂತರ ರಾಷ್ಟ್ರದ ಕುರಿತು ನೀವು ಮಾತನಾಡುವಿರಂತೆ. ಪೂಜ್ಯ ಪೇಜಾವರ ಶ್ರೀಗಳ ‘ಹಿಂದೂ ರಾಷ್ಟ್ರದ ಪ್ರತಿಪಾದನೆ’ ಇನ್ನೊಬ್ಬರನ್ನು ಹೊರಗಟ್ಟುವುದಲ್ಲ, ಬಲವಂತ ಮತಾಂತರವಲ್ಲ, ಎಲ್ಲರನ್ನೂ ಒಳಗೊಂಡ ನೈಜ ಭಾರತೀಯತೆಯನ್ನು ರಕ್ಷಿಸುವುದು ಭಾರತದ ಅಸ್ತಿತ್ವ ಎಂದು ಟ್ವೀಟ್ ಮಾಡಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

ಪೆಟ್ರೋಲ್ ಬಂಕಿನಲ್ಲಿ ವಂಚನೆ ಆರೋಪ : ಗ್ರಾಹಕರು ಹಾಗೂ ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ

  ವರದಿ ಮತ್ತು ಫೋಟೋ ಕೃಪೆ ಸುರೇಶ್ ಬೆಳಗೆರೆ ಮೊ : 97398 75729 ಸುದ್ದಿಒನ್, ಚಳ್ಳಕೆರೆ, ನವೆಂಬರ್. 22 : ಬೈಕ್ ಗಳಿಗೆ ಪೆಟ್ರೋಲ್ ಹಾಕುವ ವೇಳೆ ಗ್ರಾಹಕರಿಗೆ ಇಲ್ಲಿನ ಸಿಬ್ಬಂದಿ ವಂಚನೆ

ಅಕ್ರಮ ಕಸಾಯಿ ಖಾನೆ ಬಂದ್ ಮಾಡಿ : ದಾದಾ ಪೀರ್ ಆಗ್ರಹ : ವಿಡಿಯೋ ವೈರಲ್..!

ಸುದ್ದಿಒನ್, ಹಿರಿಯೂರು : ಅಕ್ರಮವಾಗಿ ಕಸಾಯಿ ಖಾನೆ ನಡೆಸುತ್ತಿರುವವರ ವಿರುದ್ಧ ದಾದಾ ಪೀರ್ ಎಂಬುವವರು ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದಾದಾ ಪೀರ್ 6ನೇ ವಾರ್ಡ್ ನಲ್ಲಿ ವಾಸಿಸುವವ ವ್ಯಕ್ತಿಯಾಗಿದ್ದಾರೆ. ಕಸಾಯಿ ಖಾನೆಯಿಂದ ಮಕ್ಕಳು ಅನಾರೋಗ್ಯಕ್ಕೆ

error: Content is protected !!