ಕೊನೆಯ ಓವರ್ ನಲ್ಲಿ ಅರ್ಷದೀಪ್ ಮ್ಯಾಜಿಕ್ | 4-1 ಅಂತರದಿಂದ ಸರಣಿ ವಶಪಡಿಸಿಕೊಂಡ ಭಾರತ

ಸುದ್ದಿಒನ್, ಬೆಂಗಳೂರು, ಡಿ.03 :ಐದನೇ ಟಿ20ಯಲ್ಲಿ ಟೀಂ ಇಂಡಿಯಾ ಜಯಭೇರಿ ಬಾರಿಸಿತು. ಕೊನೆಯ 

ಓವರ್ ನಲ್ಲಿ ಆಸೀಸ್ ಗೆಲುವಿಗೆ 10 ರನ್ ಬೇಕಿದ್ದಾಗ ಆರ್ಷದೀಪ್ ಮ್ಯಾಜಿಕ್ ಮಾಡಿದರು. 6 ಎಸೆತಗಳಲ್ಲಿ ವಿಕೆಟ್ ಪಡೆದು ಕೇವಲ ಮೂರು ರನ್ ನೀಡಿ ಟೀಂ ಇಂಡಿಯಾ ಗೆಲುವಿಗೆ ಕಾರಣರಾದರು. ಈ ಗೆಲುವಿನೊಂದಿಗೆ ಭಾರತ 5 ಪಂದ್ಯಗಳ ಸರಣಿಯನ್ನು 4-1 ಅಂತರದಿಂದ ವಶಪಡಿಸಿಕೊಂಡಿದೆ.

ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಭಾರತ ಆಸೀಸ್ ಬೌಲರ್‌ಗಳ ಅಬ್ಬರದಿಂದ ಭಾರತ ನಿಗಧಿತ 20 ಓವರ್‌ಗಳಲ್ಲಿ 8 ವಿಕೆಟ್ ನಷ್ಟಕ್ಕೆ 160 ರನ್ ಗಳಿಸಿತು.

ಭಾರತದ ಇನ್ನಿಂಗ್ಸ್‌ನಲ್ಲಿ ಶ್ರೇಯಸ್ ಅಯ್ಯರ್ (53) ಮಾತ್ರ ಅರ್ಧಶತಕ ದಾಖಲಿಸಿದರು.
ಯಶಸ್ವಿ (21), ಜಿತೇಶ್ ಶರ್ಮಾ (24) ಮತ್ತು ಅಕ್ಷರ್ ಪಟೇಲ್ (31) ಸಾಧಾರಣ ಸ್ಕೋರ್ ಗಳಿಸಿದರು. ಆಸೀಸ್ ಬೌಲರ್‌ಗಳಲ್ಲಿ ಬೆಹ್ರೆನ್‌ಡಾರ್ಫ್ ಮತ್ತು ಡುಶುಯಿಸ್ ತಲಾ 2 ವಿಕೆಟ್ ಪಡೆದರು. ಆರೋನ್ ಹಾರ್ಡಿ, ನಾಥನ್ ಇಲಿಸ್ ಮತ್ತು ತನ್ವೀರ್ ಸಂಗ ತಲಾ ಒಂದು ವಿಕೆಟ್ ಪಡೆದರು.

Share This Article
Leave a Comment

Leave a Reply

Your email address will not be published. Required fields are marked *