ಮಾಯಾವತಿ ಮುಗಿಸಿದ ಬಿಜೆಪಿಗೆ ಹೆಚ್ಡಿಕೆ ಯಾವ ಲೆಕ್ಕ : ಕಾಂಗ್ರೆಸ್ ಶಾಸಕ ಬಾಲಕೃಷ್ಣ

suddionenews
1 Min Read

ರಾಮನಗರ: ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಮಾಡಿಕೊಂಡು ಚುನಾವಣೆ ಎದುರಿಸಲು ಸಜ್ಜಾಗಿವೆ. ಬಿಜೆಪಿ ಬಗ್ಗೆ ಇದೀಗ ಕಾಂಗ್ರೆಸ್ ಶಾಸಕ ಹೆಚ್ ಸಿ ಬಾಲಕೃಷ್ಣ ಕಿಡಿಕಾರಿದ್ದಾರೆ. ಮಾಯಾವತಿ ಮುಗಿಸಿದ ಬಿಜೆಪಿಗೆ ಹೆಚ್ ಡಿ ಕುಮಾರಸ್ವಾಮಿ ಯಾವ ಲೆಕ್ಕ ಎಂದಿದ್ದಾರೆ.

ಮಾಗಡಿ ತಾಲೂಕಿನ ತೂಬಿನಕೆರೆಯಲ್ಲಿ ಮಾತನಾಡಿದ ಬಾಲಕೃಷ್ಣ ಅವರು, ಬಿಜೆಪಿಯವರು ಒಂಥರಾ ಬ್ರಿಟಿಷರು ಇದ್ದ ಹಾಗೇ. ಯಾರು ಪ್ರಬಲರಾಗಿರುತ್ತಾರೋ ಅವರ ಮಧ್ಯೆ ಗುಂಪು ಕಟ್ಟಿ, ಎತ್ತಿಕಟ್ಟಿ ಒಡೆದಾಳುವಂತೆ ಮಾಡುತ್ತಾರೆ. ಒಡೆದಾಳೋ ನೀತಿಯನ್ನು ಬಿಜೆಪಿ ನಾಯಕರು ಅನುಸರಿಸುತ್ತಿದ್ದಾರೆ. ಉತ್ತರ ಪ್ರದೇಶದ ಬಿಎಸ್ಪಿ ರೀತಿ ಕರ್ನಾಟಕದಲ್ಲಿ ಜೆಡಿಎಸ್ ಪಕ್ಷವನ್ನು ಅವರು ಮಾಡದಿದ್ದರೆ ನಾನು ನನ್ನ ಹೆಸರನ್ನು ಬದಲಾಯಿಸಿಕೊಳ್ಳುತ್ತೇನೆ. ಜೆಡಿಎಸ್ ನಾಯಕರು ಈಗಲೇ ಎಚ್ಚೆತ್ತುಕೊಳ್ಳಬೇಕು. ಇಲ್ಲವಾದರೆ ಅವರ ಅಸ್ತಿತ್ವವನ್ನು ಸಂಪೂರ್ಣವಾಗಿ ಮುಗಿಸುವ ಕೀರ್ತಿ ಬಿಜೆಪಿಯವರಿಗೆ ಸಲ್ಲುತ್ತದೆ ಎಂದಿದ್ದಾರೆ.

ಮಾಯಾವತಿಯೇ ಮುಂದಿನ ಪ್ರಧಾನಿ ಎಂಬಂತೆ ಹೊರಹೊಮ್ಮಿದ್ದರು. ಆದರೆ ಅಂಥವರನ್ನೇ ಉತ್ತರಪ್ರದೇಶದಲ್ಲಿ ಹೆಸರಿಲ್ಲದಂತೆ ಬಿಜೆಪಿ ಮಾಡಿ, ಅಧಿಕಾರ ಮಾಡುತ್ತಿದ್ದಾರೆ. ಇನ್ನೂ ಕರ್ನಾಟಕದ ಕುಮಾರಣ್ಣ ಯಾವ ಲೆಕ್ಕ. ಕುಮಾರಣ್ಣನಿಗೆ ನಾವೇ ಕಾಣುತ್ತೇವೆ. ನಮ್ಮನ್ನು ನೋಡಿದ ತಕ್ಷಣ ಬಿಜೆಪಿಯವರನ್ನ ತಬ್ಬಿಕೊಳ್ಳುತ್ತಾರೆ. ಅನೇಕ ವರ್ಷಗಳಿಂದ ನಾವು ಜಾತ್ಯಾತೀತ ಎಂದು ಹೇಳಿ ಮಾಜಿ ಪ್ರಧಾನಿ ದೇವೇಗೌಡರನ್ನು ಇಳಿವಯಸ್ಸಿನಲ್ಲಿ ಕೋಮುವಾದಿ ಮಾಡಿಬಿಟ್ಟರು ಎಂದು ಶಾಸಕರು ಆರೋಪ ಮಾಡಿದರು.

Share This Article
Leave a Comment

Leave a Reply

Your email address will not be published. Required fields are marked *