ಮೊಳಕಾಲ್ಮೂರು | ನವೆಂಬರ್ 25 ರಂದು ರಾಂಪುರದಲ್ಲಿ ಗಡಿ ಸಾಂಸ್ಕೃತಿಕ ಉತ್ಸವ

1 Min Read

 

ಸುದ್ದಿಒನ್, ಚಿತ್ರದುರ್ಗ, ನವೆಂಬರ್. 24 : ಮೊಳಕಾಲ್ಮೂರು ತಾಲ್ಲೂಕು ರಾಂಪುರ ಗ್ರಾಮದಲ್ಲಿ ನ.25 ರಂದು ಶನಿವಾರ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಮತ್ತು ಕನ್ನಡ ಸಾಹಿತ್ಯ ಪರಿಷತ್ತು ವತಿಯಿಂದ ಗಡಿ ಸಾಂಸ್ಕøತಿಕ ಉತ್ಸವ ಜರುಗಲಿದೆ.

ರಾಂಪುರ ಗ್ರಾಮದಲ್ಲಿ ಶನಿವಾರ 32 ವರ್ಷಗಳ ನಂತರ ಗಡಿ ಉತ್ಸವ ಜರುಗಲಿದೆ. ಬೆಳಗ್ಗೆ 9 ಗಂಟೆಗೆ ಎಸ್‍ಪಿಎಸ್‍ಆರ್ ಸಂಸ್ಥೆಯ ಸ್ಥಳದಿಂದ ಬೃಹತ್ ಮೆರವಣಿಗೆ ಆರಂಭವಾಗಲಿದೆ. ಅಲಂಕೃತ ಬೆಳ್ಳಿ ರಥದಲ್ಲಿ ಭುವನೇಶ್ವರಿ ಯ ಮೆರವಣಿಗೆ ಜರುಗಲಿದೆ.

ಮೆರವಣಿಗೆಯಲ್ಲಿ ಡೊಳ್ಳು, ಕಹಳೆ, ಸೋಬಾನೆ ಪದ,ಕೋಲಾಟ,ಟ್ರಾಷ್ ವಾದ್ಯಗಳು ಸೇರಿದಂತೆ ನಾನಾ ಕಲಾ ತಂಡಗಳು ಭಾಗವಹಿಸಲಿವೆ.

ಮೆರವಣಿಗೆಯು ಎಸ್‍ಪಿಎಸ್ ಆರ್ ಶಾಲೆ,ಗ್ರಾಪಂ ಕಚೇರಿ ಮೂಲಕ ಎಸ್.ಜಿ.ಎಂ. ಶಾಲೆ ತಲುಪಲಿದೆ.  ಎಸ್.ಜಿ.ಎಂ. ವಿದ್ಯಾಪೀಠ ಶಾಲೆಯ ಆವರಣದಲ್ಲಿ ಸಭಾ ಕಾರ್ಯಕ್ರಮ ಜರುಗಲಿದೆ.

ಶಾಸಕ ಎನ್.ವೈ.ಗೋಪಾಲಕೃಷ್ಣ, ಗ್ರಾಪಂ ಅಧ್ಯಕ್ಷೆ ಟಿ.ನಾಗವೇಣಿ ರವಿಶಂಕರ್. ತಹಸೀಲ್ದಾರ್ ಎಂ.ವಿ.ರೂಪ, ಬಿಇಒ ಇ.ನಿರ್ಮಲಾದೇವಿ ಸೇರಿದಂತೆ ನಾನಾ ಜನಪ್ರತಿನಿಧಿಗಳು ಮತ್ತು ಗಣ್ಯರು ಭಾಗವಹಿಸಲಿದ್ದಾರೆ.

ಸಾಹಿತ್ಯಾಸಕ್ತರು ಹೆಚ್ಚಿನ ಪ್ರಮಾಣದಲ್ಲಿ ಆಗಮಿಸಬೇಕೆಂದು ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ
ಕೆ.ಎಂ.ಶಿವಸ್ವಾಮಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

 

Share This Article
Leave a Comment

Leave a Reply

Your email address will not be published. Required fields are marked *