ಸುದ್ದಿಒನ್ : ಇತ್ತೀಚಿನ ದಿನಗಳಲ್ಲಿ ನೀರಿನ ಬಾಟಲಿಗಳ ಬಳಕೆ ಹೆಚ್ಚಾಗಿದೆ. ಪ್ರಯಾಣ ಮಾಡುವಾಗ, ಸಭೆ ಸಮಾರಂಭಗಳಲ್ಲಿ ನಾವು ನೀರಿನ ಬಾಟಲಿಗಳನ್ನು ಖರೀದಿಸುತ್ತೇವೆ. ಆದರೆ ನಮಗೆ ಕಾಣುವ ನೀರಿನ ಬಾಟಲಿಗಳಲ್ಲಿ ಹೆಚ್ಚಿನವು ನೀಲಿ ಬಣ್ಣದ ಮುಚ್ಚಳ (ಕ್ಯಾಪ್) ಇರುವವುಗಳಾಗಿವೆ.
ಹಾಗಾದರೆ ನೀರಿನ ಬಾಟಲ್ ಕ್ಯಾಪ್‌ಗಳಿಗೆ ನೀಲಿ ಬಣ್ಣದ ಕ್ಯಾಪ್‌ಗಳನ್ನು ಏಕೆ ಬಳಸಲಾಗುತ್ತದೆ ? ಇದರ ಹಿಂದಿನ ಅರ್ಥವೇನು? ಈಗ ಪ್ರತಿಯೊಂದು ಬಣ್ಣದ ಅರ್ಥವನ್ನು ತಿಳಿಯೋಣ.
ನೀರಿನ ಬಾಟಲಿಯ ಮೇಲೆ ನೀಲಿ ಬಣ್ಣದ ಕ್ಯಾಪ್ ಇದ್ದರೆ ಖನಿಜಯುಕ್ತ(Mineral Water) ನೀರನ್ನು ಸೂಚಿಸುತ್ತದೆ. ಈ ನೀಲಿ ಕ್ಯಾಪ್ ನೀರಿನ ಬಾಟಲಿಗಳಲ್ಲಿನ ನೀರು ಖನಿಜಯುಕ್ತ ನೀರು ಎಂದು ಹೇಳಲಾಗುತ್ತದೆ.
ಇನ್ನು ಕೆಲವು ಬಾಟಲಿಗಳಿಗೆ ಬಿಳಿ ಮತ್ತು ಹಸಿರು ಬಣ್ಣಗಳ ಕ್ಯಾಪ್ ಗಳಿರುವುದು ಕಂಡು ಬರುತ್ತದೆ. ಆದರೆ ಇದರರ್ಥ ಹಸಿರು ಬಣ್ಣದ ಮುಚ್ಚಳವಿದ್ದರೆ ( ಕ್ಯಾಪ್) ಬಾಟಲಿಯ ನೀರಿಗೆ ಹೆಚ್ಚುವರಿ ರುಚಿಗಳನ್ನು (Added minerals) ಸೇರಿಸಲಾಗಿದೆ. ಕೆಲವು ನೀರಿನ ಬಾಟಲ್ ಕಂಪನಿಗಳು ನೀರಿನ ಜೊತೆಗೆ ಎಲೆಕ್ಟ್ರೋಲೈಟ್‌ಗಳಂತಹ ರುಚಿಗಳನ್ನು ಸೇರಿಸುತ್ತವೆ. ಅಂತಹ ನೀರಿನ ಬಾಟಲಿಗಳ ಮೇಲಿನ ಕವರ್ ಅನ್ನು ನೀವು ನೋಡಿದರೆ, ನಿಮಗೆ ಇದು ಸ್ಪಷ್ಟವಾಗಿ ಅರ್ಥವಾಗುತ್ತದೆ. ನೀರಿಗೆ ಸೇರಿಸಲಾದ ಸುವಾಸನೆಗಳನ್ನು (Flavors) ಅದರಲ್ಲಿ ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ.
ಕೆಲವು ನೀರಿನ ಬಾಟಲಿಗಳು ಕೆಂಪು, ಹಳದಿ, ಕಪ್ಪು ಮತ್ತು ಗುಲಾಬಿ ಬಣ್ಣದ ಮುಚ್ಚಳ (ಕ್ಯಾಪ್) ಹೊಂದಿರುತ್ತವೆ. ಕೆಂಪು ಬಣ್ಣದ ಕ್ಯಾಪ್ ಹೊಂದಿರುವ ನೀರಿನ ಬಾಟಲಿಗಳು ಕಾರ್ಬೊನೇಟೆಡ್ ನೀರನ್ನು ಹೊಂದಿರುತ್ತವೆ ಎಂದು ತಿಳಿಯಬೇಕು. ಹಳದಿ ಬಣ್ಣದ ಕ್ಯಾಪ್ ಹೊಂದಿರುವ ನೀರಿನ ಬಾಟಲಿಯು ವಿಟಮಿನ್ ಗಳು ಮತ್ತು ಎಲೆಕ್ಟ್ರೋಲೈಟ್ಗಳನ್ನು ಹೊಂದಿರುತ್ತದೆ ಎಂದು ತಿಳಿಯಬೇಕು. ನೀರಿನಲ್ಲಿರುವ ವ್ಯತ್ಯಾಸವನ್ನು ತಿಳಿಸಲು ಕ್ಯಾಪ್‌ಗಳಿಗೆ ಬೇರೆ ಬಣ್ಣವನ್ನು ನಿಗದಿಪಡಿಸಲಾಗಿದೆ.
ಕಪ್ಪು ಬಣ್ಣದ ಕ್ಯಾಪ್ ಇದ್ದರೆ ಈ ಬಾಟಲಿಯಲ್ಲಿ ಕ್ಷಾರೀಯ ನೀರು (Wlkaline Water) ಇದೆ ಎಂದು ಅರ್ಥಮಾಡಿಕೊಳ್ಳಬೇಕು. ಕಪ್ಪು ಬಣ್ಣದ ಕ್ಯಾಪ್ ಇರುವ ನೀರಿನ ಬಾಟಲಿಗಳು ಬಹಳ ಅಪರೂಪ. ಇವುಗಳನ್ನು ಪ್ರೀಮಿಯಂ ನೀರಿನ ಉತ್ಪನ್ನಗಳಿಗೆ ಮಾತ್ರ ಬಳಸಲಾಗುತ್ತದೆ. ಹೆಚ್ಚಾಗಿ ಸೆಲೆಬ್ರಿಟಿಗಳು ಈ ನೀರನ್ನು ಕುಡಿಯುತ್ತಾರೆ. ಪಿಂಕ್ ಕಲರ್ ಕ್ಯಾಪ್ ಇರುವ ನೀರಿನ ಬಾಟಲಿಗಳ ಬಗ್ಗೆ ಹೇಳುವುದಾದರೆ, ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಅನೇಕ ಚಾರಿಟಿಗಳು ಇದೇ ರೀತಿಯ ಕ್ಯಾಪ್ ಗಳನ್ನು ಬಳಸುತ್ತವೆ.