ವರದಿ ಮತ್ತು ಫೋಟೋ ಕೃಪೆ ಕೆ.ಎಂ.ಮುತ್ತುಸ್ವಾಮಿ ಕಣ್ಣನ್
ಮೊ : 78998 64552
ಸುದ್ದಿಒನ್, ಚಿತ್ರದುರ್ಗ, ನವೆಂಬರ್.21 : ಹಿರಿಯೂರು ತಾಲ್ಲೂಕಿನ ಪಟ್ರೆಹಳ್ಳಿ ಮತ್ತು ಆದಿವಾಲ ಫಾರಂ ಗ್ರಾಮಗಳಲ್ಲಿ ಅಕ್ರಮ ಮದ್ಯ ಮಾರಾಟ ಮಾಡುತ್ತಿರುವುದನ್ನು ನಿಲ್ಲಿಸುವಂತೆ ಒತ್ತಾಯಿಸಿ ಅಂಬೇಡ್ಕರ್ ಸ್ವಾಭಿಮಾನಿ ಸೇನೆ ವತಿಯಿಂದ ಜಿಲ್ಲಾಧಿಕಾರಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ಕಚೇರಿ ಸಹಾಯಕರಿಗೆ ಮನವಿ ಸಲ್ಲಿಸಲಾಯಿತು.
ಪಟ್ರೆಹಳ್ಳಿ ಹಾಗೂ ಆದಿವಾಲ ಫಾರಂ ಗ್ರಾಮಗಳಲ್ಲಿ ಎಂಟುನೂರು ಮನೆಗಳಿದ್ದು, ದಲಿತರೆ ಹೆಚ್ಚಾಗಿ ಕುಡಿತಕ್ಕೆ ಬಲಿಯಾಗುತ್ತಿದ್ದಾರೆ. ದಿನನಿತ್ಯವೂ ಕೂಲಿ ಮಾಡಿ ಬದುಕುವ ಇವರುಗಳು ದುಡಿಮೆಯನ್ನೆಲ್ಲಾ ಕುಡಿತಕ್ಕೆ ಹಾಕಿದರೆ ಕುಟುಂಬದ ಗತಿ ಏನು ಎಂದು ಮಹಿಳೆಯರು ರೋಧಿಸುವಂತಾಗಿದೆ. ಹದಿಮೂರು ಚಿಲ್ಲರೆ ಅಂಗಡಿಗಳಲ್ಲಿ ಮದ್ಯ ಎಗ್ಗಿಲ್ಲದೆ ಮಾರಾಟವಾಗುತ್ತಿದೆ. ಸಾಕಷ್ಟು ಬಾರಿ ಅಬಕಾರಿ ಇಲಾಖೆಗೆ ದೂರು ನೀಡಿದರೂ ಕ್ರಮಕೈಗೊಳ್ಳುತ್ತಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಜಿಲ್ಲಾಧ್ಯಕ್ಷ ಶಿವಕುಮಾರ್ ವಿ. ಗೌರವಾಧ್ಯಕ್ಷ ತಿಪ್ಪೇಸ್ವಾಮಿ, ಗಿರೀಶ್‍ಕುಮಾರ್ ವಿ. ರೇವಣಸಿದ್ದಪ್ಪ, ಮಹಮದ್‍ರಫಿ, ರಾಘವೇಂದ್ರ ಆರ್.
ರವಿಕುಮಾರ್ ಎಸ್. ತಿಪ್ಪೇಶ್, ವಿನೋದ್‍ಕುಮಾರ್, ಮಂಜುನಾಥ್ ಹೆಚ್. ಸಿದ್ದಪ್ಪ, ಹನುಮಂತು, ಶಿವರಾಜ್, ಮ.ಮೋಸಿನ್, ದಾದಾಪೀರ್, ವಿಜಯಕುಮಾರ್, ಸುರೇಶ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಉಪಸ್ಥಿತರಿದ್ದರು.