Warning: Undefined array key "options" in /home/nagendra/public_html/content/plugins/elementor-pro/modules/theme-builder/widgets/site-logo.php on line 124

ನ್ಯಾಯವಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯ ಪ್ರವೇಶ ಮಾಡಬೇಕು : ಡಾ.ಬಿ. ತಿಪ್ಪೇಸ್ವಾಮಿ

Facebook
Twitter
Telegram
WhatsApp

 

 

ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817

ಸುದ್ದಿಒನ್, ಚಿತ್ರದುರ್ಗ. ನ.18 : ಈ ಹಿಂದೆ ನ್ಯಾಯವಾದಿಗಳಾದವರು ಹೆಚ್ಚಿನ ಸಂಖ್ಯೆಯಲ್ಲಿ ರಾಜಕೀಯಕ್ಕೆ ಬರುತ್ತಿದ್ದರು, ಅವರು ಕಾನೂನು ತಿಳಿದುಕೊಂಡಿರುವುದರಿಂದ ಉತ್ತಮವಾದ ಆಡಳಿತವನ್ನು ನೀಡಲು ಸಹಕಾರಿಯಾಗುತ್ತಿತ್ತು. ಆದರೆ ಇತ್ತಿಚಿನ ದಿನಮಾನದಲ್ಲಿ ನ್ಯಾಯವಾದಿಗಳು ರಾಜಕೀಯಕ್ಕೆ ಬರುವ ಸಂಖ್ಯೆ ಕಡಿಮೆಯಾಗುತ್ತಿದೆ ಎಂದು ಕಾಂಗ್ರೆಸ್ ಮುಖಂಡ, 2024ರ ಲೋಕಸಭೆ ಚುನಾವಣೆ ಟಿಕೇಟ್ ಆಕಾಂಕ್ಷಿ ಡಾ.ಬಿ. ತಿಪ್ಪೇಸ್ವಾಮಿ ಕಳವಳ ವ್ಯಕ್ತಪಡಿಸಿದ್ದಾರೆ.

ನಗರದ ವಕೀಲರ ಸಂಘದ ಆಶ್ರಯದಲ್ಲಿ ನಡೆದ ಶಾರದ ಪೂಜಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಹಿಂದೆ ಕಾನೂನನ್ನು ತಿಳಿದಿರುವ ನ್ಯಾಯವಾದಿಗಳು ರಾಜಕೀಯದಲ್ಲಿ ಆಸಕ್ತಿಯನ್ನು ಹೊಂದುವುದರ ಮೂಲಕ ರಾಜಕೀಯವನ್ನು ಪ್ರವೇಶ ಮಾಡುತ್ತಿದ್ದರು. ಇದರಿಂದ ಅಧಿಕಾರಿಗಳಿಗೆ ಕಾನೂನಿನ ಬಗ್ಗೆ ತಿಳಿಸಿ ಜನತೆ ಸರಿಯಾದ ರೀತಿಯಲ್ಲಿ ಸಹಾಯವನ್ನು ಮಾಡುತ್ತಿದ್ದರು ಈಗಲೂ ಸಹಾ ರಾಜಕೀಯದಲ್ಲಿ ಹಲವಾರು ಜನ ನ್ಯಾಯವಾದಿಗಳು ಇದ್ದಾರೆ ಆದರೆ ಕಡಿಮೆ ಸಂಖ್ಯೆಯಲ್ಲಿದ್ದಾರೆ ಇದರ ಪ್ರಮಾಣ ಹೆಚ್ಚಾಗಬೇಕಿದೆ. ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಗಳಲ್ಲಿ ಸ್ಪರ್ದೆ ಮಾಡುವುದರ ಮೂಲಕ ಜನ ಸೇವೆಯನ್ನು ಮಾಡಬೇಕಿದೆ.

ಇದಲ್ಲದೆ ವಿಧಾನಸಭೆ, ಮತ್ತು ಲೋಕಸಭೆಗಳಲ್ಲಿಯೂ ಸಹಾ ಚುನಾವಣೆಯಲ್ಲಿ ಸ್ಫರ್ದೆಯನ್ನು ಮಾಡಬೇಕಿದೆ ಎಂದ ಅವರು 2024ರ ಲೋಕಸಭಾ ಚುನಾವಣೆಯಲ್ಲಿ ನಾನು ಕಾಂಗ್ರೆಸ್ ಪಕ್ಷದಿಂದ ಸ್ಪರ್ದೆ ಮಾಡುತ್ತೇನೆ. ಈ ಹಿನ್ನಲೆಯಲ್ಲಿ ನಿಮ್ಮ ಬೆಂಬಲ ನನಗೆ ಇರಬೇಕೆಂದು ಮನವಿ ಮಾಡಿದರು.

ವಕೀಲರ ಸಂಘದ ಅಧ್ಯಕ್ಷರಾದ ತಿಪ್ಪೇಸ್ವಾಮಿ ಮಾತನಾಡಿ, ಚಿತ್ರದುರ್ಗ ಲೋಕಸಭೆಗೆ ಇದುವರೆವಿಗೂ ಹೂರಗಿನಿಂದ ಬಂದವರು ಆಯ್ಕೆಯಾಗುವುದರ ಮೂಲಕ ರಾಜಕೀಯವನ್ನು ಮಾಡುತ್ತಿದ್ದಾರೆ. ಇವರಿಂದ ಚಿತ್ರದುರ್ಗ ಜಿಲ್ಲೆ ಯಾವ ಅಭಿವೃದ್ದಿಯನ್ನು ಕಂಡಿಲ್ಲ, ಅಯ್ಕೆಯಾದಾಗ ಮಾತ್ರ ಮತದಾರರ ಕೈಗೆ ಸಿಗುವ ಸಂಸತ್ ಸದಸ್ಯರು ಮತ್ತೇ ಇತ್ತ ಕಡೆ ಬರುವುದೇಲ್ಲಾ, ಈ ರೀತಿಯಾದರೆ ಅಭೀವೃದ್ದಿ ಯಾವ ರೀತಿ ಆಗುತ್ತದೆ ಎಂದು ಪೃಶ್ನಿಸಿದ ಅವರು, ಈ ಭಾರಿ ನಮ್ಮಮ ಚಿತ್ರದುರ್ಗದವರೆ ಆದ ಡಾ.ಬಿ.ತಿಪ್ಪೇಸ್ವಾಮಿಯವರು ಲೋಕಸಭಾ ಚುನಾವಣೆಯಲ್ಲಿ ಸ್ಫರ್ದಿಸುವ ಇಂಗಿತವನ್ನು ವ್ಯಕ್ತಪಡಿಸಿದ್ದು ಕಾಂಗ್ರೆಸ್ ಪಕ್ಷದಿಂದ ಟಿಕೇಟ್ ತರುವ ಪ್ರಯತ್ನದಲ್ಲಿದ್ದಾರೆ. ಅವರೇನಾದರೂ ಕಾಂಗ್ರಸ್ ಪಕ್ಷದಿಂದ ಟಿಕೇಟ್ ತಂದರೆ ಅವರಿಗೆ ವಕೀಲರ ಸಂಘ ಪೂರ್ಣ ಪ್ರಮಾಣದಲ್ಲಿ ಬೆಂಬಲವನ್ನು ನೀಡುವುದಾಗಿ ಭರವಸೆ ನೀಡಿದರು.

ಇದೇ ಸಂದರ್ಭದಲ್ಲಿ ನ್ಯಾಯವಾದಿಗಳಾದ ಮಾಲತೇಶ್ ಆರಸ್, ದಯಾನಂದ, ಪ್ರತಾಪ್ ಜೋಗಿ, ಆಶೋಕ ಬೆಳಗಟ್ಟ ಸೇರಿದಂತೆ ಇತರರು ಮಾತನಾಡಿದರು.

ವಕೀಲರ ಸಂಘದ ಉಪಾಧ್ಯಕ್ಷರಾದ ಅನಿಲ್‍ಕುಮಾರ್, ಖಂಜಾಚಿ ಪ್ರದೀಪ್ ಸಹಕಾರ್ಯದರ್ಶಿ ಗೀರೀಶ್ ಉಪಸ್ಥಿತರಿದ್ದರು.

Facebook
Twitter
Telegram
WhatsApp
suddionenews

suddionenews

Leave a Comment

Top Stories

ಹೆಚ್.ಡಿ ರೇವಣ್ಣ ಜೈಲಿನಿಂದ ಬಿಡುಗಡೆ : ಲಾಠಿಚಾರ್ಜ್ ಮಾಡಿದ ಪೊಲೀಸರು..!

    ಬೆಂಗಳೂರು: ಪ್ರಜ್ವಲ್ ರೇವಣ್ಣ ಅವರ ಅಶ್ಲೀಲ ವಿಡಿಯೋಗಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋದಲ್ಲಿದ್ದ ಮಹಿಳೆಯನ್ನು ಕಿಡ್ನ್ಯಾಪ್ ಮಾಡಿದ್ದ ಕೇಸ್ ಗೆ ಸಂಬಂಧಿಸಿದಂತೆ ರೇವಣ್ಣ ಅವರನ್ನು ಬಂಧಿಸಲಾಗಿತ್ತು. ಕಳೆದ ಎರಡು ವಾರದಿಂದ ರೇವಣ್ಣ ಅವರು

ರಕ್ತ ನೋಡಿದ ಭಯಕ್ಕೆ ಸ್ಟ್ರೋಕ್ ಆಗಿ ನಟಿ ಪವಿತ್ರಾ ಸಾವು : ಜೊತೆಗಿದ್ದ ನಟ ಹೇಳಿದ್ದೇನು..?

ಭವಿಷ್ಯದಲ್ಲಿ ಒಳ್ಳೆಯ ಪೋಷಕ ನಟಿಯಾಗುವ ಎಲ್ಲಾ ಲಕ್ಷಣವನ್ನು ಹೊತ್ತುಕೊಂಡಿದ್ದವರು ಪವಿತ್ರಾ ಜಯರಾಂ. ಅದರಲ್ಲೂ ಸೀರಿಯಲ್ ನ ಖಳನಟಿಗೆ ಹೇಳಿ ಮಾಡಿಸಿದಂತಿದ್ದರು‌. ತ್ರಿಯನಿ ಧಾರಾವಾಹಿಯಲ್ಲಿ ಖಳನಟಿಯಾಗಿ ಎಲ್ಲರ ಮನಸ್ಸು ಗೆದ್ದಿದ್ದರು. ಆದರೆ ಅವರು ಕಾರು ಅಪಘಾತದಿಂದ

CBSC 12ನೇ ತರಗತಿಯಲ್ಲಿ ಬೆಂಗಳೂರಿನ ಟ್ಯಾಂಕರ್ ಚಾಲಕನ ಮಗಳ ಸಾಧನೆ ಹೇಗಿದೆ ಗೊತ್ತಾ..?

ಬೆಂಗಳೂರು: ಸಿಬಿಎಸ್ಸಿ ಸಿಲಬಸ್ ನ ಸೆಕೆಂಡ್ ಪಿಯುಸಿ ರಿಸಲ್ಟ್ ನಿನ್ನೆ ಘೋಷಣೆಯಾಗಿದೆ. ಆದರೆ ಕಳೆದ ಬಾರಿಗಿಂತ ಈ ಬಾರಿ ಬೆಂಗಳೂರಿನಲ್ಲೂ ಫಲಿತಾಂಶ ಕಡಿಮೆ ಬಂದಿದೆ. ಅದರಲ್ಲಿ ಟ್ಯಾಂಕರ್ ಚಾಲಕನ ಮಗಳು ಅತ್ಯುತ್ತಮ ಅಂಕ ಪಡೆದಿರುವುದು

error: Content is protected !!