ಜಾತಿ ಗಣತಿ ವಿಚಾರಕ್ಕೆ ರಾಜ್ಯ ಸರ್ಕಾರದ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಶಿವಶಂಕರಪ್ಪ..!

suddionenews
1 Min Read

ದಾವಣಗೆರೆ : ಜಾತಿ ಗಣತಿ ವಿಚಾರ ರಾಜ್ಯದಲ್ಲಿ ಆಗಾಗ ಸದ್ದು ಮಾಡುತ್ತಲೇ ಇದೆ. ಇದೀಗ ಮತ್ತೊಮ್ಮೆ ಜಾತಿ ಗಣತಿ ವಿಚಾರವಾಗಿ ಅಖಿಲ ಭಾರತ ವೀರಶೈವ ಮಹಾ ಸಭೆಯ ಅಧ್ಯಕ್ಷ ಶಾಮನೂರು ಶಿವಶಂಕರಪ್ಪ ರಾಜ್ಯ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರೇ ಹೇಳಿದ್ದಾರೆ. ನಾನೇ ಜಾತಿ ಗಣತಿ ವರದಿಯನ್ನು ನೋಡಿಲ್ಲ ಎಂದು. ವರದಿ ಜಾರಿ ಮಾಡುವುದನ್ನು ಅವರನ್ನೇ ಕೇಳಿ. ಅವರು ಅಲ್ಲಿ ಮಾಡಲಿ. ನಾವೂ ಇಲ್ಲಿ ಮಾಡೋಣಾ ಎಂದಿದ್ದಾರೆ.

ಈಗ ಆಗಿರುವ ಜಾತಿ ಗಣತಿ ಸರಿಯಿಲ್ಲ. ಇನ್ನೊಮ್ಮೆ ಜಾತಿ ಗಣತಿ ಆಗಲಿ ಅಂತ ಸಿಎಂ ಸಿದ್ದರಾಮಯ್ಯ ಅವರಿಗೆ 60 ಶಾಸಕರು ಮನವಿ ಸಲ್ಲಿಸಿದ್ದಾರೆ. ದಾವಣಗೆರೆಯಲ್ಲಿ 23 ಮತ್ತು 24 ರಂದು ಅಖಿಲ ಭಾರತ ವಿಋಶೈವ ಮಹಾಸಭೆಯ 24ನೇ ಅಧಿವೇಶನ ನಡೆಯುತ್ತದೆ. ಅದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಆಹ್ವಾನ ಮಾಡಲಾಗಿದೆ. ಅವರು ಬರುತ್ತಾರಾ ಹೇಗೆ ಎಂಬುದನ್ನು ನೋಡಬೇಕಿದೆ. ಆದರೆ ಸಿದ್ದರಾಮಯ್ಯ ಅವರಿಗೆ ಆಹ್ವಾನ ನೀಡಿಲ್ಲ ಎಂದಿದ್ದಾರೆ.

ಬೆಳಗಾವಿಯ ಖಾಸಗಿ ಹೋಟೆಲ್ನಲ್ಲಿ ವೀರಶೈವ ಮಹಾಸಭಾ ಅಧ್ಯಕ್ಷ ಶಾಮನೂರ ಶಿವಶಂಕರಪ್ಪ ನೇತೃತ್ವದಲ್ಲಿ ಪೂರ್ವಭಾವಿ ಸಭೆ ಮಾಡಲಾಗಿದೆ. ಸಭೆಯಲ್ಲಿ ಸಚಿವರಾದ ಈಶ್ವರ ಖಂಡ್ರೆ, ಶಿವಾನಂದ ಪಾಟೀಲ್, ಲಕ್ಷ್ಮೀ ಹೆಬ್ಬಾಳ್ಕರ್ ಭಾಗಿಯಾದ್ದರು. ಶಾಸಕರಾದ ಅಲ್ಲಮಪ್ರಭು ಪಾಟೀಲ್, ಶಾಸಕ ಅರವಿಂದ್ ಬೆಲ್ಲದ್, ವಿಜಯಾನಂದ ಕಾಶಪ್ಪನವರ್, ಲತಾ ಮಲ್ಲಿಕಾರ್ಜುನ, ಮಹಾಂತೇಶ್ ಕೌಜಲಗಿ, ವಿನಯ್ ಕುಲಕರ್ಣಿ, ಶರಣಗೌಡ ಕಂದಕೂರ, ಎಂ.ವೈ ಪಾಟೀಲ್, ಬಾಬಾಸಾಹೇಬ್ ಪಾಟೀಲ್, ಬಿ.ಆರ್ ಪಾಟೀಲ್, ಶರಣು ಸಲಗರ, ಎಂಎಲ್ಸಿಗಳಾದ ಬಿಜಿ ಪಾಟೀಲ್, ಚನ್ನರಾಜ್ ಹಟ್ಟಿಹೊಳಿ, ಮಾಜಿ ರಾಜ್ಯಸಭಾ ಸದಸ್ಯ ಪ್ರಭಾಕರ ಕೋರೆ ಭಾಗವಹಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *