ವರದಿ ಮತ್ತು ಫೋಟೋ ಕೃಪೆ
ಸುರೇಶ್ ಬೆಳಗೆರೆ
ಮೊ : 97398 75729
ಸುದ್ದಿಒನ್, ಚಳ್ಳಕೆರೆ, ಡಿಸೆಂಬರ್.01 : ಚಿಕ್ಕಮಗಳೂರು ವಕೀಲರಾದ ಪ್ರೀತಮ್ ಇವರ ಮೇಲೆ ಚಿಕ್ಕಮಗಳೂರು ಟೌನ್ ಪೋಲೀಸರು ಹಲ್ಲೆ ಮಾಡಿ ಮಾರಣಾತಿಂಕವಾಗಿ ಗಾಯಗೊಳಿಸಿರುವ ಹಿನ್ನೆಲೆಯಲ್ಲಿ ಚಳ್ಳಕೆರೆ ವಕೀಲರ ಸಂಘದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಸೋಮು ಗುದ್ದು ರಸ್ತೆಯ ವಕೀಲರ ಭವನದಿಂದ ಹೊರಟ ವಕೀಲರ ಸಂಘದ ಪದಾಧಿಕಾರಿಗಳು ನೆಹರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ನಂತರ ತಾಲೂಕು ಕಚೇರಿಗೆ ತೆರಳಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟಿಸಿ ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ನೀಡಿ ಹಲ್ಲೆ ಮಾಡಿದ ಪೊಲೀಸರ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದರು.
ಈ ಸಂದರ್ಭದಲ್ಲಿ ವಕೀಲರ ಸಂಘದ ಅಧ್ಯಕ್ಷರಾದ ಕೆಎಂ ನಾಗರಾಜು ಮಾತನಾಡಿ ದಿನಾಂಕ 29.11.2023 ರಂದು ಚಿಕ್ಕಮಂಗಳೂರು ಟೌನ್ ನಲ್ಲಿ ವಕೀಲರಾದ ಪ್ರೀತಮ್ ಎಂಬುವರ ಮೇಲೆ ಟೌನ್ ಪೋಲಿಸಿನವರು ಯಾವುದೇ ಕಾರಣವಿಲ್ಲದೆ ಮತ್ತು ಕಾನೂನುಬಾಹಿರವಾಗಿ ಅಲ್ಲೇ ನಡೆಸಿ ಮಾರಣಾಂತಿಕವಾಗಿ ಗಾಯಗೊಳಿಸಿ ಅಮಾನೀಯವಾಗಿ ನಡೆಸಿ ಕೊಂಡಿದ್ದಾರೆ. ಚಿಕ್ಕಮಗಳೂರು ಪೊಲೀಸರ ಈ ವರ್ತನೆಯನ್ನ ನಮ್ಮ ವಕೀಲರ ಸಂಘ ಖಂಡಿಸುತ್ತದೆ.
ಪೋಲಿಸನವರ ಅಮಾನವೀಯ ಕೃತ್ಯ ಸಾಮಾನ್ಯ ಜನರ ಜೀವ ಮತ್ತು ಜೀವದ ಮೇಲೆ ನಂಬಿಕೆ ಇಲ್ಲದಂತಾಗಿದೆ. ಕಾನೂನು ಪಾಲಿಸುವ ವಕೀಲರ ಮೇಲೆ ಅಮಾನೀಯವಾಗಿ ನಡೆದುಕೊಂಡಿರುವ ಪೊಲೀಸನವರ ಕ್ರಮವನ್ನು ಖಂಡಿಸುತ್ತಾ ಹಲ್ಲೆ ಮಾಡಿದ ಪೊಲೀಸನವರನ್ನು ಕರ್ತವ್ಯದಿಂದ ವಜಗೊಳಿಸಿ ಅವರಿಗೆ ಶಿಕ್ಷೆ ವಿಧಿಸಬೇಕು ಎಂದು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಾಲೂಕು ವಕೀಲರ ಸಂಘದ ಅಧ್ಯಕ್ಷರು ಉಪಾಧ್ಯಕ್ಷರು ಪದಾಧಿಕಾರಿಗಳು ಹಾಗೂ ವಕೀಲರು ಇದ್ದರು.