ಬೆಂಗಳೂರು: ಇತ್ತಿಚೆಗೆ ಭವಾನಿ ರೇವಣ್ಣ ಅವರು ಕಾರಿನಲ್ಲಿ ಹೋಗುವಾಗ ಬೈಕ್ ಸವಾರನೊಬ್ಬ ಕಾರಿಗೆ ಗುದ್ದಿದ್ದ. ಈ ವೇಳೆ ಭವಾನಿ ರೇವಣ್ಣ ಗರಂ ಆಗಿದ್ದರು. ನೀನು ಸಾಯುವುದಕ್ಕೆ ನನ್ನ ಕಾರೇ ಬೇಕಿತ್ತಾ..? 50 ಲಕ್ಷ ಕೊಡಿ ಎಂದೆಲ್ಲಾ ಹೇಳಿದ ಮಾತಿನ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಇದೀಗ ಇದೇ ವಿಚಾರ ಮತ್ತೆ ಮುನ್ನೆಲೆಗೆ ಬಂದಿದೆ.
1.5 ಕೋಟಿ ರೂಪಾಯಿ ಕಾರಿನ ಅಪಘಾತ ಪ್ರಕರಣದ ಸುಖಾಂತ್ಯಕ್ಕೆ ದೇವೇಗೌಡ್ರ ಕುಟುಂಬ ಸಾಕಷ್ಟು ಪ್ರಯತ್ನ ಪಟ್ಟಿತ್ತು. ಆದರೆ ಇದೀಗ ಆ 1.5 ಕೋಟಿ ಬೆಲೆಯ ಕಾರಿನ ಮಾಲೀಕ ಯಾರಿರಬಹುದು ಎಂಬುದರ ಹುಡುಕಾಟ ಜೋರಾಗಿಯೇ ನಡೆಯುತ್ತಿದೆ. ಕಾರು ಯಾರದು..? ಕಾರಿನ ನಿಜವಾದ ಮಾಲೀಕನಿಗೂ ಭವಾನಿ ರೇವಣ್ಣ ಅವರಿಗೂ ಏನು ಸಂಬಂಧ ಎಂಬ ಹುಡುಕಾಟ ನಡೆಸುತ್ತಿದ್ದಾರೆ.
ಈ ಕಾರು ಆಶ್ಪ್ರಾ ಇನ್ಫ್ರಾ ಇಂಜಿನಿಯರ್ಸ್ ಪ್ರವೈಟ್ ಲಿಮಿಟೆಡ್ ಅನ್ನೋ ಕಂಪನಿ ಹೆಸರಲ್ಲಿ ರಿಜಿಸ್ಟರ್ ಆಗಿದೆ. ಈ ಕಂಪನಿ ಡೈರೆಕ್ಟರ್ಸ್ ಹೆಸರು ಪ್ರಭಾಕರ್ ರೆಡ್ಡಿ ಮತ್ತು ಅಭಿಜಿತ್ ಅಶೋಕ್ ಎಂಬಿಬ್ಬರು ಗುತ್ತಿಗೆದಾರರು. ಇವರು ಬಿಬಿಎಂಪಿ ಕಂಟ್ರಾಕ್ಟರ್ ಆಗಿದೆ. 1.5 ಕೋಟಿ ಕಾರಿನ ಹೆಸರು ಟೊಯೋಟಾ ವೆಲ್ ಫೇರ್ ಆಗಿದೆ.
ಸಾರ್ವಜನಿಕ ಕುಂದುಕೊರತೆ ವಿಭಾಗ : ನಿಮ್ಮ ಧ್ವನಿ - ನಮ್ಮ ವೇದಿಕೆ
ನಿಮ್ಮ ಊರಿನ ಸಮಸ್ಯೆಗಳು ಇನ್ನು ಮುಂದೆ ಕೇವಲ ಚರ್ಚೆಯಾಗಬಾರದು, ಅವುಗಳಿಗೆ ಪರಿಹಾರ ಸಿಗಬೇಕು.
ವರದಿ ಮಾಡುವುದು ಹೇಗೆ?
- ನಿಮ್ಮ ಸುತ್ತಮುತ್ತಲಿನ ರಸ್ತೆ, ನೀರು, ವಿದ್ಯುತ್ ಸಮಸ್ಯೆಗಳ ಫೋಟೋ, ವಿಡಿಯೋ ಅಥವಾ ಮಾಹಿತಿ ನಮಗೆ ಕಳುಹಿಸಿ.
ನಾವು ಏನು ಮಾಡುತ್ತೇವೆ?
- ನೀವು ಕಳುಹಿಸಿದ ವರದಿಗಳನ್ನು suddione.com ನಲ್ಲಿ ಪ್ರಕಟಿಸುತ್ತೇವೆ.
- ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳ ಗಮನಕ್ಕೆ ತಂದು ಪರಿಹಾರಕ್ಕಾಗಿ ಒತ್ತಾಯಿಸುತ್ತೇವೆ.
- ನಿಮ್ಮೂರಿನ ಅಭಿವೃದ್ಧಿಗೆ ನಿಮ್ಮೊಂದಿಗೆ ಧ್ವನಿಗೂಡಿಸುತ್ತೇವೆ.


















