ಕಳೆದ ಕೆಲವು ದಿನಗಳಿಂದ ಹಾಸಿಗೆ ಹಿಡಿದಿದ್ದ ಹಿರಿಯ ನಟಿ ಲೀಲಾ ವತಿ ನಿಧನರಾಗಿದ್ದಾರೆ. ನೆಲಂಗಲದ ಸೋಲದೇವನಹಳ್ಳಿ ತೋಟದ ಮನೆಯಲ್ಲಿ ವಾಸವಾಗಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಲೀಲಾವತಿ ಅವರಿಗೆ 85 ವತ್ಷ ವಯಸ್ಸಾಗಿತ್ತು.
ಲೀಲಾವತಿ ಅವರ ನಿಧನಕ್ಕೆ ಅಭಿಮಾನಿಗಳು ಸೇರಿದಂತೆ ಕನ್ನಡ, ತಮಿಳು, ತೆಲುಗು ಇಂಡಸ್ಟ್ರಿಯವರು ಕಂಬನಿ ಮಿಡಿದಿದ್ದಾರೆ. ಲೀಲಾವತಿ ಅವರು ಸಾಕಷ್ಟು ಸಮಾಜಸೇವೆ ಮಾಡುತ್ತಿದ್ದರು. ಪ್ರಾಣಿಗಳಿಗಾಗಿ ಮನ ಮಿಡಿಯುತ್ತಿದ್ದರು. ಅದಕ್ಕಾಗಿಯೇ ಸೋಲದೇವನಹಳ್ಳಿಯಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಕಟ್ಟಿಸಿದ್ದಾರೆ. ಇತ್ತಿಚೆಗಷ್ಟೇ ಪಶು ವೂದ್ಯಕೀಯ ಆಸ್ಪತ್ರೆಯನ್ನು ಕಟ್ಟಿಸಿದ್ದಾರೆ. ಹೀಗೆ ಸಮಾಜ ಸೇವೆಯಲ್ಲಿ ತೊಡಗಿಕೊಂಡವರು ಲೀಲಾವತಿ.
ಲೀಲಾವತಿಯವರ ಮೂಲ ಹೆಸರು ಲೀಲಾ ಕಿರಣ್. ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿಯಲ್ಲಿ, 1938ನೇ ಇಸವಿಯಲ್ಲಿ ಜನಿಸಿದರು. 6 ವರ್ಷವಿದ್ದಾಗಲೇ ಲೀಲಾವತಿಯವರು ಪೋಷಕರನ್ನ ಕಳೆದುಕೊಂಡಿದ್ದರು. ನಾಟಕ, ರಂಗಭೂಮಿ ಬಗೆಗೆ ಚಿಕ್ಕವಯಸ್ಸಿನಲ್ಲೇ ಆಸಕ್ತಿ ಹೊಂದಿದ್ದ ಅವರು, ಮೈಸೂರಿನ ರಂಗಭೂಮಿಯಿಂದ ವೃತ್ತಿಜೀವನ ಆರಂಭಿಸಿದರು. ಸುಬ್ಬಯ್ಯ ನಾಯ್ಡು ಅವರ ಸಂಸ್ಥೆಯಲ್ಲಿ ರಂಗಭೂಮಿ ಕಲಾವಿದೆಯಾಗಿ ಅನೇಕ ನಾಟಕಗಳಲ್ಲಿ ಅಭಿನಯಿಸಿದರು. ಬಳಿಕ ಸ್ಯಾಂಡಲ್ವುಡ್ನತ್ತ ಮುಖ ಮಾಡಿದ ಅವರು ಮೇರು ನಟರೊಂದಿಗೆ ಅಭಿನಯಿಸಿದ ಹೆಗ್ಗಳಿಗೆ ಇವರಿಗಿದೆ.