ವರದಿ ಮತ್ತು ಫೋಟೋ ಕೃಪೆ
ಸುರೇಶ್ ಪಟ್ಟಣ್,
ಮೊ : 98862 95817
ಸುದ್ದಿಒನ್, ಚಿತ್ರದುರ್ಗ. (ನ.11) : ಸದಾಶಿವ ಆಯೋಗ ನೀಡಿರುವ ವರದಿಯನ್ನು ಮುಂಬರುವ ಬೆಳಗಾವಿ ಆಧಿವೇಶನದಲ್ಲಿ ಮಂಡಿಸಿ, ಚರ್ಚಿಸಿ, ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ಕೋಡಿಹಳ್ಳಿಯ ಆದಿಜಾಂಬವ ಗುರುಪೀಠದ ಶ್ರೀ ಷಡಾಕ್ಷರಮುನಿದೇಶಿಕೇಂದ್ರ ಶ್ರೀಗಳು ಸರ್ಕಾರವನ್ನು ಒತ್ತಾಯಿಸಿದ್ದಾರೆ.
ನಗರದ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷ ಚುನಾವಣೆಯ ಪ್ರನಾಳಿಕೆಯಲ್ಲಿ ನಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಸದಾಶಿವ ಆಯೋಗದ ವರದಿಯನ್ನು ಜಾರಿ ಮಾಡುವುದಾಗಿ ತಿಳಿಸಿತ್ತು ಅದರಂತೆ ಕಳೆದ ವಿಧಾನಸಭೆಯ ಅಧಿವೇಶನದಲ್ಲಿ ಸರ್ಕಾರ ಈ ವರದಿಯನ್ನು ಮಂಡಿಸಿಲ್ಲ, ಇದರ ಬಗ್ಗೆ ಮುಖ್ಯಮಂತ್ರಿಗಳ ಗಮನವನ್ನು ಸೆಳೆಯುವುದರ ಮೂಲಕ ವರದಿ ಜಾರಿಗೆ ಒತ್ತಾಯವನ್ನು ಮಾಡಲಾಗಿತ್ತು. ಈ ಹಿನ್ನಲೆಯಲ್ಲಿ ಮುಂದಿನ ದಿನದಲ್ಲಿ ಬೆಳಗಾವಿಯಲ್ಲಿ ನಡೆಯುವ ವಿಧಾನಸಭೆಯ ಆಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ಮಂಡಿಸಿ ಅದರ ಬಗ್ಗೆ ಚರ್ಚೆಯನ್ನು ನಡೆಸಿ ವರದಿಯನ್ನು ಬಹಿರಂಗ ಪಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡುವಂತೆ ಆಗ್ರಹಿಸಿದರು.
ರಾಜ್ಯ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಸದಾಶಿವ ಆಯೋಗದ ವರದಿಯನ್ನು ಮಂಡಿಸದಿದ್ದರೆ ಇದರ ಬಗ್ಗೆ ಸಮಾಜದ ಬಾಂಧವರು, ಚುನಾಯಿತ ಪ್ರತಿನಿಧಿಗಳೊಂದಿಗೆ ಸಭೆಯನ್ನು ಕರೆದು ಚರ್ಚೆಯನ್ನು ಮಾಡುವುದರ ಮೂಲಕ ಮುಂದಿನ ತೀರ್ಮಾನವನ್ನು ತೆಗೆದುಕೊಳ್ಳಲಾಗುವುದು ಎಂದ ಶ್ರೀಗಳು, ಈ ಅಧಿವೇಶನದಲ್ಲಿಯೇ ವರದಿಯನ್ನು ಮಂಡಿಸುವ ಬಗ್ಗೆ ಮುಖ್ಯಮಂತ್ರಿಗಳು ಭರವಸೆಯನ್ನು ನೀಡಿದ್ದಾರೆ. ವರದಿಯನ್ನು ಬಹಿರಂಗ ಪಡಿಸಿಯೇ ಅನುಷ್ಠಾನ ಮಾಡಬೇಕಿದೆ ಯಾವುದೇ ಕಾರಣಕ್ಕೂ ಚರ್ಚೆ ಮಾಡದೇ ಬಹಿರಂಗ ಗೊಳಿಸದೇ ವರದಿಯನ್ನು ಅನುಷ್ಠಾನ ಮಾಡಬಾರದೆಂದು ಶ್ರೀಗಳು ತಿಳಿಸಿದರು.
ಈ ವರದಿ ಜಾರಿಗಾಗಿ ಕಳೆದ 30 ವರ್ಷಗಳಿಂದ ಹೋರಾಟವನ್ನು ಮಾಡಲಾಗುತ್ತಿದೆ. ಮಾದಿಗ ಜನಾಂಗ ಬಹಳ ಹಿಂದೆ ಉಳಿದಿದೆ, ಅರ್ಥಿಕವಾಗಿ, ಶೈಕ್ಷಣಿಕವಾಗಿ, ಸಾಮಾಜಕವಾಗಿ ಹಿಂದುಳಿದ್ದಾರೆ. ಇವರ ಪ್ರಗತಿಗೆ ಈ ವರದಿ ಅಗತ್ಯವಾಗಿದೆ. ಈ ಹಿನ್ನಲೆಯಲ್ಲಿ ಸದಾಶಿವ ಆಯೋಗದ ವರದಿ ಅನುಷ್ಠಾನ ಅಗತ್ಯವಾಗಿದೆ ಎಂದ ಶ್ರೀಗಳು, ಇದೇ ಸಂದರ್ಭದಲ್ಲಿ ಕಾಂತರಾಜ್‍ರವರ ವರದಿಯನ್ನು ಸಹಾ ಅನುಷ್ಠಾನವನ್ನು ಬಹಿರಂಗ ಮಾಡಬೇಕಿಂದೆ ಸದಾಶಿವ ಆಯೋಗ ವರದಿ ಜಾರಿಯಾದರೆ ಬೇರೆ ನಮ್ಮ ಸಹೋದರ ಜಾತಿಯವರು ಆತಂಕ ಪಡುವ ಅಗತ್ಯ ಇಲ್ಲ ಇದರ ಜಾರಿಯಿಂದ ಯಾರಿಗೂ ಸಹಾ ಅನ್ಯಾಯವಾಗುವುದಿಲ್ಲ ಎಲ್ಲರನ್ನು ಜೊತೆಗೆ ತೆಗೆದುಕೊಂಡು ಹೋಗುವ ವರದಿ ಇದಾಗಿದೆ ಎಂದು ಷಡಾಕ್ಷರಮುನಿ ಶ್ರೀಗಳು ತಿಳಿಸಿದರು.
ಸಮಾಜದ ಮುಖಂಡರಾದ ತಿಪ್ಪೇಸ್ವಾಮಿ ಮಾತನಾಡಿ, ಸದಾಶಿವ ಆಯೋಗ ವರದಿ ಜಾರಿ ಮಾಡಲು ಸಚಿವರಾದ ಮುನಿಯಪ್ಪರವರು ರಾಜೀನಾಮೆಯನ್ನು ನೀಡುವಂತೆ ಒಂದು ಸಮುದಾಯ ಒತ್ತಾಯ ಮಾಡಿರುವುದು ಸರಿಯಲ್ಲ ತಮ್ಮ ಜನಾಂಗದವರು ಮುಂದೆ ಬರುಲು ಸಹಾಯವಾಗುವುದಕ್ಕೆ ಈ ವರದಿ ಕಾರಣವಾಗಿದೆ ಈ ಹಿನ್ನಲೆಯಲ್ಲಿ ಜಾರಿಗೆ ಆಗ್ರಹಿಸಿದ್ದಾರೆ ಇದನ್ನು ತಪ್ಪಾಗಿ ಅರ್ಥೈಸಿಕೊಂಡಿರುವ ನಮ್ಮ ಸಹೋದರ ಸಮುದಾಯದವರು ಜಾರಿಗೆ ಅಡ್ಡಿ ಮಾಡುತ್ತಿರುವುದು ಸರಿಯಲ್ಲ ಎಂದರು.
ಸದಾಶಿವ ಆಯೋಗದ ವರದಿ ಅನುಷ್ಠಾನಕ್ಕೆ ಮೂರು ಪಕ್ಷಗಳು ಸಮ್ಮತಿಸಿದೆ, ಆದರೆ ನಮ್ಮ ಸಹೋದರ ಸಮುದಾಯವರು ಅಡ್ಡಿ ಮಾಡುತ್ತಿರುವುದು ಸರಿಯಲ್ಲ, ವರದಿ ಇನ್ನು ಬಹಿರಂಗಗೊಂಡಿಲ್ಲ ಪರಿಶಿಷ್ಟ ಜಾತಿಯಿಂದ ನಮ್ಮನ್ನು ಹೂರಗಿಡುತ್ತಾರೆ ಎಂಬ ಮಾಹಿತಿ ಬಂದಿದ್ದು ಎಲ್ಲಿಂದ ಎಂದು ಗೋತ್ತಾಗಿಲ್ಲ ಇದೆಲ್ಲ ಉಹಾ-ಪೋಹಾವಾಗಿದೆ ಇಲ್ಲಿ ಯಾರನ್ನು ಸಹಾ ಬಿಡುವ ಮಾತಿಲ್ಲ, ಪರಿಶಿಷ್ಟ ಜಾತಿಯ 101 ಜಾತಿಯವರನ್ನು ಸಹಾ ಜೊತೆಯಲ್ಲಿ ತೆಗೆದುಕೊಂಡು ಹೋಗುವ ಕಾರ್ಯ ಇದಾಗಿದೆ ಎಂದು ತಿಳಿಸಿದರು.
ಗೋಷ್ಟಿಯಲ್ಲಿ ರಾಜಣ್ಣ, ರವಿ, ಸಮರ್ಥ ಭಾಗವಹಿಸಿದ್ದರು.