Notice: Undefined index: options in /home/nagendra/public_html/content/plugins/elementor-pro/modules/theme-builder/widgets/site-logo.php on line 124

ಮಂಡಿನೋವಿನ ಸಮಸ್ಯೆಗೆ ಈ ಯೋಗಾಸನಗಳನ್ನು ಮಾಡಿ

Facebook
Twitter
Telegram
WhatsApp

ಇತ್ತಿಚಿನ ದಿನಗಳಲ್ಲಿ ಮಂಡಿ‌ನೋವು ಸರ್ವೇ ಸಾಮಾನ್ಯವಾಗಿ ಬಿಟ್ಟಿದೆ. ವಯಸ್ಸಾದವರಲ್ಲಿ ಕಾಣಿಸಿಕೊಳ್ಳುತ್ತಿದ್ದ ಮಂಡಿನೋವು, ಇದೀಗ ಯುವಕರಲ್ಲೂ ಕಾಣಿಸುತ್ತಿದೆ. ಇದು ಸಹಜವಾಗಿಯೇ ಆತಂಕಕ್ಕೆ ಕಾರಣವಾಗಿದೆ. ಆದರೆ ಈ ರೀತಿ ಚಿಕ್ಕ ವಯಸ್ಸಿನಲ್ಲಿಯೇ ಮೂಳೆಗಳ ಸಮಸ್ಯೆ ಕಾಡಿದರೆ ಮುಂದಿನ ದಿನಗಳಲ್ಲಿ ಹೆಚ್ಚಿನ ಸಮಸ್ಯೆ ಉಂಟಾಗುತ್ತದೆ. ಆ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳಲು ಕೆಲವೊಂದು ಯೋಗಾಸನಗಳಿಂದ ಮೂಳೆಗಳ ನೋವಿಗೆ ಪರಿಹಾರ ಸಿಗಲಿದೆ. ಮಂಡಿನೋವಿಗೆ ವಿಟಮಿನ್ ಡಿ ಕೊರತೆ ಕೊರತೆಯು ಕಾರಣ. ಅಷ್ಟೇ ಅಲ್ಲದೆ ಮೂಳೆಗಳ ಸೋಂಕು, ಮಂಡಿಗಳಿಗೆ ಉಂಟಾದ ಗಾಯ, ಬೊಜ್ಜು, ಮೆಟಬಾಲಿಕ್ ಕಾಯಿಲೆಯಿಂದ ಮಂಡಿನೋವು ಕಾಣಿಸಿಕೊಳ್ಳುತ್ತದೆ.

ತಾಡಾಸನ, ತ್ರಿಕೋನಾಸನ, ವೀರಭದ್ರಾಸನ, ವೃಕ್ಷಾಸನ ಮಾಡುವುದರಿಂದ ಮೂಳೆಗಳು ಆರೋಗ್ಯವಾಗಿರುತ್ತವೆ. ತ್ರಿಕೋಸಾನದಿಂದ ನಿಮ್ಮ ಕಾಲುಗಳ ಮಾಂಸ ಖಂಡಗಳನ್ನು ಬಲಪಡಿಸುವ ಯೋಗಾಸನವಾಗಿದೆ. ಮಂಡಿಗಳ ನೋವನ್ನು ಇದು ಬಹಳ ಸುಲಭವಾಗಿ ದೂರ ಮಾಡುತ್ತೆ. ತಾಡಾಸನ ಮಾಡುವುದರಿಂದ ಸಂಪೂರ್ಣ ಕಾಲುಗಳ ಬಲವನ್ನು ಹೆಚ್ಚಿಸುವ ಮತ್ತು ತೊಡೆಗಳ ಭಾಗದಲ್ಲಿ ಮಾಂಸ ಖಂಡಗಳನ್ನು ಸಮರ್ಥಗೊಳಿಸುವ ಯೋಗಾಸನ ಇದಾಗಿದೆ. ದೇಹದ ತೂಕವನ್ನು ಉತ್ತಮವಾಗಿ ನಿರ್ವಹಣೆ ಮಾಡುವುದರ ಜೊತೆಗೆ ಮಂಡಿಗಳ ಭಾಗದಲ್ಲಿ ಸದೃಢತೆಯನ್ನು ಹೆಚ್ಚಿಸುತ್ತದೆ.

ವೃಕ್ಷಾಸನ ಯೋಗಾಸನ ನಿಮ್ಮ ದೇಹವನ್ನು ಸಮತೋಲನ ಗೊಳಿಸುವುದು ಮಾತ್ರವಲ್ಲದೆ ಕಾಲುಗಳನ್ನು ಬಲಪಡಿಸುತ್ತದೆ. ಹೀಗಾಗಿ ಸಾಧ್ಯವಾದಷ್ಟು ನಿಮ್ಮ ಕಾಲುಗಳ ಭಾಗದ ಮಾಂಸ ಖಂಡಗಳು ಸಮತೋಲನವಾಗಿರುವಂತೆ ನೋಡಿಕೊಳ್ಳಿ. ಸೇತುಬಂಧಾಸನ ಯೋಗಾಸನ ನಿಮ್ಮ ತೊಡೆಗಳನ್ನು ಮತ್ತು ಸೊಂಟವನ್ನು ಸದೃಢ ಪಡಿಸುತ್ತದೆ. ಈ ಯೋಗಾಸನ ಮಾಡುವುದರಿಂದ ನಿಮ್ಮ ಮಂಡಿಗಳ ಭಾಗದ ಮಾಂಸ ಖಂಡಗಳು ಬಲಗೊಳ್ಳುತ್ತವೆ ಮತ್ತು ಮಂಡಿಗಳ ನೋವು ದೂರವಾಗುತ್ತದೆ. ನಿಮ್ಮ ದೇಹದ ತೂಕ ವನ್ನು ನಿಯಂತ್ರಣ ಮಾಡಲು ಸಹ ಈ ಯೋಗಾಸನ ನೆರವಾಗುತ್ತದೆ.

ಉತ್ಕಟಾಸನ ಭಂಗಿಯಿಂದ ನಿಮ್ಮ ಮಂಡಿಗಳ ನೋವು ಶೀಘ್ರವೇ ಗುಣವಾಗುತ್ತದೆ. ಮಂಡಿಗಳ ಹಾಗೂ ತೊಡೆಗಳ ಭಾಗದ ಮಾಂಸ ಖಂಡಗಳು ಸದೃಢ ವಾಗುತ್ತವೆ. ಬಾಲಾಸನ ಮಾಡುವುದರಿಂದ ಮಂಡಿಯ ಅಸ್ವಸ್ಥತೆಯನ್ನು ದೂರ ಮಾಡುವಲ್ಲಿ ನೆರವಾಗುತ್ತದೆ. ಇದು ನಿಮ್ಮ ಮಂಡಿಯ ಭಾಗದಲ್ಲಿ ಕಂಡುಬರುವ ನೋವನ್ನು ದೂರ ಮಾಡುವಲ್ಲಿ ನಿಮಗೆ ಸಹಾಯ ಮಾಡುತ್ತದೆ. ಹೀಗಾಗಿ ಮಂಡಿ ನೋವಿಗೆ ಹಲವು ರೀತಿಯ ಯೋಗಗಳು ಸುಲಭ ಪರಿಹಾರ ನೀಡಲಿದೆ.

ಪ್ರಮುಖ ಸೂಚನೆ : ಈ ವಿವರಗಳನ್ನು ತಜ್ಞರು ಮತ್ತು ಅಧ್ಯಯನಗಳ ಪ್ರಕಾರ ಒದಗಿಸಲಾಗಿದೆ. ಈ ಲೇಖನವು ನಿಮ್ಮ ಮಾಹಿತಿಗಾಗಿ ಮಾತ್ರ. ಯಾವುದೇ ಸಣ್ಣ ಆರೋಗ್ಯ ಸಮಸ್ಯೆಗಳಿಗೆ ವೈದ್ಯರನ್ನು ಸಂಪರ್ಕಿಸುವುದು ಉತ್ತಮ.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಕಾಮಾಲೆ (ಜಾಂಡೀಸ್) ರೋಗ ಎಂದರೇನು ? ಇಲ್ಲಿದೆ ಉಪಯುಕ್ತ ಮಾಹಿತಿ….!

ಕಾಮಾಲೆ ಅಥವಾ ಜಾಂಡೀಸ್ ಎನ್ನುವುದು ಹತ್ತು ಹಲವು ರೋಗಗಳಲ್ಲಿ ಕಂಡು ಬರುವ ದೇಹ ಸ್ಥಿತಿಯಾಗಿರುತ್ತದೆ. ಹಲವಾರು ಕಾರಣಗಳಿಂದ ಕಾಮಾಲೆ ರೋಗ ಬರುವ ಸಾಧ್ಯತೆ ಇರುತ್ತದೆ. ಕಾಮಾಲೆ ಎಂಬ ಪದವು ಕಾಮ ಮತ್ತು ಲಾ ಎಂಬ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ

ಈ ರಾಶಿಯವರ ವ್ಯವಹಾರಗಳು ನಷ್ಟವಾಗಲು ಅಕ್ಕಪಕ್ಕದವರ ಕೈಚಳಕವೇ ಕಾರಣ: ಈ ರಾಶಿಯ ಕುಟುಂಬದಲ್ಲಿ ಕಲಹಗಳು ಆಗಲು ದಾಯಾದಿಗಳೇ ಕಾರಣ : ಈ ರಾಶಿಯ ಗಂಡ ಹೆಂಡತಿ ದೂರವಾಗಲು ಹಿತೈಷಿಗಳೇ ಕಾರಣ : ಶನಿವಾರ-ರಾಶಿ ಭವಿಷ್ಯ

ಸಿಇಎನ್ ಪೊಲೀಸರ ದಾಳಿ : ಅಂತರ್ ರಾಜ್ಯ ಗಾಂಜಾ ಪೆಡ್ಲರ್ ಬಂಧನ

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 22 : ಆಂದ್ರಪ್ರದೇಶದ ವಿಶಾಖಪಟ್ಟಣಂ ನಿಂದ ಗಾಂಜಾವನ್ನು ತಂದು ಚಿತ್ರದುರ್ಗ ನಗರಕ್ಕೆ ಬಂದು ಗಾಂಜಾ ಮಾರಾಟ ಮಾಡುತ್ತಿದ್ದ ಡ್ರಗ್ಸ್‌ ಪೆಡ್ಲರ್‌ನನ್ನು ಸಿಇಎನ್ ಠಾಣೆ ಪೊಲೀಸರು ಬಂಧಿಸಿದ್ದಾರೆ. ಬಿಹಾರದ ಹರಿ ಓಂಕುಮಾರ್(24

error: Content is protected !!