ಹುಬ್ಬಳ್ಳಿ: ಜನ ಅದಕ್ಕೆ ಇದಕ್ಕೆ ಅಂತ ರಾಜ್ಯ ಮತ್ತು ಕೇಂದ್ರಕ್ಕೆ ತೆರಿಗೆಯನ್ನು ಕಟ್ಟುತ್ತಲೇ ಇರುತ್ತಾರೆ. ಆ ತೆರಿಗೆ ಬಗ್ಗೆ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ. ರಾಜ್ಯದ ಜನ ನಾಲ್ಕು ಲಕ್ಷ ಕೋಟಿ ತೆರಿಗೆ ಹಣ ಕಟ್ಟುತ್ತಿದ್ದರು, ಕೇಂದ್ರದಿಂದ ರಾಜ್ಯಕ್ಕೆ ಬರುತ್ತಿರುವುದು, ಕೇವಲ ಐವತ್ತು ಸಾವಿರ ಕೋಟಿ ಎಂದಿದ್ದಾರೆ.
ಏನದಾರೂ ವಿಪತ್ತು ಸಂಭವಿಸಿದರೆ ಆಗ ರಾಷ್ಟ್ರೀಯ ವಿಪತ್ತು ಸಂಗ್ರಹಣಾ ನಿಧಿಯಿಂದ ಪರಿಹಾರ ನೀಡಲಾಗುತ್ತದೆ. ಆದರೆ ಈ ಬಾರಿ ಬರ ಪರಿಹಾರ ನೀಡಿ ಎಂದು ಎಷ್ಟೇ ಮನವಿ ಮಾಡಿದರು ಕೇಂದ್ರ ಮಾತ್ರ ತಲೆ ಕೆಡಿಸಿಕೊಂಡಂತೆ ಕಾಣುತ್ತಿಲ್ಕ. ಈ ಬಗ್ಗೆಯೂ ಮಾತನಾಡಿದ ಸಿಎಂ ಸಿದ್ದರಾಮಯ್ಯ, ರಾಷ್ಟ್ರೀಯ ವಿಪತ್ತು ನಿರ್ವಹಣಾ ನಿಧಿ ಕೇಂದ್ರ ಹಣವಲ್ಲ. ನಮ್ಮ ರಾಜ್ಯದಿಂದ ನಾಲ್ಕು ಲಕ್ಷ ಕೋಟಿ ತೆರಿಗೆ ಹಣ ಸಂಗ್ರಹಿಸಲಾಗಿದೆ. ಅದರಲ್ಲಿ ನಾವೂ 37 ಸಾವಿರ ಕೋಟಿ ತೆರಿಗೆ ಹಣ ಪಡೆಯುತ್ತಿದ್ದೇವೆ ಎಂದಿದ್ದಾರೆ.
ಕೇಂದ್ರ ಪ್ರಾಯೋಜಿತ ಯೋಜನೆಗೆ 13,000 ಕೋಟಿ ರೂ. ನೀಡಲಾಗುತ್ತಿದೆ. ಇದು ನ್ಯಾಯವೇ ಎಂದು ಪ್ರಶ್ನಿಸಿದರೆ ಬಿಜೆಪಿಯವರು ಜಗಳಕ್ಕೆ ಬರುತ್ತಾರೆ. ಇದು ಅವರ ಹಣ ಎಂದು ಹೇಳುತ್ತಾರೆ. ಆದರೆ ಇದು ಕನ್ನಡಿಗರು ಪಾವತಿಸುವ ತೆರಿಗೆ ಹಣ ತೆರಿಗೆ ಸಂಗ್ರಹದಲ್ಲಿ ಕರ್ನಾಟಕ ಮಹಾರಾಷ್ಟ್ರದ ನಂತರದ ಎರಡನೇ ಸ್ಥಾನದಲ್ಲಿದೆ. ಆದರೆ ಅವರು ನಮಗೇನು ಕೊಡುತ್ತಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ಬೇಸರ ಹೊರ ಹಾಕಿದ್ದಾರೆ.