ದಾವಣಗೆರೆಯ ರಾಮಕೃಷ್ಣ ಹೆಗಡೆ ನಗರ ತೆರವು :ನಾಳೆ ಸಂಜೆವರೆಗೂ 144 ಸೆಕ್ಷನ್ ಜಾರಿ..!

1 Min Read

ದಾವಣಗೆರೆ: ರಿಂಗ್ ರೋಡ್ ರಸ್ತೆಯಲ್ಲಿ‌ಕಾಮಗಾರಿ ನಡೆಯುತ್ತಿರುವ ಕಾರಣ ನಾಳೆ‌ ಸಂಜೆ ತನಕ 144 ಸೆಕ್ಷನ್ ಜಾರಿ ಮಾಡಲಾಗಿದೆ. ದಾವಣಗೆರೆ ನಗರದ ಮಾಗಾನಹಳ್ಳಿ ರಸ್ತೆಯಲ್ಲಿರುವ ರಾಮಕೃಷ್ಣ ಹೆಗಡೆ ನಗರ ತೆರವು ಕಾರ್ಯಾಚರಣೆ ಆರಂಭವಾಗಿದೆ. ಹೀಗಾಗಿ ನಾಳೆ ಸಂಜೆವರೆಗೂ 144 ಎಸಕ್ಷನ್ ಜಾರಿ ಮಾಡಲಾಗಿದೆ.

ಈ ಸಂಬಂಧ ದಾವಣಗೆರೆ ಉಪವಿಭಾಗಾಧಿಕಾರಿ ದುರ್ಗಾಶ್ರೀ ಆದೇಶ ಹೊರಡಿಸಿದ್ದಾರೆ. ರಾಮಕೃಷ್ಣ ಹೆಗಡೆ ನಗರದಲ್ಲಿ ಕೆಲವು ಮನೆಗಳನ್ನು ತೆರವು ಮಾಡಲಾಗುತ್ತದೆ. ಪೊಲೀಸರ ಸಮ್ಮುಖದಲ್ಲಿ ಈ ಕಾರ್ಯಾಚರಣೆ ನಡೆಸಲಾಗುತ್ತಿದೆ. ಜೆಸಿಬಿ ಮೂಲಕ ಅನೇಕ ಅಲ್ಪಸಂಖ್ಯಾತರ ಮನೆಗಳ ತೆರವು ಕಾರ್ಯಾಚತಣೆ ನಡೆದಿದೆ. ಸುಮಾರು 419ಕ್ಕೂ ಹೆಚ್ಚು ಮನೆಗಳನ್ನು ತೆರವು ಮಾಡಲು ಪ್ಲ್ಯಾನ್ ಮಾಡಲಾಗಿದೆ. ಜೊತೆಗೆ ಕೆಲವರಿಗೆ ಬೇರೆ ಕಡೆ ವಾಸಿಸಲು ಹಕ್ಕು ಪತ್ರ ವಿತರಣೆ ಮಾಡಲಾಗುತ್ತಿದೆ.

ಮನೆಗಳ ತೆರವಿಗೆ ಹಕ್ಕು ಪತ್ರ ಸಿಗದವರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಹೀಗಾಗಿ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಮನೆಯಲ್ಲಿರುವ ವಸ್ತುಗಳನ್ನು ತೆಗೆಯದೆ ಬಿಡದೆ ಜೆಸಿಬಿಯಿಂದ ಏಕಾಏಕಿ ಮನೆಗಳನ್ನು ತೆರವು ಮಾಡಿರುವುದಕ್ಕೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಥಳದಲ್ಲಿಯೇ ಪಾಲಿಕೆ ಆಯುಕ್ತೆ ರೇಣುಕಾ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ನೀವೂ ಪೊಲೀಸ್, ಜೆಸಿಬಿ ತಂದರೂ ನಾವೂ ಹೆದರುವುದಿಲ್ಲ. ನೀವೂ ಹಠ ಸಾಧಿಸಿ ಏನು ಸಾಧನೆ ಮಾಡುತ್ತೀರಿ ಎಂದು ಸ್ಥಳೀಯರು ಪ್ರಶ್ನೆ ಮಾಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *