Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಧ್ಯಪ್ರದೇಶ ಎಕ್ಸಿಟ್ ಪೋಲ್ 2023 : ಮತದಾರರ ಒಲವು ಯಾರ ಪರ ?

Facebook
Twitter
Telegram
WhatsApp

ಸುದ್ದಿಒನ್, ಭೋಪಾಲ್: ದೇಶದ ಐದು ರಾಜ್ಯಗಳಲ್ಲಿ ಚುನಾವಣೆ ನಡೆದಿದೆ. ಈ ತಿಂಗಳು (ನವೆಂಬರ್‌ನಲ್ಲಿ) ವಿವಿಧ ಹಂತಗಳಲ್ಲಿ ಮತದಾನ ಮುಗಿದಿದೆ. ಎಲ್ಲ ರಾಜ್ಯಗಳ ಮತದಾನದ ನಂತರ ಯಾವ ರಾಜ್ಯದಲ್ಲಿ ಯಾವ ಪಕ್ಷ ಗೆಲುವು ಸಾಧಿಸಲಿದೆ ಎಂಬ ಕುತೂಹಲ ಮೂಡಿದೆ. 

ಈ ನಿಟ್ಟಿನಲ್ಲಿ ಎಲ್ಲರ ಕಣ್ಣುಗಳು ಎಕ್ಸಿಟ್ ಪೋಲ್‌ಗಳತ್ತ ನೆಟ್ಟಿದೆ. ಚುನಾವಣಾ ಫಲಿತಾಂಶಗಳನ್ನು ಊಹಿಸಲು ಸಮೀಕ್ಷೆ ಏಜೆನ್ಸಿಗಳು ಎಕ್ಸಿಟ್ ಪೋಲ್‌ಗಳನ್ನು ನಡೆಸುತ್ತವೆ.

ಆದರೆ ಮಧ್ಯಪ್ರದೇಶದಲ್ಲಿ ನವೆಂಬರ್ 17 ರಂದು ಒಂದೇ ಹಂತದಲ್ಲಿ 230 ವಿಧಾನಸಭಾ ಸ್ಥಾನಗಳಿಗೆ ಮತದಾನ ನಡೆದಿತ್ತು. ಸದ್ಯ ಮಧ್ಯಪ್ರದೇಶದಲ್ಲಿ ಶಿವರಾಜ್ ಸಿಂಗ್ ಚೌಹಾಣ್ ನೇತೃತ್ವದಲ್ಲಿ ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿಗೆ ಕಾಂಗ್ರೆಸ್ ಪ್ರಮುಖ ಪ್ರತಿಸ್ಪರ್ಧಿ. ಇವುಗಳ ಜೊತೆಗೆ ಆಮ್ ಆದ್ಮಿ ಪಕ್ಷ (ಎಎಪಿ), ಸಮಾಜವಾದಿ ಪಕ್ಷ (ಎಸ್‌ಪಿ), ಬಹುಜನ ಸಮಾಜ ಪಕ್ಷ (ಬಿಎಸ್‌ಪಿ) ಮತ್ತು ಗೊಂಡ್ವಾನಾ ಗಂತಂತ್ರ ಪಕ್ಷ (ಜಿಜಿಪಿ) ಸ್ಪರ್ಧೆಯಲ್ಲಿವೆ.

ಮಧ್ಯಪ್ರದೇಶ ಚುನಾವಣೆ ಬಗ್ಗೆ ಎಕ್ಸಿಟ್ ಪೋಲ್‌ಗಳು ಏನು ಹೇಳುತ್ತಿವೆ ?
ಚುನಾವಣೋತ್ತರ ಸಮೀಕ್ಷೆಯಿಂದ ನಿಖರವಾದ ಫಲಿತಾಂಶವಲ್ಲದೇ ಇದ್ದರೂ  ಅಂದಾಜು ಉದ್ದೇಶಗಳಿಗಾಗಿ ಮಾತ್ರ ನಿರ್ವಹಿಸಲಾಗುತ್ತದೆ. ಏಕೆಂದರೆ ನಿಜವಾದ ಅಂಕಿಅಂಶಗಳು ಅಂದಾಜು ಮಾಡಿದ ಅಂಕಿಗಳಿಗಿಂತ ತುಂಬಾ ಭಿನ್ನವಾಗಿರಬಹುದು.
ಸಮೀಕ್ಷೆ ಏಜೆನ್ಸಿ ಕೇಳಿದಾಗ ಮತದಾರನು ಮತ ಹಾಕಿದ ಅಭ್ಯರ್ಥಿಯ ಹೆಸರನ್ನು ಬಹಿರಂಗಪಡಿಸದಿರಬಹುದು. ಬೇರೆ ಹೆಸರನ್ನು ನೀಡಬಹುದು. ವಿವಿಧ ಏಜೆನ್ಸಿಗಳು ವಿಭಿನ್ನ ಉತ್ತರಗಳನ್ನು ನೀಡಬಹುದು.

ಒಟ್ಟು ಸ್ಥಾನಗಳು -230

ಪೀಪಲ್ಸ್ ಪಲ್ಸ್ ಸಮೀಕ್ಷೆ
ಕಾಂಗ್ರೆಸ್- 117 ರಿಂದ 139
ಬಿಜೆಪಿ -91 ರಿಂದ 113
ಇತರೆ – 0 ರಿಂದ 8

ನ್ಯೂಸ್ 18 ಸಮೀಕ್ಷೆ
ಬಿಜೆಪಿ  -112
ಕಾಂಗ್ರೆಸ್ – 113
ಇತರೆ – 5

CNN ಸಮೀಕ್ಷೆ
ಬಿಜೆಪಿ-116
ಕಾಂಗ್ರೆಸ್-111
ಇತರೆ-3

ಜನ್ ಕಿ ಬಾತ್ ಸಮೀಕ್ಷೆ
ಬಿಜೆಪಿ – 100-123
ಕಾಂಗ್ರೆಸ್ – 102-125
ಇತರೆ- 05

ರಿಪಬ್ಲಿಕ್ ಟಿವಿ-ಮ್ಯಾಟ್ರಿಜ್
ಬಿಜೆಪಿ- 118-130
ಕಾಂಗ್ರೆಸ್-  97-107
ಇತರೆ -0-2

ಪೋಲ್ ಸ್ಟಾರ್ಸ್
ಬಿಜೆಪಿ – 106-116
ಕಾಂಗ್ರೆಸ್ – 111-121
ಇತರೆ – 0-6

ದೈನಿಕ್ ಭಾಸ್ಕರ್
ಬಿಜೆಪಿ- 95-115
ಕಾಂಗ್ರೆಸ್ -105-120

ನ್ಯೂಸ್ 24-ಟುಡೇಸ್ ಚಾಣಕ್ಯ
ಬಿಜೆಪಿ -151
ಕಾಂಗ್ರೆಸ್ -74

Facebook
Twitter
Telegram
WhatsApp
suddionenews

suddionenews

Leave a Comment

Top Stories

ಅಶ್ವಿನಿ ಪುನೀತ್ ರಾಜ್‍ಕುಮಾರ್ ನಿಂದಿಸಿದ ಕಿಡಿಗೇಡಿಗಳು ಈಗ ಗಪ್ ಚಿಪ್..!

ಆರ್ಸಿಬಿ ಆಟಗಾರರು ಆರಂಭದಲ್ಲಿ ಬ್ಯಾಕ್ ಟು ಬ್ಯಾಕ್ ಸೋಲುತ್ತಾ ಬಂದಿತ್ತು. ಇದು ಅಭಿಮಾನಿಗಳಿಗೆ ಸಹಜವಾಗಿಯೇ ಬೇಸರವಾಗಿತ್ತು. ಆದರೆ ಈ ಸೋಲು-ನೋವಿನ ನಡುವೆ ಯಾರೋ ಕಿಡಿಗೇಡಿಗಳು ಅಶ್ವಿನಿ ಪುನೀತ್ ರಾಜ್‍ಕುಮಾರ್ ಬಗ್ಗೆ ಕೆಟ್ಟದಾಗಿ ಮಾತನಾಡಿದ್ದರು. ಕೆಟ್ಟ

ಚಿತ್ರದುರ್ಗ ಜಿಲ್ಲೆಯಲ್ಲಿ ಕಳೆದ 24 ಗಂಟೆಯಲ್ಲಿ ಎಲ್ಲೆಲ್ಲಿ ಮಳೆಯಾಗಿದೆ ? ಇಲ್ಲಿದೆ ಮಾಹಿತಿ…!

  ಚಿತ್ರದುರ್ಗ. ಮೇ.19 : ಜಿಲ್ಲೆಯಾದ್ಯಂತ ಕೃತಿಕಾ ಮಳೆ ಸುರಿಯುತ್ತಿದ್ದು, ಜಿಲ್ಲೆಯ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಶನಿವಾರ ಸುರಿದ ಮಳೆ ವಿವರದನ್ವಯ ಚಿತ್ರದುರ್ಗ -1ರಲ್ಲಿ 24.0, ಮಿ.ಮೀ ಚಿತ್ರದುರ್ಗ -2ರಲ್ಲಿ 33.7, ಭರಮಸಾಗರ

ಫೈನಲಿ ಪ್ಲೇ ಆಫ್ ಗೆ ಗ್ರ್ಯಾಂಡ್ ಎಂಟ್ರಿಯಾಯ್ತು RCB

ಬೆಂಗಳೂರು: ನಿನ್ನೆ ಸಂಜೆಯಿಂದ ಬೆಂಗಳೂರಿನಲ್ಲಿ ಬಾರೀ ಮಳೆ. ಆರ್ಸಿಬಿ ಪಂದ್ಯದ ವೇಳೆ ಮಳೆಯಾಟ ಜೋರಾಗಿತ್ತು. ಒಮ್ಮೊಮ್ಮೆ ಮಳೆ ಬಂದು ಬಂದು ನಿಲ್ಲುತ್ತಿತ್ತು. ಇದರಿಂದ ಆರ್ಸಿಬಿ ಅಭಿಮಾನಿಗಳಿಗೆ ಬೇಸರವೂ ಆಗಿತ್ತು. ಆದ್ರೆ ಆರ್ಸಿಬಿ ಕೊಟ್ಟ ಟಾರ್ಗೆಟ್‌

error: Content is protected !!