ಉತ್ತರ ಪ್ರದೇಶ: ಮಕ್ಕಳೆಂದರೆ ಆಟ-ತುಂಟಾಟ ಸಹಜವಲ್ಲವೆ. ಚೇಷ್ಟೇ ಮಾಡೋದು ಕೂಡ ಮಕ್ಕಳ ಗುಣ. ಆದ್ರೆ ಇದಕ್ಕೆ ಕೋಪಗೊಂಡ ಪ್ರಿನ್ಸಿಪಾಲ್ ಒಬ್ಬರು ಮಗುವನ್ನ ಉಲ್ಟಾ ಹಿಡಿದುಕೊಂಡು ಹೆದರಿಸಿದರೆ ಹೇಗೆ..? ಇಂಥದ್ದೊಂದು ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಉತ್ತರ ಪ್ರದೇಶದ ಮಿರ್ಜಾಪುರ ಶಾಲೆಯೊಂದರಲ್ಲಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಅಹ್ರೌರಾದಲ್ಲಿರುವ ಸದ್ಭಾವನಾ ಶಿಕ್ಷಣ ಸಂಸ್ಥಾನದ ಜ್ಯೂನಿಯರ್ ಖಾಸಗಿ ಶಾಲೆಯಲ್ಲಿ ಈ ಘಟನೆ ನಡೆದಿದೆ. 2ನೇ ತರಗತಿ ವಿದ್ಯಾರ್ಥಿ ಸೋನು ಯಾದವ್ ಏನೊಇ ಚೇಷ್ಟೇ ಮಾಡಿದ್ದ ಎಂಬ ಕಾರಣಕ್ಕೆ ಆ ಬಾಲಕನ ಕಾಲನ್ನ ಹಿಡಿದು ಎರಡನೇ ಮಹಡಿಯಲ್ಲಿ ನಿಂತು ಉಲ್ಟಾ ಹಿಡಿದು ಭಯ ಹುಟ್ಟಿಸಿದ್ದಾರೆ.
ಪ್ರಿನ್ಸಿಪಾಲ್ ಮನೋಜ್ ವಿಶ್ವಕರ್ಮ ಈ ರೀತಿ ನಡೆದುಕೊಂಡಿದ್ದು, ಆ ವಿಡಿಯೋ ನೋಡೋದಕ್ಕೆ ಭಯವಾಗುತ್ತೆ. ಆತನ ಸುತ್ತಮುತ್ತ ಮಕ್ಕಳು ನಿಂತಿದ್ದಾರೆ. ಆ ಮಕ್ಕಳ ಮುಖದಲ್ಲೂ ಭಯ ಕಾಣುತ್ತಿದೆ. ಕೆಳಗೆ ಬಿಟ್ಟು ಬಿಡುತ್ತೇನೆ ಎಂದು ಪ್ರಿನ್ಸಿಪಾಲ್ ಭಯ ಹುಟ್ಟಿಸಿದ್ದಾರೆ. ನಾನು ಇನ್ನು ಚೇಷ್ಟೇ ಮಾಡಲ್ಲ ಬಿಟ್ಟು ಬಿಡಿ ಎಂದು ಬೇಡಿಕೊಂಡ ಬಳಿಕ ಪ್ರಿನ್ಸಿಪಾಲ್ ಬಾಲಕನನ್ನ ಮೇಲೆತ್ತಿದ್ದಾರೆ. ಸದ್ಯ ಜಿಲ್ಕಾಧಿಕಾರಿ ಆ ಪ್ರಿನ್ಸಿಪಾಲ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಮುಂದಾಗಿದ್ದಾರೆ.