ಕಾಡುಗೊಲ್ಲ ಸಮಾಜದ ಹೆಸರಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವಂತೆ ಒತ್ತಾಯಿಸಿ ಮುಖಂಡರ ಪ್ರತಿಭಟನೆ

2 Min Read

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729

ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್.08 :
ಆರ್ಥಿಕ ಹಾಗೂ ಸಾಮಾಜಿಕ ಪ್ರಗತಿಗೆ ಸರ್ಕಾರಿ ಇಲಾಖೆ ಹಾಗೂ ಖಾಸಗಿ ಕ್ಷೇತ್ರಗಳಲ್ಲಿ ಅಗತ್ಯ ದಾಖಲೆಗಳ ಅಗತ್ಯವಿದ್ದು ಈ ಸಂಬಂಧ ಕಾಡುಗೊಲ್ಲ ಸಮಾಜದ ಹೆಸರಿನಲ್ಲಿ ಜಾತಿ ಮತ್ತು ಆದಾಯ ಪ್ರಮಾಣ ಪತ್ರ ನೀಡುವಂತೆ ತಾಲ್ಲೂಕು ಕಾಡುಗೊಲ್ಲ ಸಂಘ ಹಾಗೂ ಸಮುದಾಯದ ಮುಖಂಡರು   ತಹಶೀಲ್ದಾರ್  ಕಾರಿನ ಮುಂದೆ ಕಂಬಳಿ ಹಾಸಿ ಕುಳಿತು  ಪ್ರತಿಭಟನೆ ನಡೆಸಿದರು.

ನಗರದ ತಾಲೂಕು ಕಚೇರಿ ಮುಂಭಾಗಲ್ಲಿ ಕಾಡುಗೊಲ್ಲ ಎಂದು ಜಾತ್ರಿ ಪ್ರಮಾಣ ಪತ್ರ ನೀಡುವಂತೆ ಆಗ್ರಹಿಸಿ ಪ್ರತಿಭಟನೆ ನಡೆಸಿದರು.

ರಾಜ್ಯ ಸರ್ಕಾರದ ಸುತ್ತೋಲೆ ಇದ್ದರೂ ಸಹ ಕಾಡಗೊಲ್ಲರ ಜಾತಿ ಪ್ರಮಾಣ ಪತ್ರ ಕೊಡಲು ಮೀನಾ ಮೇಶ ಎಣಿಸುತ್ತಿದ್ದಾರೆ. ಜಿಲ್ಲಾ ಉಸ್ತುವರಿ ಸಚಿವ ಡಿ.ಸುಧಾಕರ್ ಹಾಗೂ ಶಾಸಕ ಟಿ.ರಘುಮೂರ್ತಿಯವರು ಹೇಳಿದರೂ, ಜಿಲ್ಲಾಧಿಕಾರಿ ಹೇಳಿದರೂ ಪ್ರಮಾಣ ಪತ್ರ ನೀಡಲು ಮುಂದಾಗುತ್ತಿಲ್ಲ ಎಂದು ಅಕ್ರೋಶ ವ್ಯಕ್ತಪಡಿಸಿದ್ದಾರೆ.

ತಾಲೂಕು ಕಚೇರಿ ಮುಂದೆ ಶಾಂತಿ ಪ್ರತಿಭಟನೆ 7ನೇ ತಾರೀಖಿನ ಒಳಗಾಗಿ ಪ್ರಮಾಣಪತ್ರ ಕೊಡುವುದಾಗಿ ಹೇಳಿದ ತಹಶೀಲ್ದಾರ್ ಅರ್ಜಿ ಸಲ್ಲಿಸಿದರೆ ದಾಖಲಾತಿಗಳನ್ನು ಸಲ್ಲಿಸಿಲ್ಲ ಎಂದು ನೀಡಿದ್ದಾರೆ. ಎಂದು ಕಾಡುಗೊಲ್ಲರ ಸಂಘದ ಅಧ್ಯಕ್ಷ ರಾಜಣ್ಣ ಅಗ್ರಹಿಸಿದ್ದಾರೆ.

ತಹಶೀಲ್ದಾರ್ ರೇಹಾನ್ ಪಾಷ ಮಾತನಾಡಿ ಮತ್ತೆ ಹೊಸದಾಗಿ ಅರ್ಜಿ ಹಾಕಿ ಬುಧವಾರ ಕೊಡುತ್ತೇನೆ ಎಂದು ಮಾತು ಕೊಟ್ಟಿರುತ್ತಾರೆ ಬೇರೆ ಬೇರೆ ತಾಲೂಕುಗಳಲ್ಲಿ ಕೊಟ್ಟಿದ್ದಾರೆ ನಮ್ಮ ತಾಲೂಕಲ್ಲಿ ಯಾಕೆ ಕೊಡುತ್ತಿಲ್ಲ..? ಎಂಬುವುದೇ ನಮ್ಮ ಪ್ರಶ್ನೆ ?

ತಾಲೂಕಿನ ನಾಡ ಕಚೇರಿಯ ಅಧಿಕಾರಿಗಳಿಗೆ ನಿರ್ದೇಶನ ನೀಡುವಂತೆ ತಾಲೂಕು ಕಾಡುಗೊಲ್ಲರ ಸಂಘದ ವತಿಯಿಂದ ತಹಸೀಲ್ದಾರ್‌ ಮನವಿ ಸಲ್ಲಿಸಿದರು.
ಕಾಡುಗೊಲ್ಲರ ಸಂಘದ ರಾಜ್ಯ ಗೌರವಾಧ್ಯಕ್ಷ ಮೀಸೆ ಮಹಾಲಿಂಗಪ್ಪ ಮಾತನಾಡಿ ಕಾಡುಗೊಲ್ಲ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ನೀಡುವಂತೆ ರಾಜ್ಯ ಸರ್ಕಾರ ಆದೇಶ ಜಾರಿಪಡಿಸಿದ್ದು, ಅಗತ್ಯ ದಾಖಲೆಯೊಂದಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಿದ್ದರೂ ಸಮುದಾಯದ ಹೆಸರಿನಲ್ಲಿ ಜಾತಿ ಆದಾಯ ಪತ್ರ ನೀಡುವಲ್ಲಿ ವಿಳಂಬವಾಗುತ್ತಿದೆ.

ಹೀಗಾಗಿ ಸರ್ಕಾರದ ಆದೇಶದನ್ವಯ ಕಾಡುಗೊಲ್ಲರ ಸಮುದಾಯದ ಹೆಸರಿನಲ್ಲಿ ಜಾತಿ ಪ್ರಮಾಣ ಪತ್ರ ನೀಡುವಂತೆ ತಾಲೂಕಿನ ಎಲ್ಲಾ ನಾಡಕಚೇರಿಯ ಅಧಿಕಾರಿ ವರ್ಗದವರಿಗೆ ನಿರ್ದೇಶನ ನೀಡುವಂತೆ ಸಂಘದ ಅನೇಕ ಮುಖಂಡರು ಒತ್ತಾಯಿಸಿದರು.

ಈ ಪ್ರತಿಭಟನೆ ವೇಳೆ ತಾಲೂಕು ಕಾಡುಗೊಲ್ಲರ ಸಂಘದ ಪದಾಧಿಕಾರಿಗಳು ಕಾಡುಗೊಲ್ಲ ಸಮುದಾಯದ ಮುಖಂಡರಾದ ಮೀರಸಾಬಿಹಳ್ಳಿ ಕರಿಯಣ್ಣ ನಿವೃತ್ತ   ಶಿಕ್ಷಕ ಮಂಜಣ್ಣ, ಮೂಡಲ ಗಿರಿಯಪ್ಪ ಶ್ರೀಕಂಠಪ್ಪ ನಿಸರ್ಗ ಗೋವಿಂದರಾಜು ಭಾನು ವೀರೇಶ್. ಸಿದ್ದಪುರ ಮಂಜುನಾಥ. ಜಿಕೆ ಈರಣ್ಣ ಮಲ್ಲಿಕಾರ್ಜುನ್, ರಾಜಣ್ಣ ತಿಪ್ಪೇರುದ್ರಪ್ಪ ಸೇರಿದಂತೆ ಕಾಡುಗೊಲ್ಲ ಸಮುದಾಯದ ಪದಾಧಿಕಾರಿಗಳು ಮುಖಂಡರು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *