ಕಾಂಗ್ರೆಸ್ ನಲ್ಲಿ ಸಿಎಂ ವಿಚಾರ ಆಗಾಗ ಮುನ್ನೆಲೆಗೆ ಬಂದು ನಿಲ್ಲುತ್ತದೆ. ಡಿಕೆ ಶಿವಕುಮಾರ್ ಬೆಂಬಲಿಗರು ಆದಷ್ಟು ಬೇಗ ನಮ್ಮ ನಾಯಕ ಸಿಎಂ ಆಗಲಿ ಎಂದೇ ಹಾರೈಸುತ್ತಿದ್ದಾರೆ. ಇದರ ನಡುವೆ ನೊಣವಿಕೆರೆ ಸ್ವಾಮೀಜಿಗಳು ಭವಿಷ್ಯ ನುಡಿದಿದ್ದಾರೆ. ಡಿಕೆ ಶಿವಕುಮಾರ್ ಸಿಎಂ ಆಗಲಿದ್ದಾರೆ ಎಂದಿದ್ದಾರೆ. ಇದಕ್ಕೆ ಮಾಜಿ ಸಿಎಂ ಕುಮಾರಸ್ವಾಮಿ ಪ್ರತಿಕ್ರಿಯೆ ನೀಡಿದ್ದಾರೆ.
ಲೋಕಸಭಾ ಚುನಾವಣಾ ಆದ್ಮೇಲೆ ಅರ್ಜಿ ಹಾಕಿಕೊಂಡು ಹೋಗಿದ್ದಾರೆ. ಯಾರೂ ಬೇಕಾದರೂ ಆಗಬಹುದು. ಐವತ್ತು, ಅರವತ್ತು ಜನ ಕರ್ಕೊಂಡು ಬರ್ತೀನಿ, ಏನು ತೊಂದರೆ ಆಗುವುದು ಬೇಡ ಅಂತ ಹೇಳಿ ಹೋಗಿದ್ದಾರಲ್ಲ. ಸಣ್ಣ ಪುಟ್ಟವರು ಹೋಗುವುದಕ್ಕೆ ಆಗುತ್ತಾ..? ಐವತ್ತು ಅರವತ್ತು ಜನ ಕರ್ಕೊಂಡು ಎಂದಿದ್ದಾರೆ.
ಯಾರೋ ಮಾಹಿತಿ ಹೇಳುತ್ತಿದ್ದರು ಮೊನ್ನೆ. ನಿಮ್ಮ ಜೊತೆಗೆ ಬಂದು ಬಿಡ್ತೀನಿ ಅಂತ. ಅಲ್ಲಿಯವರೆಗೂ ರಿಲೀಫ್ ಕೊಡಿ ಅಂತ ಹೋಗಿದ್ದು ಗೊತ್ತೇ ಇದೆ. ಲೋಕಸಭಾ ಚುನಾವಣೆ ಕಳೆಯಲಿ. ಮಹಾರಾಷ್ಟ್ರದಲ್ಲಿ ಆಯ್ತಲ್ಲ ಲ. ಇಲ್ಲಿ ಯಾರೂ ಹುಟ್ಟಿಕೊಳ್ಳುತ್ತಾರೋ ಗೊತ್ತಿಲ್ಲ. ಈ ದೇಶದಲ್ಲಿ ಇವತ್ತಿನ ರಾಜಕಾರಣ ನೋಡಿದರೆ ಏನು ಬೇಕಾದರೂ ನಡೆಯಬಹುದು.
ಇಲ್ಲಿ ಸದ್ಯಕ್ಕೆ ಯಾರಿಗೂ ಪ್ರಾಮಾಣಿಜತೆ ಉಳಿದಿಲ್ಲ. ಅವರವರ ಸ್ವಾರ್ಥಕ್ಕೆ ಏನು ಬೇಕೋ ಅದನ್ನು ಮಾಡಿಕೊಂಡು ಹೋಗುತ್ತಾರೆ. ಇವತ್ತು ಇಲ್ಲಿ ಇರುತ್ತಾರೆ. ಆದರೆ ಅನುಕೂಲ ಆಗಬೇಕು ಎಂದರೆ ಮತ್ತೊಂದು ಕಡೆಗೂ ಹೋಗುತ್ತಾರೆ. ರಾಜಕಾರಣದಲ್ಲಿ ಇದನ್ನೆ ನೋಡಿಕೊಂಡು ಬಂದಿದ್ದೇವೆ. ಅದೇ ರೀತಿ ನಡೆದುಕೊಂಡು ಬಂದಿದೆ ಎಂದಿದ್ದಾರೆ.