ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ ನ. 28 : ಹೆಚ್. ಕಾಂತರಾಜ ಆಯೋಗದ ವರದಿಯಿಂದ ಶೋಷಣೆಗೆ ಒಳಗಾಗಿರುವ ಹಿಂದುಳಿದ ಜಾತಿ- ವರ್ಗಗಳಿಗೆ ನಿಜವಾಗಿಯೂ ಸಾಮಾಜಿಕ ನ್ಯಾಯ ದೊರೆಯುವುದರಲ್ಲಿ ಯಾವುದೇ ಅನುಮಾನವಿಲ್ಲ. ಆದ್ದರಿಂದ ಹಿಂದುಳಿದ ಮತ್ತು ಅತಿ ಹಿಂದುಳಿದ ಜಾತಿಗಳಿಗೆ ಸಂಜೀವಿನಿಯಾಗಿರುವ ಹೆಚ್. ಕಾಂತರಾಜ ಆಯೋಗದ ವರದಿಯನ್ನು ಸಾಮಾಜಿಕ ನ್ಯಾಯಕ್ಕೆ ಬದ್ಧರಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಜಯಪ್ರಕಾಶ ಹೆಗಡೆಯವರ ಮೇಲೆ ಒತ್ತಡವನ್ನೇರಿ ವರದಿಯನ್ನು ಶೀಘ್ರವೇ ಸ್ವೀಕರಿಸಿ ಜಾರಿಗೊಳಿಸಬೇಕೆಂದು ಸರ್ಕಾರವನ್ನು ಶಿವಮೊಗ್ಗ ಜಿಲ್ಲಾ ಹಿಂದುಳಿದ ಮತ್ತು ಅತಿ ಹಿಂದುಳಿದ ಜನಜಾಗೃತಿ ವೇದಿಕೆ ಆಗ್ರಹಿಸಿದೆ.
ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗಗಳ ಜನ ಜಾಗೃತ ವೇದಿಕೆ ಚಿತ್ರದುರ್ಗದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆ ಅಧ್ಯಕ್ಷರಾದ ಆರ್ ಮೋಹನ್ ಕಾಂತರಾಜುರವರ ವರದಿ ಶೈಕ್ಷಣಿಕ ಮತ್ತು ಸಾಮಾಜಿಕ ಸಮೀಕ್ಷೆ ಎಂದಿದರೂ ಸದರಿ ಸಮೀಕ್ಷೆಯಲ್ಲಿ ಜಾತಿ ವಿವರಗಳು ಸಾಮಾಜಿಕ, ಶೈಕ್ಷಣಿಕ ಹಾಗೂ ಆರ್ಥಿಕ ಸ್ಥಿತಿಗತಿಗಳನ್ನು ಕಲೆ ಹಾಕಲಾಗಿದೆ ಎಂದು ನಂಬಲಾರ್ಹ ಮೂಲಗಳಿಂದ ತಿಳಿದುಬಂದಿದೆ. ಶೋಷಣೆಗೆ ಒ¼ಪಟ್ಟ ಹಿಂದುಳಿದ ಜಾತಿಗಳಿಗೆ ಮೀಸಲಾತಿ ನೀಡಬೇಕೆಂದು ಹಿಂದುಳಿದ ಆಯೋಗ ರಚಿಸಿ ಹಿಂದುಳಿದ ಜಾತಿಗಳ ಗುರುತಿಸಿ ಸೂಕ್ತ ಮೀಸಲಾತಿ ಜಾರಿ ಮಾಡಬೇಕೆಂದು ಡಾ. ಅಂಬೇಡ್ಕರ್ ಸಂವಿಧಾನದ ಪರಿಚ್ಛೇದದ 15 (4) 16 (4)ರ ಹಾಗೂ ಪರಿಚ್ಛೇದದ 340ರಲ್ಲಿ ಸ್ಪಷ ್ಟವಾಗಿ ಉಲ್ಲೇಖಿಸಿರುವುದನ್ನು ನೋಡಿದರೆ ಹಿಂದುಳಿದ ಜಾತಿ, ವರ್ಗದªರಿಗೆ ನೀಡುತ್ತಿರುವ ಮೀಸಲಾತಿ ಭಿಕ್ಷೆಯಲ್ಲ ಅದು ಅವರ ಸಂವಿಧಾನ ಬದ್ಧ ಹಕ್ಕು ಎನ್ನುವುದು ಸ್ಪಷ್ಟವಾಗುತ್ತದೆ ಎಂದಿದ್ಧಾರೆ.
ಹಿಂದುಳಿದ ಜಾತಿಗಳ ಮೀಸಲಾತಿಗೆ ಜಾತಿಗಣನೆ, ಸಾಮಾಜಿಕ ಶೈಕ್ಷಣಿಕ ಹಾಗೂ ಆರ್ಥಿಕ ಸಮೀಕ್ಷೆ ಅತ್ಯಂತ ಅವಶ್ಯಕ ಎಂಬುದು ಸ್ಪಷ್ಟವಾಗುತ್ತದೆ. ನಂತರ ಈ ವಿಚಾರದಲ್ಲಿ ಎಚ್ಚೆತ್ತುಕೊಂಡು ಕರ್ನಾಟಕ ಸರ್ಕಾರ ಹಿಂದುಳಿದ ಜಾತಿಗಳ ಮೀಸಲಾತಿ ಸವಲತ್ತುಗಳಿಗೆ ಅಂಕಿ- ಅಂಶಗಳು ಅವಶ್ಯಕ ಎನ್ನುವ ನಿಟಿನಲ್ಲಿ ಎಲ್.ಜಿ. ಹಾವನೂರು, ಟಿ. ವೆಂಕಟಸ್ವಾಮಿ, ಚಿನ್ನಪ್ಪ ರೆಡ್ಡಿ ಆಯೋಗದ ವರದಿಗಳುಸಿದ್ಧಗೊಂಡವು. ಈ ದಾರಿಯಲ್ಲಿ ಸಾಗಿದ ಮತ್ತೊಂದು ಆಯೋಗದ ವರದಿ ಶ್ರೀಕಾಂತರಾಜ ಆಯೋಗದ ವರದಿ. ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ 2014ರಂದು ಹೆಚ್. ಕಾಂತರಾಜ ನೇತೃತ್ವದಲ್ಲಿ ರಾಜ್ಯಹಿಂದುಳಿದ ವರ್ಗಗಳ ಶಾಶ್ವತ ಆಯೋಗ ನೇಮಕಗೂಂಡಿತು.
ಈ ವರದಿಯನ್ನು ಈಶ್ವರಪ್ಪ ರವರು ವರದಿಯನ್ನು ಬಿಸಾಕಿ ಎಂದರೆ ಬಿಜೆಪಿ ರಾಜ್ಯಾಧ್ಯಕ್ಷರಾದ ವಿಜಯೇಂದ್ರ ರವರು ಅರೆ ಬೆಂದ ವರದಿ ಎಂದು ಟೀಕಿಸಿದ್ದಾರೆ ಇದನ್ನು ಖಂಡಿಸಲಾಯಿತು.
ಜೈನ ಸಮುದಾಯದ ಮುಖಂಡ, ಕೆಪಿಸಿಸಿ ರಾಜ್ಯ ಉಪ ವಕ್ತಾರ ದರ್ಶನ ಬಳ್ಳೇಶ್ವರ ಮಾತನಾಡಿ, ಹಿಂದುಳಿದ ವರ್ಗಗಳ ಜಾತಿ, ರಾಜಕೀಯ ಅಧಿಕಾರ, ಸಾಮಾಜಿಕ, ಶೈಕ್ಷಣಿಕ, ಆರ್ಥಿಕ ಇತ್ಯಾದಿ ಮಾಹಿತಿಗಳನ್ನು ಸಂಗ್ರಹಿಸಿ ವೈಜಾನಿಕವಾಗಿ ಅಧ್ಯಯನ ಮಾಡಿ ಹಿಂದುಳಿದ ವರ್ಗಗಳ ಸಾಮಾಜಿಕ, ಆರ್ಥಿಕ ಇತ್ಯಾದಿ ಮಾಹಿತಿ ಗಳನ್ನು ಸಂಗ್ರಹಿಸಿ ವೈಜಾನಿಕವಾಗಿ ಅಧ್ಯಯನ ಮಾಡಿ ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯನ್ನು 2018ರಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರಕ್ಕೆ ವರದಿ ಸಲ್ಲಿಸುವ ಸಂದರ್ಭದಲ್ಲಿ ರಾಜಕೀಯ ಪ್ರಕ್ಷುಬ್ಧತೆ ಮತ್ತು ವಿಧಾನಸಭೆ ಚುನಾವಣೆಯಿಂದಾಗಿ ವರದಿಯು ಸರ್ಕಾರಕ್ಕೆ ಸಲ್ಲಿಕೆ ಯಾಗದೆ ಹಾಗೇ ಉಳಿಯಿತು. ಈ ವರದಿ ತಯಾರಿಸಲು ಸರ್ಕಾರಕ್ಕೆ ಸುಮಾರು 158.47 ಕೋಟಿ ರೂ.ಗಳು ವೆಚ್ಚ ವಾಗಿದೆ ಎಂದು ಹೇಳಲಾಗಿದೆ. ನಂತರ ನಡೆದ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿ ಅಧಿಕಾರಕ್ಕೆ ಬಂದ ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಬಸವರಾಜಬೊಮ್ಮಾಯಿಯವರು ಕಾಂತರಾಜ ಆಯೋಗದ ವರದಿಯ ಬಗ್ಗೆಯಾವುದೇ ಚಕಾರವೆತ್ತದೆ ಜಾಣ ಮೌನ ಪ್ರದರ್ಶಿಸಿ ವರದಿಯನ್ನುಹಾಗೆಯೇ ಶೈತ್ಯಾಗಾರದಲ್ಲಿ ಉಳಿಯುವಂತೆ ಮಾಡಿರುತ್ತಾರೆ ಎಂದು ದೂರಿದರು.
ಇದು ಹಿಂದುಳಿದ ಹಾಗೂ ಅತಿ ಹಿಂದುಳಿದಜಾತಿಗಳಿಗೆ ಮಾಡಿದ ಅಪಮಾನ ಹಿಂದುಳಿದ ಜಾತಿಗಳ ಒಟ್ಟು ಮತ ಪಡೆದು ಹಿಂದುಳಿದ ಜಾತಿಗಳ ಅಭಿವೃದ್ಧಿಗೆ ಅಡ್ಡಗಾಲು ಹಾಕುವ ಇಂತಹ ಕೃತ್ಯಗಳು ಈ ಜಾತಿ- ವರ್ಗಗಳಿಗೆ ಮಾಡಿದ ಮಹಾ ದ್ರೋಹ ಮತ್ತು ಅನ್ಯಾಯ ಎಂದು ಹೇಳಬೇಕಾಗುತ್ತದೆ. ಹೆಚ್. ಕಾಂತರಾಜ ಅವರ ನಂತರದಲ್ಲಿ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಅಂದಿನ ಮುಖ್ಯಮಂತ್ರಿಯವರಾದ ಯಡಿಯೂರಪ್ಪನವರು ಹಾಗೂ ಮಾಜಿ ಸಚಿವರಾದ ಕೆ.ಎಸ್. ಈಶ್ವರಪ್ಪ ಶಿಫಾರಸಿನ ಮೇರೆಗೆ ನೇಮಕಗೊಂಡ ಜಯಪ್ರಕಾಶಹೆಗ್ಡೆ ಸುಮಾರು 3 ವರ್ಷಗಳ ಕಾಲ ಮೌನದಿಂದ ಇದ್ದು ಅವರ ಅಧಿಕಾರ ಇದೇ ನವೆಂಬರ್ 2023ಕ್ಕೆ ಮುಕ್ತಾಯಗೊಳುತ್ತಿದು ವರದಿ ಜಾರಿಗೆ ಒತ್ತಡ ಹೆಚಾಗುತ್ತಿದ್ದಂತೆ ದಿಢೀರನೆ ಎಚ್ಚೆತ್ತುಕೊಂಡಿರುವ ಜಯಪ್ರಕಾಶ ಹೆಗ್ಡೆ ಅªರು ನವೆಂಬರ್ 2023ರ ಅಂತ್ಯದೊಳಗೆ ಸಮೀಕ್ಷೆಯ ವರದಿಯನ್ನು ಸರ್ಕಾರಕ್ಕೆ ಸಲ್ಲಿಸುವುದಾಗಿ ಮಾಧ್ಯಮಗಳಿಗೆ ಹೇಳಿಕೆ ನೀಡಿರುತ್ತಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ವರದಿಯ ಮಹತ್ವವನ್ನು ಮನಗಂಡು ಆಯೋಗದ ಅದ್ಯsಕ್ಷರಿಗೆ ಮತ್ತೊಂದು ತಿಂಗಳ ಕಾಲಾವಕಾಶ ನೀಡಿ ಹಿಂದುಳಿದ ಮತ್ತು ಅತಿ ಹಿಂದುಳಿದ ಸಮಾಜದ ಹಿತಾಸಕ್ತಿ ತೋರ್ಪಡಿಸಿರುತ್ತಾರೆ. ರಾಜ್ಯ ಹಾಗೂ ರಾಷ್ಟ್ರದಲ್ಲಿ ಹಿಂದುಳಿದ ಹಾಗೂ ಅತಿ ಹಿಂದುಳಿದ ವರ್ಗದವರು ತುಳಿತಕ್ಕೊಳಗಾಗಿದ್ದುಕಷ್ಟಕರ ಜೀವನ ನಡೆಸುತ್ತಿದ್ದಾರೆ. ಇವರ ಬದುಕನ್ನು ಬದಲಾಯಿಸಿ ಸಾಮಾಜಿಕಸ್ಥಾನ ಮಾನ ನೀಡುವ ನಿಟಿನಲ್ಲಿ ಕಾಂತರಾಜ ವರದಿಯ ಅನುಷ್ಠಾನಕ್ಕಾಗಿ ಶಿವಮೊಗ್ಗದಲ್ಲಿ ಸಮಾವೇಶ, ಧರಣಿ ನಡೆಸಲಾಯಿತು.
ಈ ಮಧ್ಯೆವರದಿ ಸಲ್ಲಿಕೆಯ ವಿಳಂಬಕ್ಕೆ ಕೆಲವು ತಾಂತ್ರಿಕ ಅಂಶಗಳನ್ನು ತೇಲಿ ಬಿಡಲಾಗುತ್ತಿದೆ ಇದು ಅತ್ಯಂತ ಖಂಡನಾರ್ಹ. ಒಟ್ಟಾರೆ ವರದಿ ಸಲ್ಲಿಕೆ. ಎಷ್ಟು ವಿಳಂಬವಾಗಬೇಕೋ ಅಷ್ಟು ರಾಜಕೀಯ ತಂತ್ರಗಾರಿPಕೆ ನಡೆಯುತ್ತಿದೆ. ಕರ್ನಾಟಕದಲ್ಲಿ ಕಾಂತರಾಜ ಆಯೋಗದ ವರದಿ ಸಲ್ಲಿಕೆಗೆ ಮತ್ತಷ್ಟು ಒತ್ತಡ ಹೆಚ್ಚಾಗುತ್ತಿದ್ದಂತೆ ಒಂದೆರೆಡು ಬಲಾಢ್ಯ ಜಾತಿಗಳ ಮುಖಂಡರು ವರದಿ ಜಾರಿಯಾಗದಂತೆ ಅನೇಕ ಷಡ್ಯಂತ್ರಗಳನ್ನು ಹೆಣೆಯುತ್ತಿದಾರೆ. ಅವರ ಷಡ್ಯಂತ್ರಗಳಿಗೆ ನಿಜವಾದ ಕಾರಣವೇನೆಂದರೆ ಸೌಲಭ್ಯ ವಂಚಿತ ಸಮುದಾಯಗಳಿಗೆ ಕಾಂತರಾಜ ವರದಿಯಿಂದ ಜನಸಂಖ್ಯೆಗೆ ಅನುಗುಣವಾಗಿ ರಾಜಕೀಯ, ಆರ್ಥಿಕ ಶೈಕ್ಷಣಿಕ, ಉದ್ಯೋಗ ಕ್ಷೇತ್ರಗಳಲ್ಲಿ ಪ್ರಾತಿನಿಧ್ಯ ದೊರೆಯುತದೆ ಎಂಬ ಅಸೂಸೆಯೇ ನಿಜವಾದ ಕಾರಣಎಂಬುವುದರಲ್ಲಿ ಅನುಮಾನವಿಲ್ಲ ಎಂದಿದ್ದಾರೆ.
ಗೋಷ್ಟಿಯಲ್ಲಿ ಕುರುಬ ಸಮಾಜದ ಯುವ ಮುಖಂಡ ಮಂಜುನಾಥ , ಕಾಂಗ್ರೆಸ್ ಒಬಿಸಿ ವಿಭಾಗದ ಅಧ್ಯಕ್ಷರು ಮತ್ತು ಸವಿತ ಸಮಾಜದ ಎನ್ ಡಿ ಕುಮಾರ್ , ಪ್ರಸನ್ನ, ಕುಂಬಾರ ಸಮಾಜದ ಕುಮಾರ್ ,ಮರಾಠ ಸಮಾಜದ ಗಣೇಶ್, ಬಲಿಜ ಸಮಾಜದ ಹುತ್ತೇಶ್ , ಉಪಸ್ಥಿತರಿದ್ದರು.