Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಅಪ್ಪ-ಅಮ್ಮನ ಪೂಜೆಗೆ ಕರೆದುಕೊಂಡು ಬರ್ತಿದ್ದ..ಈಗ ಅವನಿಗೆ ಪೂಜೆ ಮಾಡಬೇಕು : ರಾಘವೇಂದ್ರ ರಾಜ್‍ಕುಮಾರ್..!

Facebook
Twitter
Telegram
WhatsApp

ಬೆಂಗಳೂರು: ಅಪ್ಪು ಇನ್ನಿಲ್ಲ ಅನ್ನೋ ಸತ್ಯವನ್ನ ಒಪ್ಪಿಕೊಳ್ಳಲೇಬೇಕು. ಯಾಕಂದ್ರೆ ಇಂದು ಬೆಳಗ್ಗೆವರೆಗೂ ಇದ್ದ ಅಪ್ಪು ಪಾರ್ಥಿವ ಶರೀರವೂ ಕಣ್ಮುಂದೆ ಇಲ್ಲ. ಎಲ್ಲಾ ಕಾರ್ಯವೂ ಮುಗಿದಿದೆ. ಆದ್ರೆ ಅಭಿಮಾನಿಗಳ ಮನದಲ್ಲಿ ಇನ್ನು ಆ ಗೊಂದಲ ಹಾಗೇ ಇದೆ. ನಿಜವಾಗಿಯೂ ಅಪ್ಪುನಾ ಕಳೆದುಕೊಂಡಿದ್ದು ನಾವೂ ಅನ್ನೋ ದುಃಖ.

ಎಲ್ಲಾ ಕಾರ್ಯಗಳು ಮುಗಿದ ಮೇಲೆ ರಾಘವೇಂದ್ರ ರಾಜ್‍ಕುಮಾರ್ ಮಾತನಾಡಿದ್ದು, ಭಾವುಕರಾಗಿದ್ದಾರೆ. ಅಪ್ಪು ಇಷ್ಟು ದಿನ ಅಪ್ಪ-ಅಮ್ಮನ ಪೂಜೆ ಮಾಡೋದಕ್ಕೆ ಕರೆದುಕೊಂಡು ಬರುತ್ತಿದ್ದ. ಉಷ್ಟು ಬೇಗ ಅವನು ಹೋಗ್ತಾನೆ ಅಂತ ಗೊತ್ತಿರಲಿಲ್ಲ. ಅಪ್ಪ-ಅಮ್ಮನ ಜೊತೆಗೆ ಅವನ ಪೂಜೆಯನ್ನು ಮಾಡಬೇಕು ಎಂದು ದುಃಖಿತರಾಗಿದ್ದಾರೆ.

ನಮ್ಮ ಕೊನೆಯುಸಿರು ಇರುವವರೆಗೂ ಈ ನೋವಿನ ಭಾರ ಮನದಲ್ಲೇ ಇರುತ್ತೆ. ಅಪ್ಪು ನಮಗಿಂತ ಹೆಚ್ಚಾಗಿ ಅಪ್ಪ ಅಮ್ಮನನ್ನ ಇಷ್ಟಪಟ್ಟಿದ್ದಾನೆ. ಅದಕ್ಕೆ ಅವರ ಬಳಿ ಬೇಗ ಹೋಗಿದ್ದಾನೆ. ಅವನನ್ನ ಮೆರವಣಿಗೆ ಮಾಡಿ ಕರೆ ತರಬೇಕೆಂಬ ಆಸೆ ನಮಗೂ ಇತ್ತು. ಆದ್ರೆ ನಮ್ಮಿಂದ ಬೇರೆಯವರಿಗೆ ತೊಂದರೆಯಾಗಬಾರದು. ಅಪ್ಪಾಜಿ-ಅಮ್ಮ ಹೋದಾಗ ನಡೆದ ಘಟನೆ ಇನ್ನು ನೆನಪಿದೆ. ಅದಕ್ಕೆ ದಾರಿ ಮಾಡಿಕೊಡಬಾರದು ಅಂತ ಈ ನಿರ್ಧಾರಕ್ಕೆ ಬಂದ್ವಿ. ಕಳೆದ ಮೂರು ದಿನಗಳಿಂದಲೂ ಅಭಿಮಾನಿಗಳು, ಮಾಧ್ಯಮದವರು ಮತ್ತು ಪೊಲೀಸರು ಶಾಂತಿ ಕಾಪಾಡಿದ್ದೀರಿ. ನನ್ನ ಕಡೆಯಿಂದ ಎಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದಿದ್ದಾರೆ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅವಕಾಶ ಸಿಗದೆ ಅಲ್ಲು ಅರ್ಜುನ್ ಕೂಡ ನೊಂದಿದ್ದರು.. ಇಂದು ಪ್ಯಾನ್ ಇಂಡಿಯಾ ನಟ..!

ಇಂದು ಸ್ಟಾರ್ ನಟರಾಗಿರುವ, ಪ್ಯಾನ್ ಇಂಡಿಯಾ ಮಟ್ಟದಲ್ಲಿ ಗುರುತಿಸಿಕೊಳ್ಳುವ ನಟ-ನಟಿಯರ ಹಿಂದೆಯೂ ಸಾಕಷ್ಟು ಪರಿಶ್ರಮ ಅಡಗಿದೆ. ಆರಂಭದಲ್ಲಿ ಅವಕಾಶಕ್ಕಾಗಿ ಪರಿತಪಿಸಿದ್ದಾರೆ. ಅವಕಾಶ ಸಿಗದೆ ಅವಮಾನ ಎದುರಿಸಿದ್ದಾರೆ. ಅದರಲ್ಲಿ ಇಂದು ತೆಲುಗು ಇಂಡಸ್ಟ್ರಿಯ ಟಾಪ್ ಒನ್

ರಾಜ್ಯದ ಗಮನ ಸೆಳೆಯಲು ನನ್ನ ಮೇಲೆ ಗೂಬೆ ಕೂರಿಸುತ್ತಿದ್ದಾರೆ : ಕುಮಾರಸ್ವಾಮಿಗೆ ಡಿಕೆಶಿ ಟಾಂಗ್

ಬೆಂಗಳೂರು: ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದಲ್ಲಿ ನಿನ್ನೆಯಿಂದ ಡಿಸಿಎಂ ಡಿಕೆ ಶಿವಕುಮಾರ್ ಅವರ ಹೆಸರು ಓಡಾಡುತ್ತಿದೆ. ಅವರೇ ಪೆನ್ ಡ್ರೈವ್ ಹಂಚಿರುವುದು ಅಂತ ಜೆಡಿಎಸ್ ನಾಯಕರು ಆಕ್ರೋಶ ಹೊರ ಹಾಕಿದ್ದಾರೆ. ಕುಮಾರಸ್ವಾಮಿ ಅವರಿಗೆ

ವಿಶ್ವ ರೆಡ್‍ಕ್ರಾಸ್ ದಿನಾಚರಣೆ | ಸ್ವಯಂ ಪ್ರೇರಿತ ರಕ್ತದಾನ ಶಿಬಿರ

ಚಿತ್ರದುರ್ಗ ಮೇ. 08 :  ವಿಶ್ವ ರೆಡ್‍ಕ್ರಾಸ್ ದಿನಾಚರಣೆಯ ಅಂಗವಾಗಿ ಭಾರತೀಯ ರೆಡ್‍ಕ್ರಾಸ್ ಸಂಸ್ಥೆ ಚಿತ್ರದುರ್ಗ ಶಾಖೆ ಹಾಗೂ ಎಸ್.ಜಿ.ಸುರಕ್ಷಾ ನರ್ಸಿಂಗ್ ಮತ್ತು ಪ್ಯಾರಾಮೆಡಿಕಲ್ ಕಾಲೇಜು ಸಂಯುಕ್ತಾಶ್ರಯದಲ್ಲಿ ಮೇ. 8 ರ ಇಂದು ಕಾಲೇಜಿನಲ್ಲಿ

error: Content is protected !!