ಹಾಸನ: ಲೋಕಸಭಾ ಚುನಾವಣೆಗೆ ರಾಜಕೀಯ ರಂಗ ರಂಗೇರುತ್ತಿದೆ. ಬಿಜೆಪಿ ಮತ್ತು ಜೆಡಿಎಸ್ ಮೈತ್ರಿ ಮಾಡಿಕೊಂಡು ಮುಂದುವರೆಯುತ್ತಿದೆ. ಇದು ಕೆಲವೊಂದು ಕ್ಷೇತ್ರದಲ್ಲಿ ಮನಸ್ತಾಪಕ್ಕೂ ಕಾರಣವಾಗುತ್ತಿದೆ. ಯಾಕಂದ್ರೆ ಎಷ್ಟೋ ಕ್ಷೇತ್ರಗಳಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಗೇನೆ ನೆಕ್ ಟು ನೆಕ್ ಫೈಟ್ ಇದೆ. ಹಾಸದ ಕ್ಷೇತ್ರದಲ್ಲೂ ಇದು ಹೊರತಾಗಿಲ್ಲ.
ಬಿಜೆಪಿಯ ಪ್ರೀತಂ ಗೌಡ ಹಾಗೂ ಜೆಡಿಎಸ್ ರೇವಣ್ಣ ಅವರ ನಡುವಿನ ಫೈಟ್ ಯಾವಾಗಲೂ ಕಾಣುತ್ತದೆ. ಈಗ ಮೈತ್ರಿ ಮಾಡಿಕೊಂಡು, ಹಾಸನ ಕ್ಷೇತ್ರವನ್ನು ಜೆಡಿಎಸ್ ಗೆ ಬಿಟ್ಟುಕೊಟ್ಟರೆ ಬಿಜೆಪಿ ನಾಯಕರು ಅಸಮಾಧಾನಗೊಳ್ಳಲಿದ್ದಾರೆ. ಹೀಗಾಗಿ ಕ್ಷೇತ್ರದ ಜೆಡಿಎಸ್ ನಾಯಕರು ಸಲಹೆಯೊಂದನ್ನು ನೀಡಿದ್ದು, ದೊಡ್ಡಗೌಡ್ರೇ ಸ್ಪರ್ಧೆ ಮಾಡಿದರೆ ಉತ್ತಮ ಎನ್ನುತ್ತಿದ್ದಾರೆ. ಪ್ರಜ್ವಲ್ ರೇವಣ್ಣ ಅವರಿಗೆ ಹಾಸನ ಕ್ಷೇತ್ರ ಗೆಲುವು ತಂದುಕೊಡುವ ಕ್ಷೇತ್ರವಾಗಿದೆ. ಈಗ ದೇವೇಗೌಡ್ರು ನಿಂತರೆ ಬಿಜೆಪಿಯ ಪ್ರೀತಂ ಗೌಡ ಹಾಗೂ ಸಿಮೆಂಟ್ ಮಂಜು ವಿರೋಧ ವ್ಯಕ್ತಪಡಿಸುವ ಸಾಧ್ಯತೆಗಳು ಕಡಿಮೆ ಇದೆ ಎನ್ನಲಾಗುತ್ತಿದೆ. ದೇವೇಗೌಡರು ಹಿರಿಯರು ಆಗಿರುವ ಕಾರಣ ವಿರೋಧ ಕಡಿಮೆ.
ಆದರೆ ಹಾಸನ ಕ್ಷೇತ್ರವನ್ನು ದೇವೇಗೌಡ ಅವರು ತೆಗೆದುಕೊಂಡರೆ ಪ್ರಜ್ವಲ್ ರೇವಣ್ಣ ಅವರ ಸ್ಪರ್ಧೆ ಎಲ್ಲಿಂದ ಎಂಬ ಪ್ರಶ್ನೆಗಳು ಶುರುವಾಗುತ್ತವೆ. ದೇವೇಗೌಡ ಅವರು ಮಕ್ಕಳು ಹಾಗೂ ಮೊಮ್ಮಕ್ಕಳ ರಾಜಕೀಯ ಭವಿಷ್ಯಕ್ಕಾಗಿಯೇ ಸಾಕಷ್ಟು ಕಷ್ಟಪಡುತ್ತಾರೆ. ಅವರ ಗೆಲುವಿಗಾಗಿಯೇ ಸಾಕಷ್ಟು ಸ್ಟಾಟರ್ಜಿಗಳನ್ನು ಮಾಡುತ್ತಾರೆ. ಈಗ ಪ್ರಜ್ವಲ್ ರೇವಣ್ಣ ಅವರ ಕ್ಷೇತ್ರವನ್ನು ಕಿತ್ತುಕೊಳ್ಳುವುದು ಬಹಳ ಕಡಿಮೆ ಎಂದೇ ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ದೊಡ್ಡಗೌಡ್ರು ಯಾವ ನಿರ್ಧಾರ ಮಾಡಲಿದ್ದಾರೆ ಎಂಬುದನ್ನು ನೋಡಬೇಕಿದೆ.